ಬೆಂಗಳೂರು: ಬಿರಿಯಾನಿ ಪಾರ್ಸೆಲ್ (Biriyani Parcel) ತೆಗೆದುಕೊಳ್ಳಲು 10 ರಿಂದ 15 ನಿಮಿಷ ಬಸ್ ನಿಲ್ಲಿಸಿದ್ದಕ್ಕೆ ಬಿಎಂಟಿಸಿ (BMTC) ವಿರುದ್ಧ ಪ್ರಯಾಣಿಕರು ಗರಂ ಆಗಿದ್ದಾರೆ.
ಬಿಎಂಟಿಸಿ ಸಿಬ್ಬಂದಿ ಒಂದಿಲ್ಲೊಂದು ಅಚಾತುರ್ಯಗಳನ್ನು ಮಾಡುತ್ತಿದ್ದಾರೆ. ಬಿಎಂಟಿಸಿ ಬಸ್ ಟ್ಯಾನರಿ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಬರುತ್ತಿತ್ತು. ಈ ವೇಳೆ ಟ್ಯಾನರಿ ರಸ್ತೆಯಲ್ಲಿ 10-15 ನಿಮಿಷ ಬಸ್ ನಿಲ್ಲಿಸಿ ಬಿರಿಯಾನಿ ಪಾರ್ಸೆಲ್ ತೆಗೆದುಕೊಂಡಿದ್ದಾರೆ
ಇದನ್ನು ಕಂಡ ಪ್ರಯಾಣಿಕರು ಬಿಎಂಟಿಸಿ ವಿರುದ್ಧ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ದೂರಿದ್ದಾರೆ.
ಇದು ಕೊನೆಯ ಬಸ್, ಮೆಜೆಸ್ಟಿಕ್ ಕಡೆಗೆ ಬಂದು ಬೇರೆ ಕಡೆಗೆ ಹೋಗಬೇಕು. ಈ ರೀತಿ ಬಿರಿಯನಿಗಾಗಿ ಬಸ್ ನಿಲ್ಲಿಸಿಕೊಂಡು ಸಮಸ್ಯೆ ಮಾಡುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೆಬ್ಬಾಳ ಫ್ಲೈಓವರ್ ಬಳಿ ಚಾಲಕ ಮತ್ತು ನಿರ್ವಾಹಕ ಪರಸ್ಪರ ಕಿತ್ತಾಡಿದ್ದರು. ಕಿತ್ತಾಟ ಜೋರಾಗುತ್ತಿದ್ದಂತೆ ಪ್ರಯಾಣಿಕರು ಬೇರೆ ಬಸ್ಸು ಹತ್ತಿ ಪ್ರಯಾಣಿಸಿದ್ದರು