ಬೆಂಗಳೂರು || ಪರೀಕ್ಷಾರ್ಥಿಗಳಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ, ಅದರಲ್ಲೇನಿದೆ?

ಬೆಂಗಳೂರು || ಪರೀಕ್ಷಾರ್ಥಿಗಳಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ, ಅದರಲ್ಲೇನಿದೆ?

Siddaramaiah

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಾಗಿ ಪರೀಕ್ಷೆ ಬರೆದವರು ಪರಿತಪಿಸುವಂತಾಗಿದೆ. ಪರೀಕ್ಷಾರ್ಥಿಗಳ ಸ್ಥಿತಿ ಅತಂತ್ರವಾಗುವ ಭಯದಲ್ಲಿರುವ ಅಭ್ಯರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ ವರ್ಷ ಡಿಸೆಂಬರ್ನಲ್ಲಿ ಕೆಎಎಸ್ ಮರು ಪರೀಕ್ಷೆ ಬರೆದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗವು (KPSC) ಕರ್ನಾಟಕ ಆಡಳಿತ ಸೇವೆಯ (KAS) ಗೆಜೆಟೆಡ್ ಪ್ರೋಬೆಷ್ನರಿ 384 ವಿವಿಧ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಕಳೆದ ವರ್ಷ 2024ರ ಡಿಸೆಂಬರ್ 29ರಂದು ಮರು ಪರೀಕ್ಷೆ ನಡೆದಿತ್ತು. ಆಗಸ್ಟ್ 27ರಂದು ನಡೆದ ಪರೀಕ್ಷೆಯಲ್ಲಿ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿಯೇ ಮತ್ತೊಂದು ಡಿಸೆಂಬರ್ 29ರಂದು ಪರೀಕ್ಷೆ ನಡೆಸಲಾಗಿದೆ. ಆದರೆ ಆವಾಗಲೂ ಕೆಎಎಸ್ ಪ್ರಶ್ನೆ ಪತ್ರಿಕೆಗಳಲ್ಲಿ ಮತ್ತೆ ಲೋಪದೋಷಗಳು ಕಂಡು ಬಂದಿದೆ. ಹೀಗಾಗಿ ಕೆಎಎಸ್ ನೇಮಕಾತಿ ಗೊಂದಲ ಗೂಡಾಗಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟಿಸಿದ್ದಾರೆ. ಕೆಲವು ಅಭ್ಯರ್ಥಿಗಳು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ನಡೆದ ಮರು ಪರೀಕ್ಷೆಯಲ್ಲಿ ಲೋಪದೋಷ ಉಂಟಾಗಿದೆ. ಹೀಗಾಗಿ ಮರು ಪರೀಕ್ಷೆ ನಡೆಸಬೇಕು. ಇಲ್ಲವೇ ನಮಗೆ ಮುಖ್ಯ ಪರೀಕ್ಷೆಗೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿ ಮನವಿ ಮಾಡಿದ್ದಾರೆ. ಪತ್ರದಲ್ಲಿ ಏನಿದೆ? ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕೆಪಿಎಸ್ಸಿ ಪರೀಕ್ಷೆಗೆ ಸಂಬಂಧ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಸಭೆ ನಡೆದ ಬೆನ್ನಲ್ಲೆ ಸಿಎಂಗೆ ಪತ್ರ ಬರೆಯಲಾಗಿದೆ. ಈ ಪತ್ರವನ್ನು ಅಭ್ಯರ್ಥಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಕೆಪಿಎಸ್ಸಿ ಕಾರ್ಯದರ್ಶಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೂ ರವಾನಿಸಲಾಗಿದೆ.

ಪತ್ರದಲ್ಲಿ ಹಿಂದಿನ ಪರೀಕ್ಷೆಗಳ ಮಹತ್ವದ ಅಂಶಗಳ ಉಲ್ಲೇಖ ಕೆಎಎಸ್ ಪರೀಕ್ಷೆ 2024ಯ ಮರು ಪರೀಕ್ಷೆ ಇಲ್ಲವೇ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಅವಕಾಶ ಕೋರಿ ಬರೆದ ಪತ್ರದಲ್ಲಿ ಹಳೆದ ಪರೀಕ್ಷೆಗಳಲ್ಲಿ ಆದ ಅನ್ಯಾಯವನ್ನು ಉಲ್ಲೇಖಿಸಿದ್ದಾರೆ. ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. 2010, 2011, 2014 ಮತ್ತು 2015 ಹಾಗೂ 2017ರಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳ ಪಟ್ಟಿಯನ್ನು ಪತ್ರದೊಂದಿಗೆ ನೀಡಲಾಗಿದೆ.

ಈ ಮೇಲಿನ ವರ್ಷಗಳಲ್ಲಿ ಕೆಎಎಸ್ ಪರೀಕ್ಷೆ ಬರೆದವರ ಪೈಕಿ ಇಂಗ್ಲಿಷ್ನಲ್ಲಿ ಬರೆದವರು ಮಾತ್ರವೇ ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿಯಲ್ಲಿ ಆಯ್ಕೆ ಆಗಿದ್ದಾರೆ. ಇದರಿಂದ ಸ್ಥಳೀಯ ಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆದವರು ಆಯ್ಕೆ ಆಗಿಲ್ಲ. ಇದರಿಂದ ನಿರಂತರವಾಗಿ ಕೆಪಿಎಸ್ಸಿ ನೇಮಕಾತಿ ವೇಳೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ನೀಡಿದ್ದ ಪ್ರಶ್ನೆ ಪತ್ರಿಕೆಗಳಲ್ಲಿ ಭಾಷಾಂತರದಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿವೆ. ಈ ಕುರಿತು ಸಾಕಷ್ಟು ಮನವಿ ಮಾಡಿದರೂ ಆಯೋಗ ಸ್ಪಂದಿಸಿಲ್ಲ. ಆಂಗ್ಲ ಮಾಧ್ಯಮದ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲವು ಸರಿ ಇದ್ದು, ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷಗಳು ಕಂಡು ಬಂದಿವೆ. ಇದರಿಂದ ಕನ್ನಡಿಗರ ನೇಮಕಾತಿಗೆ ತೊಂದರೆ ಆಗುತ್ತಿದೆ. ಲೋಪದೋಷಗಳಿಂದ ಪ್ರಶ್ನೆಗಳು ಅರ್ಥವಾಗದೇ ಅಂಕಗಳು ಕಡಿಮೆ ಬರುತ್ತವೆ. ಇದೆಲ್ಲ ಗಮನಿಸಿ ಆಗಿರುವ ತಪ್ಪು ಪರಿಗಣಿಸಿ ಮತ್ತೆ ಪರೀಕ್ಷೆ ನಡೆಸಬೇಕು. ಅದಾಗದಿದ್ದರೆ ಪರೀಕ್ಷೆ ಬರೆದವರಿಗೆ ಮುಖ್ಯ ಪರೀಕ್ಷೆ ಬರೆಯಲು ಅನುಮತಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *