ಬೆಂಗಳೂರು || ಮೆಟ್ರೋ ಜಾಲ ಎರಡೇ ವರ್ಷದಲ್ಲಿ 98.60 ಕಿಮೀ ವಿಸ್ತರಣೆ: ದೇವನಹಳ್ಳಿಗೂ ಮೆಟ್ರೋ ಸೇವೆ: ಸಿದ್ದರಾಮಯ್ಯ

ಬೆಂಗಳೂರು || ಮೆಟ್ರೋ ಜಾಲ ಎರಡೇ ವರ್ಷದಲ್ಲಿ 98.60 ಕಿಮೀ ವಿಸ್ತರಣೆ: ದೇವನಹಳ್ಳಿಗೂ ಮೆಟ್ರೋ ಸೇವೆ: ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ನಗರಾದ್ಯಂತ ನಮ್ಮ ಮೆಟ್ರೋ ಸೇವೆ ವಿಸ್ತರಣೆಗೊಳ್ಳುತ್ತಿದೆ. ಹೊಸ ಮಾರ್ಗಗಳು ನಿರ್ಮಾಣಗೊಳ್ಳುತ್ತಿದೆ. ಇದೀಗ ಸರ್ಕಾರವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ನಮ್ಮ ಮೆಟ್ರೋ ದೇವನಹಳ್ಳಿವರೆಗೂ ವಿಸ್ತರಣೆ ಆಗಲಿದೆ ಎಂದು ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲವನ್ನು ಅಭಿವೃದ್ಧಿಪಡಿಸುವ ಗುರಿ ಇದೆ ಎಂದರು.

Karnataka Budget 2025 ಮಂಡನೆ ವೇಳೆ ಬೆಂಗಳೂರು ಸಾರಿಗೆ ಯೋಜನೆ ಬಗ್ಗೆ ವಿವರಿಸಿದ ಅವರು, ‘ನಮ್ಮ ಮೆಟ್ರೋ’ ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುತ್ತಿದೆ. ಪ್ರಸ್ತುತ 68 ನಿಲ್ದಾಣ ಹೊಂದಿರುವ ನಮ್ಮ ಮೆಟ್ರೋ 79.65 ಕಿಲೋ ಮೀಟರ್ ಜಾಲ ಹೊಂದಿದೆ. ಹಸಿರು, ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಿದೆ. ಆಗ ಅದರ ಜಾಲ 98.60 ಕಿಲೋ ಮೀಟರ್ಗೆ ವಿಸ್ತರಣೆ ಆಗಲಿದೆ.

ಹೆಬ್ಬಾಳ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ಯೋಜನೆಗೆ ಕೈಗೆತ್ತಿಕೊಳ್ಳಲು ಪ್ಲಾನ್ ಮಾಡಿದೆ. ಬೆಂಗಳೂರು ನಗರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿವರೆಗೂ ಮೆಟ್ರೋ ಮಾರ್ಗ ನಿರ್ಮಿಸಲಾಗುವುದು. ಬೆಂಗಳೂರು ಗ್ರಾಮಾಂತರಕ್ಕೂ ಸೇವೆ ವಿಸ್ತರಣೆ ಮಾಡಲಾಗುವುದು. ನಮ್ಮ ಮೆಟ್ರೋ ಜಾಲ ನೀಲಿ ಮಾರ್ಗ ಸಿದ್ಧವಾಗುತ್ತಿದೆ. ಬೆಂಗಳೂರ ಏರ್ಪೋರ್ಟ್ನಿಂದ ದೇವನಹಳ್ಳಿಗೆ ವಿಸ್ತರಣೆ ಮಾಡಲು ಯೋಜಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇನ್ನೂ ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 8,916 ಕೋಟಿ ರೂ. ವೆಚ್ಚದಲ್ಲಿ 40.50 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೇಲ್ಸೇತವೆ (Double Decker Flyover) ರಸ್ತೆಯನ್ನು ನಿರ್ಮಿಸಲಾಗುವುದು. ಬೆಂಗಳೂರಿಗೆ ಸಿಕ್ಕಿದ್ದೇನು? * ಕಾರಿಡಾರ್ಗಳನ್ನು (Tunnel) ಕೈಗೊಳ್ಳಲು ಅನುಕೂಲವಾಗುವಂತೆ 19,000 ಕೋಟಿ ರೂ. ಹಣ ನೀಡಾಗುವುದ.

* ವಾಹನ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರದ ಮುಖ್ಯ ರಸ್ತೆಗಳನ್ನು ಸಿಗ್ನಲ್ ಮುಕ್ತಗೊಳಿಸುವ (signal-free) ನಿಟ್ಟಿನಲ್ಲಿ ಈ ಕೆಳಕಂಡ ಉಪಕ್ರಮ ಕೈಗೊಳ್ಳಲಾಗಿದೆ. * ಕಾಲುವೆಯ ಬಫರ್ ಪ್ರದೇಶವನ್ನು ಬಳಸಿಕೊಂಡು 3,000 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲಾಗುವುದು. * ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್ ಆರ್ಟರಿಯಲ್ ರಸ್ತೆ ಜಾಲವನ್ನು 660 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. * ನಗರದಲ್ಲಿ 120 ಕಿ.ಮೀ. ಉದ್ದದ Flyover ಹಾಗೂ Grade Separator ಗಳನ್ನು ನಿರ್ಮಿಸಲಾಗುವುದು.

Leave a Reply

Your email address will not be published. Required fields are marked *