ಬೆಂಗಳೂರು : 31ನೇ ತಾರೀಖು ಜಂಟಿ ಕ್ರಿಯಾ ಸಮಿತಿಯವರು ಬೇಡಿಕೆ ಇಟ್ಟು ಚರ್ಚೆ ಮಾಡಿದ್ರು. ನಮ್ಮ ಕಾರ್ಪೊರೇಷನ್ ಆರ್ಥಿಕ ಪರಿಸ್ಥಿತಿ ಅವರಿಗೂ ಗೊತ್ತಿದೆ. ಹಿಂದೆ ಬಿಜೆಪಿ ಇದ್ದಾಗ 5,900 ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಹೊಸ ರಿಕ್ಯೂಪ್ಮೆಂಟ್, ನೌಕರರ ವೇತನ ಅನೇಕ ಕಾರ್ಯಕ್ರಮ ಎಲ್ಲರಿಗೂ ಗೊತ್ತಿದೆ. ಸಂಘಟನೆಯವರು ನೌಕರರ ಪರವಾಗಿ ಕೆಲಸ ಮಾಡಿದ್ದಾರೆ. ನಾನೂ ಕೂಡ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 220 ಕೋಟಿ ರೂ ಬಿಡುಗಡೆಗೆ ಮನವಿ ಮಾಡಿದ್ದೇನೆ. ಕ್ಯಾಬಿನೆಟ್ ನಲ್ಲಿ ಇಟ್ಟಿದ್ದೇವೆ. ವೇತನ ಪರಿಷ್ಕರಣೆ ಕೂಡ ಹೇಳಿದ್ದೇವೆ. 2 ಸಾವಿರ ಕೋಟಿ ಹಣ ಬಿಡುಗಡೆಗೆ ಕೇಳಿದ್ದೇನೆ ಎಂದರು.
ಟಿಕೆಟ್ ದರ ಹೆಚ್ಚಳ
ಬೋರ್ಡ್ಗಳು ಪ್ರಸ್ತಾವನೆ ಕಳಿಸಲಿವೆ ಅದನ್ನ ನೋಡಿಕೊಂಡು ಸರ್ಕಾರ ದರ ಹೆಚ್ಚಳ ಮಾಡಲಿದೆ. ಅವರು ಒಪ್ಪದಿದ್ರೆ.? ನಾವು ಪಾಸಿಟಿವ್ ಮೈಂಡ್ ಇದ್ದೇವೆ. ಆ ರೀತಿ ಸಮಸ್ಯೆ ಆಗಲ್ಲ. ಬಿಜೆಪಿ ಅವರು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡ್ತಿದ್ದಾರೆ. ಅವರು ಸಾವಿರಾರು ಜನರನ್ನ ಸಸ್ಪೆಂಡ್ ಮಾಡಿದ್ದರು. ನಾವು ಅವರನ್ನೆಲ್ಲಾ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದೇವೆ ಎಂದು ಹೇಳಿದರು.