ಬೆಂಗಳೂರು : ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಬಸ್ ಕೂಡ ಒಂದಾಗಿದೆ. ಈ ಸಾರಿಗೆ ನಗರದ ಜನರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ಬಸ್ಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಬಿಎಂಟಿಸಿಯು ಹೊಸದಾಗಿ ಮೆಟ್ರೋ ಫೀಡರ್ ಮಾರ್ಗದಲ್ಲಿ ಬಸ್ ಸೇವೆಯನ್ನು ಪರಿಚಯಿಸುತ್ತಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಾಹಿತಿ ಹಂಚಿಕೊಂಡಿದ್ದು, ಬಿಎಂಟಿಸಿ ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ 2025ರ ಹೊಸವರ್ಷದ ಮೊದಲ ದಿನದಿಂದ ಅಂದರೆ ಜನವರಿಗೆ 1ರಿಂದ ಪರಿಚಯಿಸಲು ಮುಂದಾಗಿದೆ. ಮೆಟ್ರೋ ನಿಲ್ದಾಣದಿಂದ ಒಳಮಾರ್ಗಗಳಿಗೆ ಹೊಸ ಬಸ್ಸೇವೆಗಳನ್ನು ಒದಗಿಸಲು ಫೀಡರ್ ಬಸ್ಗಳನ್ನು ಪರಿಚಯಿಸಲಿದೆ. ಮಾದಾವರ, ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಗಳಲ್ಲಿ ಈ ಬಸ್ ಸೇವೆ ಲಭ್ಯ ಇರಲಿವೆ. ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ. ಮಾರ್ಗ ಎಲ್ಲಿಂದ ಎಲ್ಲಿವರೆಗೆ ಹಾಗೂ ಎಷ್ಟು ಟ್ರಿಪ್? * ಎಂಎಫ್-49: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ಆಚಾರ್ಯ ಇನ್ಸ್ಟಿಟ್ಯೂಟ್-ತೋಟದಗುಡ್ಡದಹಳ್ಳಿ, ತಮ್ಮೇನಹಳ್ಳಿ ಮಾರ್ಗದಲ್ಲಿ 1 ಬಸ್ 26 ಟ್ರಿಪ್ ಸಂಚರಿಸಲಿದೆ. * ಎಂಎಫ್-50: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ತೋಟದಗುಡ್ಡದಹಳ್ಳಿ, ಕುದುರೆಗೆರೆ ಕಾಲೋನಿ, ಮಾದನಾಯಕನಹಳ್ಳಿ ಮಾರ್ಗದಲ್ಲಿ 2 ಬಸ್ಗಳು 26 ಟ್ರಿಪ್ ಓಡಲಿವೆ.
* ಎಂಎಫ್-51: ಮಾದಾವರ ಮೆಟ್ರೋ ನಿಲ್ದಾಣದಿಂದ ಕಡಬಗೆರೆ ಕ್ರಾಸ್ ಲಕ್ಷ್ಮಿಪುರಕ್ಕೆ ವಡ್ಡರಹಳ್ಳಿ, ಜನಪ್ರಿಯ ಟೌನ್ಶಿಪ್ 2 ಬಸ್ 24 ಟ್ರಿಪ್ ಓಡಲಿವೆ. * ಎಂಎಫ್-52: ಮಾದಾವರ ಮೆಟ್ರೋ ನಿಲ್ದಾಣ ತಾವರೆಕೆರೆಯಿಂದ ಲಕ್ಷ್ಮಿಪುರಕ್ಕೆ ಗಂಗೊಂಡನಹಳ್ಳಿ ಕ್ರಾಸ್, ಕಿತ್ತನಹಳ್ಳಿ, ಮಲ್ಲಸಂದ್ರ, ವರ್ತೂರು ಮೂಲಕ 2 ಬಸ್ಸುಗಳು 18 ಟ್ರಿಪ್ ಓಡಲಿವೆ. ಮಾರ್ಗ ಸಂಖ್ಯೆ & ಸಮಯಗಳ ವಿವರ * ಮಾರ್ಗ ಸಂಖ್ಯೆ ಎಂಎಫ್-49: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ಆಚಾರ್ಯ ಇನ್ಸ್ಟಿಟ್ಯೂಟ್ 7:30, 8:15, 9:05, 10:20, 11:05, 11:45, 12:25, 13:30, 14:10, 14:50, 15:30, 16:10, 17:10 7:50, 8:40, 9:30, 10:45, 11:25, 12:05, 12:45, 13:50, 14:30, 15:10, 15:50, 16:35, 17:35.
* ಮಾರ್ಗ ಸಂಖ್ಯೆ ಎಂಎಫ್-50: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ 7:40, 8:00, 8:20, 8:40, 9:05, 9:25, 9:50, 10:10, 11:00, 11:20, 11:40, 12:00, 12:20, 12:40, 13:00, 13:20, 14:05, 14:25, 14:45, 15:05, 15:25, 15:45, 16:05, 16:25, 16:50, 17:10. * ಮಾರ್ಗ ಸಂಖ್ಯೆ ಎಂಎಫ್-51: ಮಾದಾವರ ಮೆಟ್ರೋ ನಿಲ್ದಾಣಕಡಬಗೆರೆ ಕ್ರಾಸ್ನಿಂದ ಬಿಡುವ ವೇಳೆ 7:15, 7:45, 8:35, 9:05, 10:20, 10:50, 11:40, 12:10, 13:00, 13:30, 14:45, 15:15, 16:05, 17:007:50, 8:20, 9:10, 9:40, 10:55, 11:25, 12:15, 12:45, 14:00, 14:30, 15:20,15:50, 16:50, 17:50. * ಮಾರ್ಗ ಸಂಖ್ಯೆ ಎಂಎಫ್-52: ಮಾದಾವರ ಮೆಟ್ರೋ ನಿಲ್ದಾಣ ತಾವರೆಕೆರೆಯಿಂದ ಬಿಡುವ ವೇಳೆ 6:25, 8:00, 9:00, 10:40, 12:45, 14:15, 15:15, 16:20, 18:50, 21:255:30, 7:25, 9:05, 10:05, 11:40, 14:10, 15:15, 16:45, 17:40, 19:55.