ಬೆಂಗಳೂರು || ಬೆಂಗಳೂರಿಗೆ ಬಂದು ನಟಿ ದೀಪಿಕಾ ಪಡುಕೋಣೆ ಮಾಡಿದ ಕೆಲಸಕ್ಕೆ ಕನ್ನಡಿಗರು ಫಿದಾ

ಬೆಂಗಳೂರು || ಬೆಂಗಳೂರಿಗೆ ಬಂದು ನಟಿ ದೀಪಿಕಾ ಪಡುಕೋಣೆ ಮಾಡಿದ ಕೆಲಸಕ್ಕೆ ಕನ್ನಡಿಗರು ಫಿದಾ

ಬೆಂಗಳೂರು : ಬಾಲಿವುಡ್‌ ಅಂಗಳದಲ್ಲಿ ಮಿಂಚುತ್ತಿರುವ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಅವರು ಕನ್ನಡಿಗರ ಮನಗೆದ್ದಿದ್ದಾರೆ. ಸಿಲಿಕಾನ್‌ ಸಿಟಿಯಲ್ಲಿ ನಿನ್ನೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಖ್ಯಾತ ಪಂಜಾಬಿ ಗಾಯಕನಿಗೆ ಕನ್ನಡದ ಪಾಠ ಮಾಡಿದ್ದಾರೆ

ಹೌದು ನಿನ್ನೆ ಬೆಂಗಳೂರಿಗರಿಗೆ ಒಂದು ರೀತಿಯ ಹಬ್ಬ ಎಂದರೆ ತಪ್ಪಾಗಲಾರದು. ಖ್ಯಾತ ಪಂಜಾಬಿ ಸಿಂಗರ್‌ ದಿಲ್ಜೀತ್ ದೋಸಾಂಜ್‌ (Diljit Dosanjh) ಅವರಿಗೆ ವೇದಿಕೆಯಲ್ಲೇ ಕನ್ನಡದಲ್ಲಿ ಮಾತನಾಡಲು ಹೇಳಿಕೊಟ್ಟಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಹವಾ ಇಟ್ಟರೂ ದೀಪಿಕಾ ನೋಡು ಎಷ್ಟು ಮುದ್ದಾಗಿ ಕನ್ನಡ ಮಾತನಾಡ್ತಾರೆ ಎಂದು ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಭಾರತದ ಖ್ಯಾತ ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್ ಭಾರತದ ಪ್ರಮುಖ ನಗರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಸರಣಿಯಾಗಿ ಹಮ್ಮಿಕೊಳ್ಳುತ್ತಿದ್ದಾರೆ. ಇನ್ನು ಇವರ ಸಂಗೀತ ಕಾರ್ಯಕ್ರಮ ಅಂದ್ರಂತೂ ಜನರಿಗೆ ಒಂಥರಾ ಹುಚ್ಚು ಅಂತಾನೇ ಹೇಳಬಹುದು. ಅದರಂತೆ ಬೆಂಗಳೂರಿನಲ್ಲೂ ದಿಲ್ಜೀತ್ ಅವರ ಸಂಗೀತ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು.

ದಿಲ್ಜೀತ್ ಅವರ ಲೈವ್‌ ಕಾನ್ಸರ್ಟ್‌ ಸಂಗೀತ ಕಾರ್ಯಕ್ರಮದ ಟಿಕೆಟ್‌ ದರ ಕೂಡ ಲಕ್ಷಗಳವರೆಗೆ ತಲುಪಿದ್ದು, ಸಖತ್‌ ಕ್ರೇಜ್‌ ಹೊಂದಿದ್ದಾರೆ. ನಿನ್ನೆ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೂ ಕೂಡ ಬೆಂಗಳೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದರು. ಆದರೆ ದಿಲ್ಜೀತ್ ಅವರು ಅಲ್ಲಿ ನೆರೆದಿದ್ದ ಸಂಗೀತ ಪ್ರಿಯರಿಗೆ ದೊಡ್ಡ ಸರ್‌ಪ್ರೈಸ್‌ ಅನ್ನೇ ನೀಡಿದ್ದಾರೆ.

