ಬೆಂಗಳೂರು: ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿವಾರ ಉದ್ಘಾಟಿಸಿದರು

ವಿಶೇಷ ಸಂದರ್ಭದಲ್ಲಿ ವಿದ್ಯುತ್ ದೀಪಗಳನ್ನು ಚಾಲು ಮಾಡಲಾಗುತ್ತದೆ. ವಿಧಾನಸೌಧದವನ್ನು ವಿದ್ಯುತ್ ದೀಪದಿಂದ ಅಲಂಕಾರ ಮಾಡಲು ಸುಮಾರು 1,063 ವಿದ್ಯುತ್ ದೀಪಗಳನ್ನು ಬಳಸಲಾಗಿದೆ.
ಲೆಕ್ಸಾ ಲೈಟಿಂಗ್ಸ್ಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ಗುತ್ತಿಗೆ ನೀಡಲಾಗಿದೆ. ವಿದ್ಯುತ್ ದೀಪಾಲಂಕಾರ ಉದ್ಘಾಟನಾ ಸಮಾರಂಭದಲ್ಲಿವಿಧಾನಸಭಾಧ್ಯಕ್ಷ ಯುಟಿ ಖಾದರ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಕೆ.ಪಾಟೀಲ್, ಜಾರ್ಜ್, ಸಿಎಸ್ ಶಾಲಿನಿ ಉಪಸ್ಥಿತರಿದ್ದರು.