ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ನಿವಾಸಿಗಳಿಗೆ ಕಸದ ಸೆಸ್ ವಿಧಿಸಿದ್ದು, ಅದನ್ನು ಆಸ್ತಿ ತೆರಿಗೆ ಜೊತೆಗೆ ಪಾವತಿಸಬೇಕಿದೆ. ಇದರ ಬೆನ್ನಲ್ಲೆ ಹೊಸ ಆರ್ಥಿಕ ಎದುರಾದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿದಾರರಿಗೆ ಮೂರು ದಿನಗಳವರೆಗೆ ತೆರಿಗೆ ಪಾವತಿ ಬಂದ್ ಮಾಡಲಾಗಿದೆ. ಕೊನೆಯ ಕ್ಷಣದ ಬದಲಾವಣೆಗಳಿಂದಾಗಿ ಬಿಬಿಎಂಪಿಯು ಮುಂದಿನ 48 ಗಂಟೆ ನಂತರ ಎಂದಿನಂತೆ ಸೆಸ್, ಆಸ್ತಿ ತೆರಿಗೆ ಎರಡು ಸೇರಿಸಿ ಪಾವತಿಸಿಕೊಳ್ಳಲಿದೆ.

ಬಿಬಿಎಂಪಿ ಅಧಿಕಾರಿಗಳು ತೆರಿಗೆ ಲೆಕ್ಕಾಚಾರದ ವಿಧಾನದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದೆ. ಈ ಕಾರಣದಿಂದಾಗಿ ತೆರಿಗೆ ಪಾವತಿ ಆನ್ಲೈನ್ ವಿಧಾನವನ್ನು ಮೂರು ದಿನ ಸ್ಥಗಿತಗೊಳಿಸಿದೆ. ಮಂಗಳವಾರ (ಏಪ್ರಿಲ್ 1) ದಿಂದ ಹೊಸ ಹಣಕಾಸು ವರ್ಷ ಆರಂಭ ಹಿನ್ನೆಲೆಯಲ್ಲಿ ತೆರಿಗೆ ಪಾವತಿಯು ಗುರುವಾರ ಏಪ್ರಿಲ್ 3ರ ಸಂಜೆ 5 ಗಂಟೆಯ ನಂತರ ಪುನಃ ಆರಂಭಿಸಲಾಗುವುದು ಎಂದು ಪೋರ್ಟ್ಲ್ನಲ್ಲಿ ಪ್ರದರ್ಶಿಸಲಾಗಿದೆ.
ಇದೇ ಏಪ್ರಿಲ್ 1ರಿಂದ ಬಿಬಿಂಪಿಯು ಘನತ್ಯಾಜ್ಯ ನಿರ್ವಹಣೆ (ಎಸ್ಡಬ್ಲ್ಯೂಎಂ) ನಿರ್ವಹಣೆಗೆ ಹೊಸ ಕಸದ ಸೆಸ್ ವಿಧಿಸಿದೆ. ಅದನ್ನು ಸೇರಿಸಿ ಆಸ್ತಿ ತೆರಿಗೆ ಪಾವತಿಗೆ ಮುಂದಾಗಿದೆ. ಹೀಗಾಗಿ ನಾಗರಿಕರು ಆಸ್ತಿ ತೆರಿಗೆ ಒಟ್ಟು ಹೆಚ್ಚಳ ಕುರಿತು ಹೆಚ್ಚಿನ ಉತ್ಸುಕತೆ ಹೊಂದಿದ್ದಾರೆ. ಏಕೆಂದರೆ ಆಸ್ತಿ ತೆರಿಗೆ ಜೊತೆಗೆ ವಿವಿಧ ಹಂತಗಳಲ್ಲಿ ತ್ಯಾಜ್ಯ ಸೆಸ್ ಕನಿಷ್ಠ 10 ರೂಪಾಯಿಯಿಂದ 400 ರೂಪಾಯಿವರೆಗೆ ವಿಧಿಸಲಾಗುತ್ತದೆ. ಅದನ್ನು ತಿಳಿಯಲು ಜನರು ಮುಂದಾಗಿದ್ದಾರೆ.