ಮೊದಲಿಗೆ ದಿಲ್ಜೀತ್ ಅವರ ಕಾರ್ಯಕ್ರಮಕ್ಕೆ ನಟಿ ದೀಪಿಕಾ ಪಡುಕೋಣೆ ಬರ್ತಾರೆ ಅಂತ ಅಲ್ಲಿದ್ದವರು ಯಾರೂ ಊಹಿಸಿರಲಿಲ್ಲ. ಆದರೆ ದಿಲ್ಜೀತ್ ಅವರು ವೇದಿಕೆಗೆ ಯಾರೋ ಸೆಲೆಬ್ರಿಟಿಯನ್ನು ಪರಿಚಯಿಸುತ್ತಾರೆ ಎಂದು ನಿರೀಕ್ಷೆಯಲ್ಲಿದ್ದರು. ಇನ್ನು ಇದ್ದಕ್ಕಿದ್ದಂತೆ ದೀಪಿಕಾ ಪಡುಕೋಣೆ ಅವರನ್ನು ದಿಲ್ಜೀತ್ ಅವರು ವೇದಿಕೆ ವೆಲ್‌ಕಮ್‌ ಮಾಡಿದರು.

ಇನ್ನು ದೀಪಿಕಾ ಎಂಟ್ರಿ ಕೊಟ್ಟ ಕೂಡಲೇ ಅಲ್ಲಿದ್ದವರೆಲ್ಲ ಜೋರಾಗಿ ಕೂಗಿ, ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಇನ್ನು ವೇದಿಕೆಗೆ ಬಂದ ದೀಪಿಕಾ ಗಾಯಕ ದಿಲ್ಜೀತ್ ಅವರಿಗೆ ಕನ್ನಡದಲ್ಲೇ ಮಾತನಾಡಲು ಹೇಳಿದರು. ಆದರೆ ದಿಲ್ಜೀತ್‌ಗೆ ಕನ್ನಡ ಗೊತ್ತಿಲ್ಲದ ಕಾರಣ ದೀಪಿಕಾ ಅವರೇ ಕನ್ನಡವನ್ನು ಮುದ್ದಾಗಿ ಹೇಳಿಕೊಟ್ಟಿದ್ದಾರೆ.

ಕನ್ನಡದಲ್ಲಿ ಮಾತನಾಡಲು ಒದ್ದಾಡಿದ ದಿಲ್ಜೀತ್ ಅವರಿಗೆ ದೀಪಿಕಾ ಪಡುಕೋಣೆ ಅವರು “ನಾನು ನಿಮ್ಮನ್ನು ಪ್ರೀತಿಸ್ತೀನಿ..” ಎಂದು ಕನ್ನಡದ ಪದಗಳನ್ನು ಹೇಳಿಕೊಟ್ಟಿದ್ದಾರೆ. ಬಳಿಕ ದಿಲ್ಜೀತ್ ಕೂಡ ದೀಪಿಕಾ ಹೇಳಿದಂತೆ ಸೊಗಸಾಗಿ ಕನ್ನಡದಲ್ಲೇ ನಾನು ನಿಮ್ಮನ್ನ ಪ್ರೀತಿಸ್ತೀನಿ ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇನ್ನು ದೀಪಿಕಾ ಅವರ ಬಾಯಲ್ಲಿ ಕನ್ನಡ ಕೇಳಿ ಕನ್ನಡಿಗರೆಲ್ಲ ಫಿದಾ ಆಗಿಬಿಟ್ಟಿದ್ದಾರೆ. ದೀಪಿಕಾ ಎಷ್ಟೇ ಎತ್ತರಕ್ಕೆ ಬೆಳೆದರೂ ಬೇರು ಇರೋದು ಇಲ್ಲೇ ಅಲ್ವಾ? ಎಷ್ಟೇ ಆದ್ರೂ ನಮ್‌ ಕನ್ನಡದ ಮಗಳು ಅಲ್ವೇನ್ರೋ? ಎಂದು ಹಲವರು ಈ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *