ಬೆಂಗಳೂರು: ಹೊಸ ಉಪಕ್ರಮಗಳು, ವಿನೂತನ ವಿನ್ಯಾಸದ ಟರ್ಮಿನಲ್ 2 ಸೇರಿದಂತೆ ತನ್ನ ಕಾರ್ಯ ವೈಖರಿಯಿಂದಲೇ ಅನೇಕ ಪ್ರಶಸ್ತಿಗಳಿಗೆ ಭಾಜನವಾದ ಹೆಮ್ಮೆಯ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) 2024ರಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇತಿಹಾರದಲ್ಲೇ ಮೊದಲ ಭಾರಿಗೆ ಪ್ರಯಾಣಿಕರ ಸೇವೆಯಲ್ಲಿ ದಾಖಲೆ ನಿರ್ಮಿಸಿದೆ.
ಬೆಂಗಳೂರು ಏರ್ಪೋರ್ಟ್ ಒಂದೇ ವರ್ಷದಲ್ಲಿ ಅತ್ಯಧಿಕ ಪ್ರಯಾಣಿಕರಿಗೆ ಸೇವೆ ನೀಡಿದೆ. ಕಳೆದ ಒಂದು ವರ್ಷ 2024 ರಲ್ಲಿ 40 ಮಿಲಿಯನ್ ಪ್ರಯಾಣಿಕರ ಗಡಿ ದಾಟಿದೆ. ಒಂದೇ ವರ್ಷದಲ್ಲಿ 40.73 ಮಿಲಿಯನ್ ಪ್ರಯಾಣಿಕರಿಗೆ ವಿಮಾನ ಸೇವೆ ಮಾಡಿದೆ. ಇದರಿಂದ ಅತ್ಯಧಿಕ ಪ್ರಮಾಣದ ಆದಾಯವು ಗಳಿಕೆ ಮಾಡಿದೆ. 2024ರಲ್ಲಿ ಬೆಂಗಳೂರು ಏರ್ಪೋರ್ಟ್ ಮೂಲಕ ಹಾರಾಟ ನಡೆಸಿದ ಪ್ರಯಾಣಿಕರ ಸಂಖ್ಯೆ ಬರೊಬ್ಬರಿ ಶೇ. 09ರಷ್ಟು ಹೆಚ್ಚಾಗಿದೆ.
ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ನ (ACI) ನೀಡಿರುವ ಮಾಹಿತಿ ಪ್ರಕಾರ, ಒಂದೇ ವರ್ಷಕ್ಕೆ ಭಾರೀ ಪ್ರಮಾಣದ ಪ್ರಯಾಣಿಕ ಸಾಗಾಣೆ ಮಾಡಿದ ವಿಶ್ವದ ಪ್ರಮುಖ ಏರ್ಪೋರ್ಟ್ಗಳಲ್ಲಿ ಬೆಂಗಳೂರು ‘ದೊಡ್ಡ ವಿಮಾನ ನಿಲ್ದಾಣ’ವಾಗಿದೆ ಎಂದು ತಿಳಿಸಿದೆ.
ಬೆಂಗಳೂರು ಏರ್ಪೋರ್ಟ್ ಅನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನಿರ್ವಹಣೆ ಮಾಡುತ್ತಿದೆ. ಅದರ ಪ್ರಕಾರ, 2023 ರಲ್ಲಿ 37.2 ಮಿಲಿಯನ್ ಪ್ರಯಾಣಿಕರಿಗೆ ಸೇವೆ ನೀಡಲಾಗಿತ್ತು. ಈ ವರ್ಷ ಅದು 40 ಮಿಲಿಯನ್ ದಾಟಿದೆ. ಇದು ವಿಮಾನಯಾನ ಸೇವೆ, ವಿಮಾನಯಾನ ಬಳಕೆದಾರರ ಹೆಚ್ಚಳವನ್ನು ಸೂಚಿಸುತ್ತಿದೆ. ಅಲ್ಲದೇ, ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳ ವರ್ಧನೆಯನ್ನು ಸೂಚಿಸುತ್ತದೆ ಎಂದು ಬಿಐಎಎಲ್ ಅಭಿಪ್ರಾಯಪಟ್ಟಿದೆ.
