ಬೆಂಗಳೂರು || ಗೋವುಗಳ ಮೇಲಿನ ಅಮಾನುಷ ಕ್ರೌರ್ಯ ಖಂಡಿಸಿ ರೈತ ಮೋರ್ಚಾದ ಪ್ರತಿಭಟನೆ

ಬೆಂಗಳೂರು || ಗೋವುಗಳ ಮೇಲಿನ ಅಮಾನುಷ ಕ್ರೌರ್ಯ ಖಂಡಿಸಿ ರೈತ ಮೋರ್ಚಾದ ಪ್ರತಿಭಟನೆ

ಬೆಂಗಳೂರು: ಗೋವುಗಳ ಕೆಚ್ಚಲು ಕತ್ತರಿಸುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಅವರು ಖಂಡಿಸಿದ್ದಾರೆ.

ಗೋವುಗಳ ಮೇಲೆ ಇತ್ತೀಚೆಗೆ ನಡೆಯುತ್ತಿರುವ ಅಮಾನುಷ ಕ್ರೌರ್ಯವನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಇಂದು ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ  ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರ ತನ್ನ ಜವಾಬ್ದಾರಿ ಮರೆತಿದೆ ಎಂದು ಆರೋಪಿಸಿದÀರು. ಈ ದುಷ್ಕøತ್ಯಕ್ಕೆ ಸಹಕರಿಸಿದವರು, ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕಿತ್ತು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳು ಮತ್ತು ಸಚಿವ ವೆಂಕಟೇಶ್ ಅವರು ಹಸು ಕೊಡುವುದಾಗಿ ಹೇಳಿದ್ದಾರೆ. ಇದು ಕೋಟಿಗಟ್ಟೆಲೆ ಗೋವುಗಳನ್ನು ಸಾಕುವವರು ಮತ್ತು ಹಿಂದೂಗಳ ಮನಸ್ಸಿಗೆ ಘಾಸಿ ತಂದಿದೆ. ನಿನ್ನೆ ಕಾಂಗ್ರೆಸ್ ಸಚಿವರ ಮನೆಗೆ ಗೋಮಯ ಹಚ್ಚಿ ಪ್ರತಿಭಟನೆ ಮಾಡಿದ್ದೇವೆ ಎಂದು ತಿಳಿಸಿದರು.

ಇದು ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವ ದುಷ್ಕøತ್ಯ ಎಂದು ಅವರು ಆಕ್ಷೇಪಿಸಿದರು. ಈ ಸರಕಾರ ಗೋಶಾಲೆಗೆ ಬಿಡುಗಡೆ ಮಾಡಿದ ಅನುದಾನವನ್ನು ರದ್ದು ಮಾಡಿದೆ ಎಂದು ಟೀಕಿಸಿದರು.

ಇವತ್ತು ಕೂಡ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ಮುಖಕ್ಕೆ ಗೋಮಯ ಹಾಕಿ ಸಂಕ್ರಾಂತಿಯನ್ನು ಆಚರಿಸುತ್ತೇವೆ ಎಂದು ಪ್ರಕಟಿಸಿದರು. ಅವರ ಕೊಳಕು ಮನಸ್ಸು ಶುದ್ಧೀಕರಣವಾಗಲಿ; ಅವರು ಗೋವುಗಳನ್ನು ರಕ್ಷಿಸುವ ಯೋಚನೆ ಮಾಡಲಿ ಎಂದು ತಿಳಿಸಿದರು.

ಅವರ ಆಲೋಚನೆಯಲ್ಲಿ ಬದಲಾವಣೆ ಆಗಿ ಗೋವುಗಳಿಗೆ ರಕ್ಷಣೆ ನೀಡಿ, ಹಿಂದೂಗಳ ಮನಸ್ಸಿಗೆ ಘಾಸಿ ಮಾಡದಂತಿರಲಿ ಎಂಬ ಆಶಯವನ್ನು ಹೊಂದಿರುವುದಾಗಿ ಹೇಳಿದರು. ಇದೊಂದು ಸಾಂಕೇತಿಕ ಹೋರಾಟ ಎಂದು ಅವರು ತಿಳಿಸಿದರು. ಗೋವುಗಳನ್ನು ಕಾಮಧೇನು, ಮುಕ್ಕೋಟಿ ದೇವತೆಗಳು ಅವುಗಳಲ್ಲಿ ವಾಸ ಇವೆ ಎಂದು ಭಾವಿಸುತ್ತೇವೆ ಎಂದು ವಿವರಿಸಿದರು.

ರಕ್ಷಿಸಿ ರಕ್ಷಿಸಿ ಗೋವುಗಳನ್ನು ರಕ್ಷಿಸಿ, ಉಳಿಸಿ ಉಳಿಸಿ ಗೋವುಗಳನ್ನು ಉಳಿಸಿ, ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ- ಇವೇ ಮೊದಲಾದ ಘೋಷಣೆಗಳನ್ನು ಕೂಗಲಾಯಿತು. ರೈತ ಮೋರ್ಚಾದ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಅಶೋಕ್ ಮುಕ್ಸಂದ್ರ, ರೈತ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *