ಬೆಂಗಳೂರು : ಬಿಬಿಎಂಪಿ ಚೀಪ್ ಇಂಜಿನಿಯರ್ ಕಛೇರಿ ಮೇಲೆ ಇಡಿ ದಾಳಿ ಮಾಡಿದೆ. ಬಿಬಿಎಂಪಿ ಇಂಜಿನಿಯರ್ ಗಳ ಕರ್ಮಕಾಂಡ ಬಗೆದಷ್ಟು ಬಯಲಾಗ್ತಿದೆ. ಕೇವಲ ಬೋರ್ ವೆಲ್ ಅಲ್ಲ, ವೈಟ್ ಟಾಪಿಂಗ್, ಜಾಹೀರಾತು, ಸ್ಟಾರ್ಮ್ ವಾಟರ್ ಡ್ರೈನ್, ರಸ್ತೆ ಗುಂಡಿ ಮುಚ್ಚುವಿಕೆ ಬಗ್ಗೆಯೂ ದಾಖಲೆ ಕೇಳಿದೆ ಇಡಿ. 2014 ರಿಂದ 2024ರ ವರೆಗಿನ ಹತ್ತು ವರ್ಷದ ಅವಧಿಯಲ್ಲಿ ನಡೆದ ಪ್ರಮುಖ ಕಾಮಗಾರಿ, ಯೋಜನೆಗಳ ಬಗೆಗಿನ ಮಾಹಿತಿ ಕೇಳಿ ಇಡಿ ತಲಾಶ್ ಮಾಡಿದೆ.
ನಿನ್ನೆ ತಡರಾತ್ರಿ ವರೆಗೆ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ ಅಧಿಕಾರಿಗಳು. ದಾಖಲೆ ಪರಿಶೀಲನೆಗೆ ಅಂತ ಮೂರು ದಿನಗಳ ಕಾಲ ಪಾಲಿಕೆಯಲ್ಲೇ ಉಳಿದಿದ್ದು, ಪಾಲಿಕೆಯ ವಾರ್ ರೂಮ್ ನಲ್ಲಿ ಇಡಿ ಅಧಿಕಾರಿಗಳಿಗೆ ದಾಖಲೆ ಪರಿಶೀಲನೆಗೆ ವ್ಯವಸ್ಥೆ ಮಾಡಲಾಗಿದೆ.
ಇಂದು ಕೂಡ ದಾಖಲೆಗಳ ಪರಿಶೀಲನೆ
ಪ್ರಮುಖವಾಗಿ ವೈಟ್ ಟ್ಯಾಪಿಂಗ್, ಜಾಹೀರಾತು, ಬೃಹತ್ ರಾಜಕಾಲುವೆ, ರಸ್ತೆ ಗುಂಡಿ ಮುಚ್ಚುವ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ನಿನ್ನೆ ಕೆಲ ದಾಖಲೆಗಳ ಪರಿಶೀಲನೆ ವೇಳೆ ಲೋಪ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಹಣಕಾಸು ವಿಭಾಗದ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಪರಿಶೀಲನೆ ಮಾಡಲಾಗಿದೆ.
ಹಣ ವರ್ಗಾವಣೆ ಬಗ್ಗೆ ಹಣಕಾಸು ವಿಭಾಗದ ಮುಖ್ಯಸ್ಥರ ಬಳಿ ಮಾಹಿತಿ ಕೇಳಲಾಗಿದೆ. ಕೆಲ ಕಾಮಗಾರಿಗಳು ಪೂರ್ಣಗೊಳ್ಳದೆ ಬಿಲ್ ಪಾವತಿ ಆಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಡಾಂಬರಿಕರಣ ಮಾಡದೆ ಬಿಲ್ ಪಾವತಿ ಆದ ಬಗ್ಗೆ ಮಾಹಿತಿ ಪಡೆದಿರೋ ಇಡಿ ಅಧಿಕಾರಿಗಳು. ಇನ್ನೂ ಪಾಲಿಕೆಯ 8 ವಲಯಗಳ ಕಾಮಗಾರಿಗಳ ಬಿಲ್ ಪರಿಶೀಲನೆಗೆ ಮುಂದಾಗಿದ್ದಾರೆ.