ಬೆಂಗಳೂರು || ಡಿ.ಕೆ ಶಿವಕುಮಾರ್ ಎದ್ದೇಳಿ ಎಂದ ಬೆಂಗಳೂರಿಗರು, ರಸ್ತೆಗುಂಡಿ ಮುಚ್ಚಲು ಮಾಡಿದ್ದೇನು ಗೊತ್ತಾ

ಬೆಂಗಳೂರು || ಡಿ.ಕೆ ಶಿವಕುಮಾರ್ ಎದ್ದೇಳಿ ಎಂದ ಬೆಂಗಳೂರಿಗರು, ರಸ್ತೆಗುಂಡಿ ಮುಚ್ಚಲು ಮಾಡಿದ್ದೇನು ಗೊತ್ತಾ

ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆಗುಂಡಿಗಳದ್ದು ಬಹುದೊಡ್ಡ ಸಮಸ್ಯೆ. ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಈ ಬಗ್ಗೆ ಜನ ದೂರಿದ್ದೇ ಬಂತು. ಆದರೆ, ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುತ್ತೇವೆ. ಎಲ್ಲಾ ಸಿದ್ಧತೆ ಆಗಿದೆ. ಮಳೆ ನಿಂತ ಕೂಡಲೇ ರಸ್ತೆಗುಂಡಿಗಳನ್ನೆಲ್ಲ ಮುಚ್ಚಿ ಬಿಡ್ತೀವಿ ಎಂದು ಹೇಳುವ ಬಿಬಿಎಂಪಿ ಮತ್ತದೆ ಕುಂಭಕರ್ಣ ನಿದ್ದೆ ಪ್ರದರ್ಶಿಸುತ್ತಿದೆ. ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಿಂದಲೂ ಜನ ರಸ್ತೆಗುಂಡಿ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಆದರೆ ಪಾಲಿಕೆ ಮಾತ್ರ ರಸ್ತೆಗುಂಡಿ ಮುಚ್ಚುತ್ತಿಲ್ಲ. ಇದೀಗ ಜನರೇ ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದ್ದಾರೆ.

ನಗರದಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗ್ತನೇ ಇದೆ. ಈ ಬಗ್ಗೆ ಸಾರ್ವಜನಿಕರು ಸಹ ಬಿಬಿಎಂಪಿಗೆ ದೂರು ನೀಡುತ್ತಲ್ಲೇ ಇದ್ದಾರೆ. ಅಲ್ಲದೇ ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆಯಾಗಿದೆ. ಇದೀಗ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಜನರೇ ಮುಂದಾಗಿದ್ದಾರೆ. ಇದಕ್ಕೆ ಜನ ಕಂಡುಕೊಂಡಿರುವ ದೇಣಿಗೆ ಸಂಗ್ರಹ (Crowdfunding) ಮಾಡುವುದು. ಹೌದು ಪಾಲಿಕೆಗೆ ಹೇಳಿ ಹೇಳಿ ಸಾಕಾದ ಮೇಲೆ ಇದೀಗ ಜನರೇ ಆಯಾ ಏರಿಯದ ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದಾರೆ.

ಸಾರ್ವಜನಿಕರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾದಾಗ ಜವಾಬ್ದಾರಿಯುತ ನಾಗರಿಕರು ಬದಲಾವಣೆ ಮಾಡಲು ಮುಂದಾಗುತ್ತಾರೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ Citizens Movement ಎನ್ನುವ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಜನರೇ ರಸ್ತೆಗಳ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಚಿಕ್ಕನಾಯಕನಹಳ್ಳಿ ಸರ್ಜಾಪುರ – ಕಾರ್ಮೆಲಾರಂ ರಸ್ತೆಯನ್ನು ದುರಸ್ತಿ ಮಾಡಲಾಗುತ್ತಿದೆ. ಇದನ್ನು ಇಲ್ಲಿನ ಸಾರ್ವಜನಿಕರ ಸಹಭಾಗಿತ್ವ (community-driven work) ಹಾಗೂ ಹಾಲನಾಯಕನಹಳ್ಳಿ ಪಂಚಾಯತ್ ಸಹಕಾರದೊಂದಿಗೆ ಮಾಡಲಾಗುತ್ತಿದೆ. ಈ ಸಮುದಾಯದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಇಲ್ಲಿನ ಜನ ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ಎದ್ದೇಳಿ… ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಜನರೇ ಕೈಜೋಡಿಸಿದ್ದಾರೆ. ಇದರ ಬೆನ್ನಲ್ಲೇ Citizens Movement East Bengaluru ಎನ್ನುವ ಖಾತೆಯಿಂದ ಟ್ವಿಟ್ಟರ್ನ ಟ್ವೀಟ್ ಮಾಡಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ & ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಎದ್ದೇಳಿ, ಕ್ರಮ (ರಸ್ತೆಗುಂಡಿ ಹಾಗೂ ರಸ್ತೆ ದುರಸ್ತಿಗೆ) ತೆಗೆದುಕೊಳ್ಳಿ ಎಂದು ಹೇಳಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಲಾಗಿದೆ.

ನಮಗೂ ಹೇಳಿ ಎಂದ ಜನ: ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಎಷ್ಟಾಗುತ್ತೆ. ಫಂಡಿಂಗ್ ಹೆಂಗೆ ಮಾಡಿದ್ರಿ ಅಂತ ನಮಗೂ ಹೇಳಿ ಈಗ ಉಳಿದಿರುವುದು ಇದೊಂದೆ ಆಯ್ಕೆ ಎನಿಸುತ್ತದೆ. ನಮ್ಮೆ ಏರಿಯಾಗಳಲ್ಲೂ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ಗುಂಡಿ ಮುಚ್ಚಬೇಕಿದೆ ಎಂದು ಕೆಲವು ಕಾಮೆಂಟ್ ಮಾಡಿದ್ದಾರೆ. ಕೆಲವರು ಬಿಬಿಎಂಪಿಗೆ ನಾಚಿಕೆಯಾಗಬೇಕು ಎಂದಿದ್ದಾರೆ. ಬೆಂಗಳೂರಲ್ಲಿ ಜನ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿ ಮಾಡಿದ ಮೇಲೂ ಈ ರೀತಿ ರಸ್ತೆಗುಂಡಿಗಳನ್ನು ಮುಚ್ಚಿಬೇಕಾದ ಅನಿವಾರ್ಯತೆ ಎದುರಾಗಿರುವುದು ವಿಪರ್ಯಾಸ ಎಂದಿದ್ದಾರೆ. ಬೆಂಗಳೂರಿನಲ್ಲಿ ಇನ್ನೊಂದು ಮಳೆ ಬರುವ ಮುನ್ಸೂಚನೆ ಇದೆ. ಕಳೆದ ತಿಂಗಳು ಸುರಿದಿದ್ದ ಮಳೆಯಿಂದ ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ಸೃಷ್ಟಿಯಾಗಿತ್ತು. ಅದನ್ನೇ ಬಿಬಿಎಂಪಿ ಇಲ್ಲಿಯವರೆಗೆ ಮುಚ್ಚಿಲ್ಲ!

Leave a Reply

Your email address will not be published. Required fields are marked *