ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ, ರಾಜ್ಯ ಕೃಷಿ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ‘ಸಾವಯವ ಸಿರಿಧಾನ್ಯ ಮೇಳ 2025’ ನಡೆಯಲಿದೆ ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಈ ಮೇಳವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳಕ್ಕೆ ಬುಧವಾರ ಜನವರಿ 23ರಂದು ಚಾಲನೆ ನೀಡಲಿದ್ದಾರೆ.
ಹೌದು, ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-ಸಾವಯವ ಸಿರಿಧಾನ್ಯ ಮೇಳ 2025ವು ನಗರದ ಮೇಕ್ರಿ ವೃತ್ತದ ಬಳಿಯ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜನವರಿ 23ರಿಂದ 25ರವರೆಗೆ ಜರುಗಲಿದೆ. ಇದೊಂದು ಬೃಹತ್ ಕಾರ್ಯಕ್ರಮವಾಗಿದೆ. ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ. ಎಲ್ಲರಿಗೂ ಉಚಿತ ಪ್ರವೇಶ ಇದೆ ಎಂದು ತಿಳಿಸಲಾಗಿದೆ.
ಮೇಳದ ಉದ್ಘಾಟನೆ ಜನವರಿ 23ರಂದು ಬುಧವಾರ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೃಷಿ ಸಚಿವರು ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಮೇಳೆ ಮತ್ತು ಸಾವಯವ ಸಿರಿಧಾನ್ಯ ಮೇಳ 2025ದ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಎನ್. ಚಲುವರಾಯಸ್ವಾಮಿ ಮತ್ತಿತರ ಗಣ್ಯರು, ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಬೆಳೆ ಸಮೀಕ್ಷೆ ಮೇಳದಲ್ಲಿ ರೈತರಿಗೆ, ಅವರ ಜಮೀನಿನ ಬೆಳೆ ವಿವರಗಳನ್ನು ನೀವೇ ”ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್”ನಲ್ಲಿ ದಾಖಲಿಸಿ ಅಪ್ಲೋಡ್ ಮಾಡಲು ಅವಕಾಶ ಇದೆ. ಮಾಹಿತಿ ಅಪ್ಲೋಡ್ ಮಾಡಲು ಸ್ಥಳೀಯ, ಖಾಸಗಿ ನಿವಾಸಿಗಳು, ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ ವೀಕ್ಷಿಸಬಹುದು. ಅಲ್ಲದೇ ಯಾವುದೇ ವ್ಯತ್ಯಾಸಗಳು ಕಂಡು ಬಂದಲ್ಲಿ ‘ಬೆಳೆ ದರ್ಶಕ್ ಆಪ್’ ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಿ ಮೇಳದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ರೈತರು 18004253553 ಗೆ ಕರೆ ಮಾಡಬಹುದು.
ಮೇಳದ ವಿಶೇಷತೆಗಳು, ಪ್ರಮುಖ ಅಂಶಗಳು * ಮೇಳದಲ್ಲಿ 300ಕ್ಕೂ ಹೆಚ್ಚು ಹವಾನಿಯಂತ್ರಿ (ಎಸಿ) ಮಳಿಗೆಗಳು ಸ್ಥಾಪನೆಗೆ ಅವಕಾಶ ನೀಡಲಾಗಿದೆ.
* ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಪ್ರತ್ಯೇಕ ಮಳಿಗೆಗಳು * ದೇಶಿ ತಳಿಗಳ ವಿಶೀಷ್ಟ ಪೆವಿಲಿಯನ್ * ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆ
* ರೈತರ ಗೊಂದಲ ನಿವಾರಣೆಗೆ ಕಾರ್ಯಾಗಾರಗಳು * ಸಾವಯವ ಸಿರಿಧಾನ್ಯ, ಮರೆತುಹೋದ ಖಾದ್ಯಗಳ ಆಹಾ ಮಳಿಗೆಗಳು * ಸಾಂಸ್ಕೃತಿಕ ಕಾರ್ಯಕ್ರಮಗಳು * ಬಿ2ಸಿ ವೇದಿಕೆ * ಬಿ2ಸಿ ವಿಚಾರ ವಿನಿಮಯ ನಡೆಯಲಿದೆ.