ಬೆಂಗಳೂರು : ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಅದರಲ್ಲೂ ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಯಾವಾಗ ಆರಂಭ ಆಗಲಿದೆ ಎಂದು ಕಾದು ಕುಳಿತಿದ್ದವರಿಗೆ ಇದೀಗ ಬಿಎಂಆರ್ಸಿಎಲ್ ಶುಭ ಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕಾಗಿ ಕಾಯುತ್ತಿರುವವರಿಗೆ ಇದೀಗ ಕೊನೆಗೂ ಬಿಎಂಆರ್ಸಿಎಲ್ ಗುಡ್ನ್ಯೂಸ್ ನೀಡಿದೆ. ಈ ಮಾರ್ಗದಲ್ಲಿ ಇದೇ ವರ್ಷದ ಜುಲೈಯೊಳಗೆ ಮೆಟ್ರೋ ಸಂಚಾರ ಮಾಡಲಿದೆ ಎಂದು ತಿಳಿಸಿದೆ.
ಕಾರಣಾಂತರಗಳಿಂದ ಈಗಾಗಲೇ ಹಲವು ಬಾರಿ ಹಳದಿ ಮಾರ್ಗದಲ್ಲಿನ ಮೆಟ್ರೋ ಸಂಚಾರ ಆರಂಭದ ದಿನಾಂಕ ಮುಂದೂಡಿಕೆ ಆಗುತ್ತಲೇ ಇತ್ತು. ಇದರಿಂದ ಜನರು ಬೇಸತ್ತಿದ್ದರು. ಈ ನಡುವೆಯೇ ಆದಷ್ಟು ಬೇಗ ಈ ಮಾರ್ಗ ಮೆಟ್ರೋ ಸಂಚಾರಕ್ಕೆ ಮುಕ್ತ ಮಾಡಬೇಕೆಂದು ಬಿಎಂಆರ್ಸಿಎಲ್ ಭರದಿಂದ ಕಾಮಗಾರಿ ಆರಂಭಿಸಿದೆ.
ಈ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋಗಳು ಸಂಚಾರ ಮಾಡಲಿದ್ದು, ರೈಲುಗಳ ಬರುವಿಕೆಗಾಗಿ ವಿಳಂಬವಾಗಿದ್ದ ಕಾರಣದಿಂದ ಆರಂಭಿಸಲು ಸಾಧ್ಯ ಆಗಿರಲಿಲ್ಲ. ಈಗಲೂ ಸಹ ಪೂರ್ಣ ಪ್ರಮಾಣದ ರೈಲುಗಳು ಬಿಎಂಆರ್ಸಿಎಲ್ಗೆ ಲಭ್ಯವಾಗಿಲ್ಲ. ಇದೀಗ ತಮ್ಮ ಬಳಿ ಇರುವ ಎರಡು ರೈಲುಗಳಿಗೆ, ಶೀಘ್ರದಲ್ಲೇ ಮತ್ತೆರೆಡು ರೈಲು ಸೇರಿಸಿ ಮಾರ್ಗವನ್ನ ಸಂಚಾರ ಮುಕ್ತ ಮಾಡಲು ತಯಾರಿ ಶುರು ಮಾಡಿದೆ.
ಇದೇ ತಿಂಗಳ ಅಂತ್ಯಕ್ಕೆ ಒಂದು ರೈಲು ಬರಲಿದೆ. ಜೂನ್ ಮೊದಲ ವಾರಕ್ಕೆ ಮತ್ತೊಂದು ರೈಲು ಬರಲಿದೆ. ಅಲ್ಲಿಗೆ ಒಟ್ಟು 4 ರೈಲು ಈ ಮಾರ್ಗಕ್ಕೆ ತಲಪಿದಂತಾಗಲಿದೆ. ನಂತರ ಸಂಪೂರ್ಣ ಮಾರ್ಗ ಪರಿಶೀಲನೆ ಮಾಡಿ ಜುಲೈ ಮೊದಲ ವಾರದಲ್ಲಿ ಈ ನಾಲ್ಕು ರೈಲುಗಳ ಮೂಲಕವೇ ಮಾರ್ಗ ಸಂಚಾರ ಮುಕ್ತ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ತಿಳಿಸಿದೆ. ರೈಲುಗಳು ಕಡಿಮೆ ಇರುವ ಕಾರಣ ಈ ಮಾರ್ಗದಲ್ಲಿ ಪ್ರತಿ 30 ನಿಮಿಷಕ್ಕೊಂದು ರೈಲಿನಂತೆ ಸಂಚಾರ ಮಾಡುವ ಸಾಧ್ಯತೆಯಿದೆ. ಅಲ್ಲದೇ, ಒಟ್ಟು ನಿಲ್ದಾಣಗಳ ಪೈಕಿ 3 ಅಥವಾ 5 ನಿಲ್ದಾಣಕ್ಕೊಂದು ನಿಲ್ದಾಣದಂತೆ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಚರಣೆ ಮಾಡಲು ಯೋಜನೆಯನ್ನು ಕೂಡ ಮಾಡಲಾಗಿದೆ. ಈ ಮಾರ್ಗ ಸಂಚಾರ ಮುಕ್ತ ಸಂಬಂಧ 4ನೇ ರೈಲು ಬರುತ್ತಿದ್ದಂತೆ ಮತ್ತೊಮ್ಮೆ ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳಿಗೆ ಮಾರ್ಗ ಪರಿಶೀಲನೆಗೆ ಬಿಎಂಆರ್ಸಿಎಲ್ ಆಹ್ವಾನಿಸಲಿದೆ. ಅದರಂತೆಯೇ ಅಧಿಕಾರಿಗಳು ಭೇಟಿ ನೀಡಿ, ಮತ್ತೆ ಸಿಗ್ನಲಿಂಗ್ ಪರೀಕ್ಷೆ ನಡೆಸಿ ಮಾರ್ಗ ಓಪನ್ಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆದು ಜುಲೈ ಅಂತ್ಯದೊಳಗೆ ಮಾರ್ಗ ಸಂಚಾರ ಮುಕ್ತವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಕಳೆದ ಡಿಸೆಂಬರ್ ವೇಳೆಗೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ವಿಳಂಬ ಆಯಿತು. ಅದರಲ್ಲೂ ಅದುಕೊಂಡಂತೆ ಮೆಟ್ರೋ ರೈಲುಗಳು ಕೂಡ ರವಾನೆಯಾಗಲಿಲ್ಲ. ಇದು ಕೂಡ ಒಂದು ವಿಳಂಬಕ್ಕೆ ಕಾರಣವಾಗಿದೆ.