ಬೆಂಗಳೂರು || 500 ಹೆಚ್ಚು ಪ್ರಧಿಕಾರಿಗಳಿಂದ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ

ಬೆಂಗಳೂರು || 500 ಹೆಚ್ಚು ಪ್ರಧಿಕಾರಿಗಳಿಂದ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ

ಬೆಂಗಳೂರು: ಬೇಡಿಕೆಗಳು: 1. ಮಾನ್ಯ ಕೇಂದ್ರ ಪೆಟ್ರೋಲಿಯಂ ಸಚಿವರು ಲೋಕಸಭೆಯಲ್ಲಿ ನೀಡಿರುವ ಅನೇಕ ಹೇಳಿಕೆಯಂತೆ ಹಾಗೂ ಯುನಿಫೈಡ್ ಗೈಡ್ಲೈನ್ಸ್ ನಿಯಮದ ಪ್ರಕಾರ 15 km ವ್ಯಾಪ್ತಿ ಮೀರಿ ಕಾರ್ಯಾನಿರ್ವಹಿಸುತ್ತಿರುವ ವಿತರಕರನ್ನು ತಕ್ಷಣ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಆ ರೀತಿ ಕಾರ್ಯಾನಿರ್ವಹಿಸುತ್ತಿರುವ ವಿತರಕರ ವಿರುದ್ಧ ತಕ್ಷಣಕ್ಕೆ ಜಾರಿಗೆ ಬರುವಂತೆ ನಗರ ವಿತರಕರು ತಮ್ಮಕಾರ್ಯಕ್ಷೇತ್ರದ 15 ಕಿ.ಮಿ ವ್ಯಾಪ್ತಿ ಮೀರಿ ಸಿಲಿಂಡರ್ ವಿತರಿಸುವುದನ್ನು ತಡೆಯುವಂತೆ ಸುತ್ತೋಲೆ ಹೊರಡಿಸ ಬೇಕು.

2. ಹಳೆಯ ನಗರ ವಿತರಕರು ಗ್ರಾಮೀಣ ವಿತರಕರಾದ ನಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬಂದು ಯಾವುದೇ ನಿಯಮಗಳನ್ನು ಪಾಲಿಸದೆ ಅನಿಲ ಸಿಲಿಂಡರ್ ವಿರತಣೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಲ್ಲು ಕಠಿಣ ಕ್ರಮ ಜರಿಗೊಳಿಸ ಬೇಕು.

3. ಗ್ರಾಮೀಣ ವಿತರಕರಿಗೆ ಮಾತ್ರ ಎಲ್ಲಾ ನಿಯಮಗಳನ್ನು ಅನುಸರಿಸುವಂತೆ ಕಂಪನಿ ವತಿಯಿಂದ ಒತ್ತಡ ಹೇರುವುದನ್ನು ಮತ್ತು ಮಲತಾಯಿ ದೋರಣೆಯನ್ನು ತಕ್ಷಣ ನಿಲ್ಲಿಸ ಬೇಕು.

4. ಉಜ್ವಲ ಯೋಜನೆ ಅಡಿ ಹಳೆಯ ನಗರ ವಿತರಕರು ಸುಮಾರು 70 ಕಿ.ಮೀ ವರೆಗೂ ಹೊಸ ಸಂಪರ್ಕ ನೀಡಿರುವುದರ ವಿರುದ್ಧ ಸಿಎಜಿ ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ, ಆ ವರದಿಯ ಸಲಹೆ ಸೂಚನೆಗಳನ್ನು ತಕ್ಷಣ ಪಾಲನೆಗೆ ತರಬೇಕು.

5. ಗ್ಯಾಸ್ ಗೇಟ್ ಹಗರಣದಡಿ ಹಳೆಯ ವಿತರಕರು ಹೊಸ ವಿತರಕರಿಗೆ ಗ್ರಾಹಕರನ್ನು ವರ್ಗಾವಣೆ ಮಾಡದೆ ತಾವೇ ಸುಮಾರು 50 ರಿಂದ 70 km ದೂರ ಕ್ರಮಿಸಿ ಪ್ರತಿ 1 km ಗೆ 1.60 paise ದಂತೆ ಡೆಲಿವರಿ ಶುಲ್ಕ ವನ್ನು ಪಡೆದು ಗ್ರಾಮೀಣ ಭಾಗದ ಜನರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಅದರ ವಿರುದ್ದ ತಕ್ಷಣ ಕಠಿಣ ಕ್ರಮ ಜರಿಗೊಳಿಸ ಬೇಕು.

6. ಹೊಸದಾಗಿ ನೇಮಕಗೊಂಡಿರುವ ಅನಾನುಭವಿ ಗ್ರಾಮೀಣ ವಿತರಕರಿಗೆ ಸಣ್ಣಪುಟ್ಟ ತಪ್ಪುಗಳಿಗೂ ಅಧಿಕ ಪ್ರಮಾಣದಲ್ಲಿ ವಿಧಿಸಿರುವ ದಂಡವನ್ನು ರದ್ದುಪಡಿಸ ಬೇಕು.

7. ಹಳೇಯ ವಿತರಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 15 ಕಿಮಿ ವ್ಯಾಪ್ತಿ ಮೀರಿದ ಗ್ರಾಹಕರಿಗೆ ಸಿ.ಎಸ್.ಸಿ., ಹೆಚ್.ಪಿ.ಸಖಿ, ಉರ್ಜಾದೇವಿ ಎಂಬ ಸೇವೆ ತಕ್ಷಣ ಕೈ ಬಿಡಬೇಕು.

8. ಸುಮಾರು 60-70 ಕಿಮಿ ದೂರದಲ್ಲಿ ಸಂಪರ್ಕ ನೀಡಿ ಗ್ರಾಮೀಣ ಜನರಿಗೆ ಎಲ್ಲಾ ರೀತಿಯ ತುರ್ತು ಸೇವೆಗಳಿಂದ ವಂಚಿತರಾಗಿ ಮಾಡಿ ಅವಗಡಕ್ಕೆ ಕಾರಣರಾಗಿರುವ ಹಳೆಯ ನಗರ ವಿತರಕರ ವಿರುದ್ದ ತಕ್ಷಣ ಕಠಿಣ ಕ್ರಮ ಜರಿಗೊಳಿಸ ಬೇಕು ಮತ್ತು ಆ ರೀತಿ ಅಪಘಾತಕೆ ಒಳಗಾದವರಿಗೆ ತಕ್ಷಣ ಹಳೇಯ ವಿತರಕರಿಂದ ಪರಿಹಾರ ಕೊರಿಸ ಬೇಕು.

9. ಅನೇಕ ವರ್ಷಗಳಿಂದ ಒಂದೇ ಕಚೇರಿಯಲ್ಲಿ ಅಧಿಕಾರ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾಯಿಸಿ ಸಮರ್ಪಕ ಅಧಿಕಾರಿಗಳ ನೇಮಕ ಮಾಡಬೇಕು.

10.ಗ್ರಾಮೀಣ ಹಾಗು ಹೊಸ ವಿತರಕರಿಗಿ ಸರಿಯಾದ ಸಮಯಕ್ಕೆ ಸೂಕ್ತ ತರಬೇತಿಗಳನ್ನು ನೀಡಬೇಕು

11 ಓ ಎಂ ಸಿ ಹಾಗು ಗ್ರಾಮೀಣ ವಿತರಕರ ನಡುವೆ ಉತ್ತಮ ಸ್ನೇಹಮಹಿ ವಾತಾವರಣ ನಿರ್ಮಾಣವಾಗುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿನ ಬೇಕು.

ಪ್ರತಿಭಟನೆಯಲ್ಲಿ  ಗೌರವ ಅಧ್ಯಕ್ಷರು ಬಸವರಾಜ,  ಅಧ್ಯಕ್ಷರು ತಿಪ್ಪಣ್ಣ ವೈ ಎನ್, ಲಾಯರ್  ವೆಂಕಟೇಶ್ ಸೇರಿದಂತೆ ಒಕ್ಕೂಟದ ರಾಜ್ಯದ  ಎಲ್ಲಾ ಪ್ರಧಿಕಾರಿಗಳು  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ….

Leave a Reply

Your email address will not be published. Required fields are marked *