ತಾತ್ಕಾಲಿಕ ತೆರಿಗೆ ಪಾವತಿ ಸ್ಥಗಿತಕ್ಕೆ ಕಾರಣ ಬಿಬಿಎಂಪಿ ಕಸ ಸಂಗ್ರಹಣೆಗಾಗಿ ಮನೆಗಳು ಹಾಗೂ ಅಂಗಡಿಗಳ ಒಟ್ಟ ವಿಸ್ತೀರ್ಣ ಪರಿಗಣಿಸಿ ಸೆಸ್ ವಿಧಿಸಿದೆ. ಇದರ ಲೆಕ್ಕಾಚಾರ ಹಾಕಲಾಗುತ್ತಿದೆ. ಒಟ್ಟು ಆರು ಸ್ಲಾಬ್ಗಳಲ್ಲಿ ಕಸ ಸೆಸ್ ಸಂಗ್ರಹಿಸಲು ಮುಂದಾಗಿದೆ. ಈ ಶುಲ್ಕಗಳು ಕಟ್ಟಡದ ಗಾತ್ರದ ಆಧಾರದಲ್ಲಿ ಮಾಸಿಕ 10 ರೂಪಾಯಿಯಿಂದ 400 ರೂ.ವರೆಗೆ ಸಂಗ್ರಹಿಸುತ್ತದೆ. ಸದ್ಯ ಇದರ ಲೆಕ್ಕಾಚಾರ ಹಿನ್ನೆಲೆ ಪಾವತಿ ವಿಧಾನ ಸ್ಥಗಿತಗೊಳಿಸಲಾಗಿದೆ.
ಕೆಂಗೇರಿಯಲ್ಲಿ ನಿವಾಸಿಯೊಬ್ಬರು ತಮ್ಮ ಮನೆಯಿಂದ ಉತ್ಪತ್ತಿಯಾಗುವ ಕಸವನ್ನು ಅವರು ಗೊಬ್ಬರವಾಗಿ ಪರಿವರ್ತಿಸುತ್ತಿದ್ದಾರೆ. ಹೀಗಿದ್ದರೂ ನಿವು ಪ್ರತ್ಯೇಕ ಮನೆಗಳ ಮೇಲೂ ಯಾಕೆ ತೆರಿಗೆ ವಿಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಒಣ ತ್ಯಾಜ್ಯವನ್ನು ಮನೆ ಆವರಣದಲ್ಲಿಯೇ ಮರು ಬಳಕೆ ಮಾಡುತ್ತಿದ್ದೇವೆ. ನಮಗೆ ನೀವು ಪ್ರೋತ್ಸಾಹಿಸಬೇಕು, ವಿನಃ ಸೆಸ್ ಅಲ್ಲ. ಇದೆಲ್ಲ ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಬಿಎಂಪಿ ಶುಲ್ಕದ ವಿವರ ಇನ್ನೂ ನಗರ ಅಪಾರ್ಟ್ಮೆಂಟ್ಗಳು ನಿತ್ಯ 100 ಕೆಜಿಗಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸಿದರೆ ಅಲ್ಲಿನ ನಿವಾಸಿಗಳು ಆಸ್ತಿ ತೆರಿಗೆ ಜೊತೆಗೆ ಪ್ರತ್ಯೇಕ ತೆರಿಗೆ ಪಾವತಿಸಬೇಕಾಗುತ್ತದೆ. ಪ್ರತಿ ಕೆಜಿಗೆ ರೂ. 12 ರಂತೆ ವಿಧಿಸಲಾಗುತ್ತದೆ. ಇನ್ನೂ ಈಕಟ್ಟಡಗಳು ಪಾರ್ಕಿಂಗ್ ಪ್ರದೇಶ ಇರುವುದಾಗಿ ಘೋಷಿಸಿವೆ. ಹೀಗಾಗಿ ಅಪಾರ್ಟ್ಮೆಂಟ್ಗಳು ಮತ್ತು ಸ್ವತಂತ್ರ ಮನೆಗಳಿಗೆ ಪಾರ್ಕಿಂಗ್ ಶುಲ್ಕ ಕಡಿಮೆ ಇರುತ್ತದೆ. ವಾರ್ಷಿಕವಾಗಿ ವಸತಿ ಆಸ್ತಿಗಳಿಗೆ 600 ರೂ.ಶುಲ್ಕ ಇದ್ದರೆ, ವಾಣಿಜ್ಯ ಹಾಗೂ ವಸತಿಯೇತರ ಆಸ್ತಿಗಳಿಗೆ 1,125 ರೂ. ಶುಲ್ಕ ವಿಧಿಸಲಾಗುತ್ತದೆ. ಅದೆಲ್ಲವನ್ನು ಆಸ್ತಿ ಮಾಲೀಕರು ಅಸ್ತಿ ತೆರಿಗೆ ಪಾವತಿ ವೇಳೆ ಕಟ್ಟಬೇಕಾಗುತ್ತದೆ.