ಬೆಂಗಳೂರು || ರಾಜ್ಯ ಬಜೆಟ್ ನಲ್ಲಿ ನಿರ್ಲಕ್ಷ: ತೆರಿಗೆ ಪಾವತಿ ನಿಲ್ಲಿಸುವುದಾಗಿ ಖಾಸಗಿ ವಾಹನ ಚಾಲಕರ ಎಚ್ಚರಿಕೆ

ಬೆಂಗಳೂರು || ರಾಜ್ಯ ಬಜೆಟ್ ನಲ್ಲಿ ನಿರ್ಲಕ್ಷ: ತೆರಿಗೆ ಪಾವತಿ ನಿಲ್ಲಿಸುವುದಾಗಿ ಖಾಸಗಿ ವಾಹನ ಚಾಲಕರ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಣಿಜ್ಯ ವಾಹನ ಚಾಲಕರು ಮತ್ತು ಮಾಲೀಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತೀಯ ವಾಹನ ಚಾಲಕರ ಕಾರ್ಮಿಕ ಸಂಘ ಮತ್ತು ಸ್ನೇಹಜೀವಿ ಚಾಲಕರ ಕಾರ್ಮಿಕ ಸಂಘದ ಪ್ರತಿನಿಧಿಗಳು ಸಾರಿಗೆ ಇಲಾಖೆ ರಾಜ್ಯ ಸರ್ಕಾರಕ್ಕೆ ಆದಾಯ ತರುವ ಪ್ರಮುಖ ವಲಯಗಳಲ್ಲಿ ಒಂದಾಗಿದೆ. ಆದರೆ ಬಜೆಟ್ನಲ್ಲಿ ಇದನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

“ಚಾಲಕರು ಮತ್ತು ಮಾಲೀಕರ ಸಮುದಾಯದ ಭಾಗವಾಗಿ, ನಾವು ಬಜೆಟ್ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿಗೆ ಅನೇಕ ಸಲಹೆಗಳನ್ನು ನೀಡಿದ್ದೇವೆ. ಆದಾಗ್ಯೂ, ನಮ್ಮ ಯಾವುದೇ ಬೇಡಿಕೆಗಳು ಬಜೆಟ್ನಲ್ಲಿ ಈಡೇರಿಸಿಲ್ಲ” ಎಂದು ಭಾರತೀಯ ವಾಹನ ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ. ಚಾಲಕರ ಹಾಗೂ ಮಾಲೀಕರ ಪ್ರತಿನಿಧಿಗಳು ಮುಖ್ಯಮಂತ್ರಿಗೆ ಶಿಫಾರಸು ಮಾಡಿದ ಪ್ರಮುಖ ಸಲಹೆಗಳಲ್ಲಿ ಹೆದ್ದಾರಿಗಳಲ್ಲಿ ಪ್ರತಿ 100 ಕಿ.ಮೀ.ಗೆ ಚಾಲಕರಿಗೆ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸುವುದು, ಆಂಬ್ಯುಲೆನ್ಸ್ ಸೌಲಭ್ಯ, ಲಾರಿಗಳಿಂದ ಇಂಧನ ಕಳ್ಳತನ ತಡೆಗಟ್ಟಲು ಕ್ರಮ ಮತ್ತು ಪೊಲೀಸ್ ಗಸ್ತು ಹೆಚ್ಚಿಸುವ ಮೂಲಕ ಚಾಲಕರ ದರೋಡೆಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿತ್ತು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಲಕರಿಗಾಗಿ ಇನ್ನೂ ಎರಡು ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಬೇಕು ಮತ್ತು ಒಂದು ದಿನವನ್ನು ‘ಚಾಲಕರ ದಿನ’ ಎಂದು ಗುರುತಿಸಬೇಕು ಎಂದು ಅವರು ವಿನಂತಿಸಿದ್ದರು.

“ಅಪಘಾತಗಳನ್ನು ತಪ್ಪಿಸಲು ಚಾಲಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ನಾವು ವಿನಂತಿಸಿದ್ದೇವೆ. ವಾಹನಗಳ ಬಾಡಿಗೆ ದರಗಳನ್ನು ಏಕರೂಪವಾಗಿ ನಿಗದಿಪಡಿಸಬೇಕು, ಒಂದು ನಗರ, ಒಂದು ದರ ಜಾರಿಗೆ ತರಬೇಕು ಎಂದು ನಾವು ಒತ್ತಾಯಿಸಿದ್ದೇವೆ” ಎಂದು ಸ್ವಾಮಿ ಹೇಳಿದರು.

ತೆರಿಗೆ ಪಾವತಿ ನಿಲ್ಲಿಸುವ ಮೂಲಕ ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಚಳುವಳಿ ಆರಂಭಿಸುವುದಾಗಿ ಒಕ್ಕೂಟ ಎಚ್ಚರಿಸಿದೆ.

Leave a Reply

Your email address will not be published. Required fields are marked *