ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಒಂದೆರಡು ದಿನ ಸ್ಥಗಿತಗೊಂಡಿದ್ದ ಆಸ್ತಿ ತೆರಿಗೆ ಪಾವತಿ ಪೋರ್ಟ್ಲ್ ಮರಳಿ ಸೇವೆ ಸಿದ್ಧವಾಗಿದೆ. ಏಪ್ರಿಲ್ 1ರಂದು ಶುರುವಾದ ನೂತನ ಹಣಕಾಸು ವರ್ಷದಿಂದ ಗಾರ್ಬೆಜ್ ತೆರಿಗೆ ಸಮೇತ ಆಸ್ತಿ ತೆರಿಗೆ ಸ್ವೀಕಾರಕ್ಕೆ ಬಿಬಿಎಂಪಿ ಮುಂದಾಗಿತ್ತು. ಇದಕ್ಕಾಗಿ ಪೋರ್ಟಲ್ನಲ್ಲಿ ಒಂದಷ್ಟು ಸಣ್ಣ ಪುಟ್ಟ ಮಾರ್ಪಾಡು ಮಾಡುವುದು ಅಗತ್ಯವಾಗಿತ್ತು. ಹೀಗಾಗಿ ಆನ್ಲೈನ್ ತೆರಿಗೆ ಪಾವತಿ ವ್ಯವಸ್ಥೆ ಸ್ಥಗಿತಗೊಂಡಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತೆರಿಗೆ ಪಾವತಿಯ ಪೋರ್ಟ್ಲ್ನಲ್ಲಿನ ಬದಲಾವಣೆ ಕಾರ್ಯ ಪೂರ್ಣಗೊಳಿಸಿದೆ. ಏಪ್ರಿಲ್ 5 ಶನಿವಾರವೇ ಪಾವತಿಗೆ ಅವಕಾಶ ನೀಡಿದೆ. ಭಾನುವಾರ ರಜಾ ದಿನ ಹಿನ್ನೆಲೆಯಲ್ಲಿ ಇಂದು ಸೋಮವಾರದಿಂದ ತೆರಿಗೆ ಪಾವತಿದಾರರಿಗೆ ಸಂಪೂರ್ಣವಾಗಿ ಸೇವೆ ಲಭ್ಯವಾಗಿದೆ.
ಇತ್ತೀಚೆಗಷ್ಟೇ ಬಿಬಿಎಂಪಿ ಕಟ್ಟಡಗಳ ವಿಸ್ತೀರ್ಣದ ಆಧಾರದಲ್ಲಿ ಕಸಕ್ಕೆ 10 ರೂಪಾಯಿಂದ 400 ರೂಪಾಯಿವರೆಗೆ ಸೆಸ್ ವಿಧಿಸಿ ಆದೇಶಿಸಿತ್ತು. ಈ ಹಣವನ್ನು ಆಸ್ತಿ ತೆರಿಗೆ ಜೊತೆಗೆ ಮಾಲೀಕರಿಂದ ವಸೂಲಿ ಮಾಡುವುದಾಗಿ ತಿಳಿಸಿತ್ತು. ಆದರೆ ಈವರೆಗೆ ಆಸ್ತಿ ತೆರಿಗೆ ಮಾತ್ರವೇ ಪಾವತಿಸುತ್ತಿದ್ದ ಪೋರ್ಟಲ್ನಲ್ಲಿ ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆ, ಬಾಕಿ ತೆರಿಗೆದಾರರಿಗೆ ಶೇಕಡಾ 100ರಷ್ಟು ದಂಡ ವಿಧಿಸುವುದು. ಬಡ್ಡಿ ವಿಧಿಸುವುದು ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಮಾಡಬೇಕಿತ್ತು.

ವರ್ಷದಿಂದ ವರ್ಷಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆದಂತೆ ಕಳೆದ ಒಂದೇ ವರ್ಷದಲ್ಲಿ ಆಸ್ತಿ ತೆರಿಗೆಯು ಗರಿಷ್ಠ ಪ್ರಮಾಣದಲ್ಲಿ ಏರಿಕೆ ಆಗಿದೆ. ಇದರಿಂದ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ಆಸ್ತಿ ಮಾಲೀಕರು ಹೇಳಿದ್ದಾರೆ. 2023-24 ರ ಸಾಲಿಗಿಂತ 2024 -25ರ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಶೇಕಡಾ ಸುಮಾರು 30 ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಆಸ್ತಿ ತೆರಿಗೆ, ಉಪಕರಗಳನ್ನು ಸೇರಿ ಒಟ್ಟು ಒಬ್ಬರು ಆಸ್ತಿ ಮಾಲೀಕ ಸುಮಾರು 9450 ರೂಪಾಯಿ ತೆರಿಗೆ ಪಾವತಿಸಬೇಕಿದ್ದರೆ. ಈ ವರ್ಷ ಆತ 12.078 ರೂಪಾಯಿ ಪಾವತಿಸಬೇಕಿದೆ. ಇದರಲ್ಲಿ ಗಾರ್ಬೆಜ್ ಕಸ ಸೇರಿ ಆಗುತ್ತದೆ. ಇನ್ನೂ ಬೃಹತ್ ಕಟ್ಟಡ ಮಾಲೀಕರು ಕೊಂಚ ಹೆಚ್ಚಿನ ಹಣ ತೆರಿಗೆ ಕಟ್ಟಬೇಕಾಗುತ್ತದೆ. ಏಕೆಂದರೆ ವಿಸ್ತೀರ್ಣ ಆಧಾರದಲ್ಲಿ ಕಸ ಸೆಸ್ ವಿಧಿಸಿದ್ದರಿಂದ ತೆರಿಗೆ ಹೆಚ್ಚಳದ ಪ್ರಮಾಣದಲ್ಲಿ ಬದಲಾವಣೆ ಆಗುತ್ತದೆ. ಸದ್ಯ ಈ ಆಸ್ತಿ ತೆರಿಗೆ ಹೊರೆಯಿಂದ ನಾವು ಸಮಸ್ಯೆ ಎದುರಿಸುವಂತಾಗಿದೆ ಎಂದು ನಾಗರಿಕರು ಆಳಲು ತೋಡಿಕೊಂಡಿದ್ದಾರೆ.