ಬೆಂಗಳೂರು : ಬೆಂಗಳೂರಿನಲ್ಲಿ ತಿರ್ಪೆ ಶೋಕಿ ಮಾಡುತ್ತಿದ್ದ ಕಾರು ಮಾಲೀಕರೊಬ್ಬರಿಗೆ ಬೆಂಗಳೂರು ನಗರ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಜಾಲಿ ಜಾಲಿ… ಎಲ್ಲಾ ಜಾಲಿ ನಾಯಿ ಜೊತೆ ನಾನು ಹೋಗ್ತಾ ಇದ್ದೀನಿ ರೈಡ್ ನೋಡಿ ಎಂದವನ ಮೇಲೆ ಈಗ ಕಂಪ್ಲೇಟ್ ಆಗಿದೆ. ಬೆಂಗಳೂರಿನಲ್ಲಿ ಕೆಲವು ಕಾರು ಮಾಲೀಕರು ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವಂತೆ ಕಾರ್ ಚಲಾಯಿಸುವುದು ಇದೆ. ಇದೀಗ ಆರೋಪಿ ಹರೀಶ್ ಎನ್ನುವ ವ್ಯಕ್ತಿ ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೆ ಹಾಗೂ ನಿಯಮ ಉಲ್ಲಂಘನೆ ಮಾಡಿ ಕಾರು ಚಲಾಯಿಸಿರುವುದು ವರದಿಯಾಗಿದೆ. ಅಷ್ಟೇ ಅಲ್ಲ ಕಾರ್ನ ಟಾಪ್ನಲ್ಲಿ (ರೂಪ್)ನಲ್ಲಿ ನಾಯಿಗಳನ್ನು ಕೂರಿಸಿಕೊಂಡು ವಾಹನ ಚಲಾಯಿಸಲಾಗಿದೆ. ನಾಯಿಗಳ ರೈಡ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ (ಟ್ರಾಫಿಕ್ ರೂಲ್ಸ್) ನಿಯಮ ಉಲ್ಲಂಘನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗೋಗಿದೆ. ಬೆಂಗಳೂರಿನಲ್ಲಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಕೆಲವರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದೇ ಜಾಸ್ತಿ. ಅದೇ ರೀತಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವ್ಯಕ್ತಿಗೆ ಬೆಂಗಳೂರು ಪೊಲೀಸರು ಸರಿಯಾಗಿ ಪಾಠ ಕಲಿಸಿದ್ದಾರೆ.
ಬೆಂಗಳೂರಲ್ಲಿ ಡಿಸೆಂಬರ್ 3ಕ್ಕೆ ಬೆಂಗಳೂರಿನ ಕಲ್ಯಾಣ ನಗರದಲ್ಲಿ ವ್ಯಕ್ತಿಯೊಬ್ಬರ ತನ್ನ ಕಾರ್ನ ರೂಫ್ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದಾನೆ. ಆದರೆ, ಇದನ್ನು ಪ್ರಶ್ನೆ ಮಾಡಿದವರ ಮೇಲೆಯೂ ಆತ ಎಗರಾಡಿದ್ದು, ಕೆಟ್ಟ ಪದಗಳನ್ನು ಬಳಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗುರುವಾರ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.
ಏನಿದು ಘಟನೆ: ಬೆಂಗಳೂರಿನಲ್ಲಿ ಕಾರ್ ಚಾಲಕನೊಬ್ಬ ತನ್ನ ಕಾರಿನ ರೂಫ್ನ ಮೇಲೆ ಒಂದಲ್ಲ ಎರಡಲ್ಲ ಮೂರು ನಾಯಿಮರಿಗಳನ್ನು ಕೂರಿಸಿಕೊಂಡು ಮೆರವಣಿಗೆ ನಡೆಸಿದ್ದಾನೆ. ಆ ನಾಯಿಗಳು ಕಾರಿನ ಮೇಲಿಂದ ಬೀಳುವಂತೆ ಇರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಕಲ್ಯಾಣ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರು ಚಲಾಯಿಸಲಾಗಿದೆ. ಆದರೆ, ಇದನ್ನು ನೋಡಿದ ಸಾರ್ವಜನಿಕರು ಕಾರು ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆತ ನಿಮಗ್ಯಾಕೆ ನನ್ನ ಕಾರು ನನ್ನ ನಾಯಿ ಎಂಬರ್ಥದಲ್ಲಿ ಮಾತನಾಡಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳನ್ನೂ ಬಳಸಿದ್ದಾನೆ ಎನ್ನಲಾಗಿದೆ.
ಪೊಲೀಸರಿಂದ ದೂರು ದಾಖಲು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಈ ವ್ಯಕ್ತಿಯ ವಿಳಾಸವನ್ನು ಪತ್ತೆ ಮಾಡಿ, ಕಾರು ಚಾಲಕನ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಬೆಂಗಳೂರು ನಗರ ಪೊಲೀಸರು ಈ ವಿಷಯವನ್ನು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಕಲ್ಯಾಣ್ ನಗರದ 80 ಅಡಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಕಾರಿನ ಮೇಲೆ ನಾಯಿಗಳನ್ನು ಕೂರಿಸಿಕೊಂಡು ಅವುಗಳಿಗೆ ಭಯಕೊಟ್ಟಿದ್ದು, ಅಲ್ಲದೇ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ವಾಹನ ಚಲಾಯಿಸಿದ್ದಾರೆ.