ಬೆಂಗಳೂರು: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂಬ ಹಣೆಪಟ್ಟಿ ಸರ್ಕಾರಕ್ಕೆ ಇದೆ. ಈ ಮಧ್ಯೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಕಾಮಗಾರಿಗಳ ಹಣ ಬಾಕಿ ಉಳಿದಿಕೊಂಡಿದೆ. ಸಾವಿರಾರು ಕೋಟಿ ರೂಪಾಯಿ ಸರ್ಕಾರ ಪಾವತಿಸಬೇಕಿದೆ. ಸದ್ಯ ಗುತ್ತಿಗೆದಾರರು ಮುಂದಿನ ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಿ ಸರ್ಕಾರಕ್ಕೆ ಶಾಕ್ ನೀಡಲು, ಸರ್ಕಾರದ ವಿರುದ್ಧ ಕ್ರಮಿನಲ್ ಮೊಕದ್ಧಮತೆ ಹೂಡಲು ಸಜ್ಜಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರು ಹೇಳಿದ್ದು ನಿಜ ಎಂದು ವಿಪಕ್ಷ ನಾಯಕರು ಹೇಳಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ರಸ್ತೆಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ದುಡ್ಡಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದು ಹೇಳಿದ್ದು ಅಕ್ಷರಶಃ ನಿಜ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ವಿವರ ಹಂಚಿಕೊಂಡಿದ್ದಾರೆ.
ಸರ್ಕಾರದ ಬೊಕ್ಕಸ ಬರಿದಾಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಗುತ್ತಿಗೆದಾರರಿಗೆ 64,000 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಅವರು ಲೆಕ್ಕ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಳೆದ 20 ತಿಂಗಳುಗಳಲ್ಲಿ ಈವರೆಗೂ ಒಂದೇ ಒಂದು ಹೊಸ ಕಾಮಗಾರಿಗೂ ಗುದ್ದಲಿ ಪೂಜೆ ಮಾಡಿಲ್ಲ. ಈಗ ಬಿಲ್ ಬಾಕಿ ಪಾವತಿ ಮಾಡದಿದ್ದರೆ ಜಾರಿಯಲ್ಲಿರುವ ಕಾಮಗಾರಿಗಳು ನಿಲ್ಲುತ್ತವೆ. ಸರ್ಕಾರದ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ ಎಂದು ಹೇಳಿದರು.
ಮಾರ್ಚ್ 1ರಿಂದ ಕಾಮಗಾರಿ ಬಂದ್: ಗುತ್ತಿಗೆದಾರರು ಈಗಾಗಲೇ ರಾಜ್ಯ ಸರ್ಕಾರ ನೆಚ್ಚಿಕೊಂಡು ಎಲ್ಲ ಜಿಲ್ಲೆಗಳಲ್ಲಿ ಕಾಮಗಾರಿ ನಡೆಸಿಕೊಂಡು ಬಂದಿರುವ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರದಿಂದ 64000 ಕೋಟಿ ರೂಪಾಯಿ ಪಾವತಿಸುವುದು ಬಾಕಿ ಇದೆ. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಸಂಬಂಧ ಪಟ್ಟ ಹೈಕೋರ್ಟ್ ಪೀಠಗಳಲ್ಲಿ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಲು ಅವರು ಚಿಂತನ ನಡೆಸಿದ್ದಾರೆ. ಮಾರ್ಚ್ ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿಧದ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ.
ಗುತ್ತಿಗೆದಾರರಿಗೆ 2023ರಿಂದ ಬಾಕಿ ಬಿಲ್ ಪಾವತಿ ಮಾಡಿಲ್ಲ. ಇತ್ತೀಚೆಗೆ ಸರ್ಕಾರ ವಿವಿಧ ಕಾರಣ ಹೇಳುತ್ತಲೇ ಬಂದಿದೆ. ಆದರೆ ಬಿಲ್ ಪಾವತಿಸದೇ ಕಾಲಹರಣ ಮಾಡುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಇಲಾಖಾವಾರು ಬಾಕಿ ಬಿಲ್ ಮೊತ್ತದ ವಿವರ ಕೊಳಗೇರಿ ಮಂಡಳಿ: 2410 ಕೋಟಿ ರೂಪಾಯಿ ಗ್ರಾಮೀಣಾಭಿವೃದ್ಧಿ ಇಲಾಖೆ: 7912 ಕೋಟಿ ರೂಪಾಯಿ ಸಣ್ಣ ನೀರಾವರಿ ಇಲಾಖೆ : 10,741 ಲೋಕೋಪಯೋಗಿ ಇಲಾಖೆ : 12,400 ಕೋಟಿ ರೂಪಾಯಿ ನೀರಾವರಿ ಇಲಾಖೆ: 25,980 ಕೋಟಿ ರೂಪಾಯಿ ಇತರ ಇಲಾಖೆಗಳ ಕಾಮಗಾರಿಗಳದ್ದು 8900 ಕೋಟಿ ರೂಪಾಯಿ ಬಿಲ್ ಬಾಕಿ ಇದೆ.