ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದ ಜನರಿಗೆ ಸದ್ದಿಲ್ಲದೇ ಮತ್ತೊಂದು ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸಲಿದೆ. ಮಾರ್ಚ್ 29ರಂದು ಈ ಕುರಿತು ರಾಜ್ಯಪತ್ರದ ಮೂಲಕ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವರ ಸಹಿಯನ್ನು ಒಳಗೊಂಡ ಕರಡು ಆದೇಶ ಪ್ರಕಟವಾಗಿದ್ದು, ಜನರಿಂದ ಆಕ್ಷೇಪಣೆಗಳನ್ನು ಸ್ವೀಕಾರ ಮಾಡಲು 7 ದಿನಗಳ ಅವಕಾಶವನ್ನು ನೀಡಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020 ಪ್ರಕರಣ 144 ಉಪ ಪ್ರಕರಣ 5ನೇ ನಿಬಂಧನೆಗಳ ವಿವರಣೆಗಳ ಅಡಿಯಲ್ಲಿನ ಮೇರೆಗೆ ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರು ವಾಹನ ನಿಲ್ದಾಣದ ಪ್ರದೇಶದ ಪ್ರದೇಶವಾರು ಯೂನಿಟ್ ದರಗಳನ್ನು ನಿರ್ಧರಿಸುವ ಕರಡು ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಸಾರ್ವಜನಿಕರಿಂದ ಸಲಹೆಗಳು ಮತ್ತು ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಸಲು ಈ ಮೂಲಕ ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ ಎಂದು ಹೇಳಿದ್ದಾರೆ. ಈ ಪ್ರಕಟಣೆಯನ್ನು ಅಧಿಕೃತ ರಾಜ್ಯ ಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳವರೆಗೆ ಸಲಹೆಗಳು/ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ನಿಗದಿತ ಅವಧಿಯೊಳಗೆ ಸಲ್ಲಿಸುವ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಪರಿಶೀಲಿಸಿ ನಿಯಾಮಾನುಸಾರ ಪರಿಗಣಿಸಲಾಗುವುದು. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನರಸಿಂಹರಾಜ ಚೌಕ, ಬೆಂಗಳೂರು-560002 ವಿಳಾಸಕ್ಕೆ ಸಲ್ಲಿಸಬಹುದಾಗಿದೆ.
ಆಯುಕ್ತರ ಆದೇಶದ ವಿವರಗಳು: ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಮತ್ತು ವಸತಿಯೇತರ ಸ್ವತ್ತುಗಳ ವಾಹನ ನಿಲ್ದಾಣದ ಪ್ರದೇಶದ ದರಗಳನ್ನು (ಪ್ರತಿ ತಿಂಗಳಿಗೆ) ನಿಗದಿಪಡಿಸಲು ನಿರ್ಧರಿಸಲಾಗಿರುವ ದರಗಳ ವಿವರಗಳು ಎಂಬ ವಿಷಯವನ್ನು ಒಳಗೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಪರಿಷ್ಕೃತ ದರಗಳ ವಿವರಗಳನ್ನು ನೀಡಿದ್ದಾರೆ. ವಸತಿ ಉಪಯೋಗದಲ್ಲಿ ಹಾಲಿ ಪ್ರತಿ ಚದರ ಅಡಿಗೆ ಪ್ರತಿ ತಿಂಗಳಿಗೆ ಮುಚ್ಚಿದ ಮತ್ತು ಸ್ಟಿಲ್ಟ್ ವಾಹನ ನಿಲ್ದಾಣದ ವಿಸ್ತೀರ್ಣಕ್ಕೆ ಸ್ವತ್ತಿನ ವರ್ಗ ಹಾಗೂ ಅನುಭೋಗ ಆಧಾರದ ಮೇಲೆ ವಿಧಿಸಲಾಗುವ ಪ್ರದೇಶವಾರು ಯೂನಿಟ್ ದರದ ಶೇ 50ರಷ್ಟು. ಪರಿಷ್ಕೃತ ದರ ಪ್ರತಿ ಚದರ ಅಡಿಗೆ (ಪ್ರತಿ ತಿಂಗಳಿಗೆ) ಯಾವುದೇ ವಲಯ ವರ್ಗೀಕರಣ ಹಾಗೂ ಸ್ವತ್ತಿನ ಮುಚ್ಚಿದ ಅಥವ ಸ್ಟಿಲ್ಟ್ ವಾಹನ ನಿಲ್ದಾಣದ ವಿಸ್ತೀರ್ಣಕ್ಕೆ ಸ್ವಂತ/ ಬಾಡಿಗೆ ಉಪಯೋಗಕ್ಕೆ 2 ರೂ.
ವಸತಿಯೇತರ ಮುಚ್ಚಿದ ಮತ್ತು ಸ್ಟಿಲ್ಟ್ ವಾಹನ ನಿಲ್ದಾಣದ ವಿಲ್ದಾಣದ ವಿಸ್ತೀರ್ಣಕ್ಕೆ ಸ್ವತ್ತಿನ ವರ್ಗ ಹಾಗೂ ಅನುಭೋಗ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದ್ದ ಪ್ರದೇಶವಾರು ಯೂನಿಟ್ ದರದ ಶೇ 50ರಷ್ಟು. ಪರಿಷ್ಕೃತ ದರ ಯಾವುದೇ ವಲಯ ವರ್ಗೀಕರಣ ಹಾಗೂ ವರ್ಗದ ಸ್ವತ್ತಿನ ಮುಚ್ಚಿದ ಅಥವ ಸ್ಟಿಲ್ಟ್ ವಾಹನ ನಿಲ್ದಾಣದ ವಿಸ್ತೀರ್ಣಕ್ಕೆ ಸ್ವಂತ/ ಬಾಡಿಗೆ ಉಪಯೋಗಕ್ಕೆ 3 ರೂ.ಗಳು. ಮೇಲಿನ ದರಗಳು ನಿಜವಾದ ಪಾರ್ಕಿಂಗ್ ಸ್ಲಾಟ್ ಪದೇಶಕ್ಕೆ ಅನ್ವಯವಾಗುವುದು ಎಂದು ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯದಲ್ಲಿ ತಿಳಿಸಿದ್ದಾರೆ.