KIA: ಅಕ್ಟೋಬರ್ 20ಕ್ಕೆ ಅತ್ಯಧಿಕ ದಟ್ಟಣೆ ಅತ್ಯಧಿಕ ಪ್ರಯಾಣಿಕರ ಓಡಾಟಕ್ಕೆ ಸಾಕ್ಷಿಯಾದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2024ರ ಅಕ್ಟೋಬರ್ 20 ರಂದು ಒಂದೇ ದಿನದಲ್ಲಿ ವ್ಯಾಪಕ ಪ್ರಯಾಣಿಕರ ದಟ್ಟಣೆಯನ್ನು ಎದುರಿಸಿತು. ಇದು ಆ ವರ್ಷದಲ್ಲೇ ಒಂದು ದಿನದ ದಾಖಲೆ ಪ್ರಯಾಣಿಕರ ಸಂಖ್ಯೆ ಎನ್ನಬಹುದು. ವರ್ಷಾಂತ್ಯಕ್ಕೆ ದೇಶಿ, ವಿದೇಶಿ ವಿಮಾನಯಾನ ಆ ಒಂದು ದಿನ ಏರ್ಪೋರ್ಟ್ನಲ್ಲಿ 1,26,532 ಪ್ರಯಾಣಿಕರು ಸೇವೆ ಪಡೆದಿದ್ದಾರೆ. ವರ್ಷಾಂತ್ಯಕ್ಕೆ (ಡಿ.31) ವಿಮಾನ ನಿಲ್ದಾಣದಿಂದ 75 ದೇಶೀಯ ಹಾಗೂ 30 ಅಂತಾರಾಷ್ಟ್ರೀಯ ಮಾರ್ಗಗಳಿಗೆ ಸೇವೆ ನೀಡಲಾಯಿತು. ಇದರಲ್ಲಿ 11 ದೇಶಿಯ ಹೊಸ ಮಾರ್ಗಗಳು, ನಾಲ್ಕು ವಿದೇಶಿ ಮಾರ್ಗಗಳು ಇವೆ ಎಂದು ವರದಿ ಆಗಿದೆ.
ದೇಶೀಯ ಮಾರ್ಗಗಳಾದ ಅಯೋಧ್ಯೆ, ಐಜ್ವಾಲ್, ದಿಯೋಘರ್ ಮತ್ತು ನಾಂದೇಡ್ ಮಾರ್ಗಗಳು ಇವೆ. ಬೆಂಗಳೂರಿನಿಂದ ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಹಾಗೂ ಪುಣೆ ನಗರಗಳಿಗೆ ಅತ್ಯಧಿಕ ದೇಶಿ ಮಾರ್ಗಗಳಲ್ಲಿ ಸಂಚಾರ ನಡೆದಿದೆ. ಇಲ್ಲಿಂದ ವಿದೇಶಿ ಮಾರ್ಗಗಳನ್ನು ನೋಡುವುದಾದರೆ, ದುಬೈ, ಸಿಂಗಾಪುರ, ದೋಹಾ, ಅಬುಧಾಬಿ ಮತ್ತು ಲಂಡನ್ ಗಳಿಗೆ ಹೆಚ್ಚಿನ ವಿಮಾನಗಳು ಸೇವೆ ನೀಡಿವೆ. ಇಂಡಿಗೋ ಏರ್ಲೈನ್ಸ್ ಪ್ರಗತಿ ಪ್ರಯಾಣಿಕರಿಗೆ ಹೆಚ್ಚು ಹತ್ತಿರದ ಏರ್ಲೈನ್ಸ್ಗಳಲ್ಲಿ ಒಂದಾಗಿರುವ ಇಂಡಿಗೋ ಏರ್ಲೈನ್ಸ್ ಬೆಂಗಳೂರು ಏರ್ಪೋರ್ಟ್ನಿಂದ ವಾರಕ್ಕೆ 46 ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಮಾಡುವ ಮೂಲಕ ಕಳೆದ ವರ್ಷ ಮಹತ್ವದ ಬೆಳವಣಿಗೆ ಸಾಧಿಸಿದೆ. ಸರಕು ಸಾಗಾಣೆಯಲ್ಲಿ 2024ರಲ್ಲಿ ಬೆಂಗಳೂರು ಏರ್ಪೋರ್ಟ್ ಮಹತ್ವ ಪ್ರಗತಿ ಸಾಧಿಸಿದೆ.