ಬೆಂಗಳೂರು || ಬೆಂಗಳೂರಿನ ಈ ಪ್ರದೇಶಗಳಲ್ಲಿ ಜನವರಿ 10ರಂದು ಕರೆಂಟ್ ಕಟ್

ಬೆಂಗಳೂರು || ಬೆಂಗಳೂರಿನ ಈ ಪ್ರದೇಶಗಳಲ್ಲಿ ಜನವರಿ 10ರಂದು ಕರೆಂಟ್ ಕಟ್

ಬೆಂಗಳೂರು: ವಿದ್ಯುತ್ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ನಾಳೆ ಅಂದರೆ ಜನವರಿ 10 ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಕರೆಂಟ್ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

KPTCL ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವ ಹಿನ್ನೆಲೆ 66/11ಕೆವಿ ವೆಲ್ ಕ್ಯಾಸ್ಟ್ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಜನವರಿ 10 2025ರ ಬೆಳಗ್ಗೆ 10 ರಿಂದ ಸಂಜೆ 3:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾಂ ಮಾಹಿತಿ ನೀಡಿದ್ದು, ಜನವರಿ 10, 2025ರಂದು ರವೀಂದ್ರ ನಗರ, ಪ್ರಸಹನಾಥ್ ನಗರ, ಸಂತೋಷ್ ನಗರ, ಏರ್ ಫೋರ್ಸ್ ಜಾಲಹಳ್ಳಿ ವೆಸ್ಟ್, ವೈಷ್ಣವಿ ನಾಕಾಶ್ತ್ರ ಅಪಾರ್ಟ್ಮೆಂಟ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಗತಿ ರಸ್ತೆ, ತ್ರಿವೇಣಿ, ಎಸ್ಎಚ್ವಿ, ಡಿಎಂಜಿ, ಕೃಷ್ಣಾ ಫ್ಯಾಚ್ರಿಕೇಶನ್ಸ್ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಜೆಮಿನಿ ಇಂಡಸ್ಟ್ರೀಸ್ ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಪ್ರಿಸ್ ಐಎಲ್, ಎಂಎಸ್ಐಎಲ್, ವಿಪ್ರೋವೆಲ್ಕಾಸ್ಟ್ ಫ್ಯಾಕ್ಟರಿ, ಐಟಿಸಿ, ವೋಲ್ ವೋ, ಏವೆರಿ ಡೆನ್ನಿಸನ್, ಹಿಟಾಚ್ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ (ಬೆವಿಕಂ) ಗ್ರಾಮೀಣ ಉಪವಿಭಾಗ-1ರ ಬೆಳ್ಳಾವಿ ಉಪಸ್ಥಾವರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಇಂದು (ಜನವರಿ 9) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ಕರೆಂಟ್ ಕಟ್ಟಾಗಲಿದೆ ಎಂದು ತಿಳಿಸಿದೆ. ತುಮಕೂರಿನ ಬೆಳ್ಳಾವಿ ಟೌನ್, ಸುಗುಣ, ದೊಡ್ಡ ವೀರನಹಳ್ಳಿ, ಸಿಂಗೀಪುರ, ದೊಡ್ಡೇರಿ, ಕಾಗ್ಗೆರೆ, ಅಸಲಿಪುರ, ಮಶಣಾಪುರ, ಹರಿವಣಪುರ, ನಾಗಾರ್ಜುನಹಳ್ಳಿ, ಚೆನ್ನೇನಹಳ್ಳಿ, ಕರಲುಪಾಳ್ಯ, ಬಾಲ್ಯ, ಟಿ ಗೊಲ್ಲಹಳ್ಳಿ, ಬೆಳ್ಳಾವಿ ಗ್ರಾಮ ಪಂಚಾಯಿಗೆ ಸೇರಿದ ಇತರೆ ಹಳ್ಳಿಗಳಲ್ಲಿ ವಿದ್ಯುತ್ ಪುರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *