ಬೆಂಗಳೂರು  || ಬಿಎಂಟಿಸಿ ಚಾಲಕನ ಮೇಲೆ ಮಹಿಳೆಯಿಂದ ಹಲ್ಲೆ : ಬಸ್ ತೆಗೆಯುವುದಿಲ್ಲ ಎಂದು ಚಾಲಕರ ಪ್ರತಿಭಟನೆ

ಬೆಂಗಳೂರು || ಬಿಎಂಟಿಸಿ ಚಾಲಕನ ಮೇಲೆ ಮಹಿಳೆಯಿಂದ ಹಲ್ಲೆ : ಬಸ್ ತೆಗೆಯುವುದಿಲ್ಲ ಎಂದು ಚಾಲಕರ ಪ್ರತಿಭಟನೆ

ಬೆಂಗಳೂರು : ಬಿಎಂಟಿಸಿ ಚಾಲಕನ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿರುವುದನ್ನು ಖಂಡಿಸಿ ಚಾಲಕನ ಪರವಾಗಿ ಇವಿ ಬಸ್ ಚಾಲಕರು ನಿಂತಿದ್ದು, ಪೀಣ್ಯ ಡಿಪೋದಲ್ಲಿ ಇವಿ ಬಸ್ ಗಳನ್ನ ನಿಲ್ಲಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ನಡೆದು ಒಂದು ದಿನವಾದ್ರು ಹಲ್ಲೆ ಮಾಡಿದ ಮಹಿಳೆಯನ್ನ ಬಂದಿಸಿಲ್ಲ. ಹಲ್ಲೆ ಮಾಡಿದ ಮಹಿಳೆಯ ವಿರುದ್ಧ ಕ್ರಮ ತೆಗೆದುಕೊಳ್ಳೋವರೆಗೆ ಬಸ್ ತೆಗೆಯೋಲ್ಲ ಎಂದು ಇವಿ ಬಸ್ ಚಾಲಕರು ಎಚ್ಚರಿಕೆ ನೀಡಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದ ಮಹಿಳೆ ನಿನ್ನೆ ಠಾಣೆಗೆ ಬಂದು ದೂರು ನೀಡಿದ್ರು, ಚಾಲಕನ ಸ್ಥಿತಿ ಗಂಭೀರವಾಗಿದೆ, ನಮಗೆ ರಕ್ಷಣೆ  ಇಲ್ಲದಂತೆ ಆಗಿದೆ ಎಂದು ಚಾಲಕರ ಅಕ್ರೋಶ ಹೊರಹಾಕಿದ್ದಾರೆ. ಇವಿ ಬಸ್ ಗಳನ್ನ ಡಿಪೋದಲ್ಲೇ ನಿಲ್ಲಿಸಿಕೊಂಡಿರುವ ಚಾಲಕರು. ಒಟ್ಟು 120 ಬಸ್ ಗಳನ್ನ ಆಚೆ ತೆಗೆಯೋದಿಲ್ಲ, ನಾವು ಡ್ಯೂಟಿ ಮಾಡಲ್ಲ. ನಮಗೆ ನ್ಯಾಯ ಬೇಕೆಂದು ಪಟ್ಟು ಹಿಡಿದಿದ್ದರು.

ಹಿರಿಯ ಅಧಿಕಾರಿಗಳಿಂದ ಕ್ರಮದ ಭರವಸೆ ನೀಡುವವರೆಗೂ ಇವಿ ಬಸ್ ಚಾಲಕರು ತೆಗೆಯುವುದಿಲ್ಲ ಎಂದಿದ್ದರು. ಕೊನೆಗೆ ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *