ಬೆಂಗಳೂರು  || ‘ಇನ್ವೆಸ್ಟ್ ಕರ್ನಾಟಕ 2025’ ದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್

ಬೆಂಗಳೂರು || 'ಇನ್ವೆಸ್ಟ್ ಕರ್ನಾಟಕ 2025' ದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2025’ ರಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಭಾಗವಹಿಸಿ ಮಾತನಾಡಿದರು.

“ಉದ್ಯಮ ಕುಟುಂಬದಿಂದ ಬಂದವನು ನಾನು. ಬಳ್ಳಾರಿಯಲ್ಲಿ ನಮ್ಮ ಅಜ್ಜ ಗಣಿಗಾರಿಕೆಯನ್ನು̈ ಆರಂಭಿಸಿದ್ದರು. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದವು” ಎಂದು ಹೇಳಿದರು.

*ಹದಿನೇಳು ವರ್ಷದವನಾಗಿದ್ದಾಗಿನಿಂದ ರಾಜಕೀಯದಲ್ಲಿದ್ದೇನೆ. ನಾಲ್ಕು ಬಾರಿ ಶಾಸಕನಾಗಿ, ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಎರಡು ಬಾರಿ ಕಾರ್ಮಿಕ ಸಚಿವನಾಗಿದ್ದೇನೆ. ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು. ರಾಜಕಾರಣಿಯಾದರೂ ಉದ್ಯಮವೇ ನನ್ನ ಪ್ಯಾಷನ್” ಎಂದು ಹೇಳಿದರು.

ಈ ವೇಳೆ ಹೂಡಿಕೆದಾರರು ಮತ್ತು ಉದ್ಯಮಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದೆ.

Leave a Reply

Your email address will not be published. Required fields are marked *