ಬೆಂಗಳೂರು || ಕಾರಿಗೆ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ: ಗಾಯಾಳಿಗೆ ಸಹಾಯ ಮಾಡಿದ ಚಾಲಕನಿಗೆ ಪೊಲೀಸ್ ಸಂಕಷ್ಟ!

ಬೆಂಗಳೂರು || ಕಾರಿಗೆ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ: ಗಾಯಾಳಿಗೆ ಸಹಾಯ ಮಾಡಿದ ಚಾಲಕನಿಗೆ ಪೊಲೀಸ್ ಸಂಕಷ್ಟ!

ಬೆಂಗಳೂರು: ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ವಾಹನ ಹೆಚ್ಚಾದಂತೆ ಸಂಚಾರ ದಟ್ಟಣೆಗಳು ಮತ್ತು ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇಲ್ಲೊಂದು ಅಪಘಾತ ವರದಿ ಆಗಿದ್ದು, ಮಾನವೀಯತೆ ಮೆರೆದ ವ್ಯಕ್ತಿಯ ಮೇಲೆ ಪೊಲೀಸರು ಅಹಿತಕರವಾಗಿ ವರ್ತಿಸಿರುವ ಘಟನೆ ನಡೆದಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಮಾರ್ಚ್ 18ರಂದು ಎಲೆಕ್ಟ್ರಾನಿಕ್ ಸಿಟಿ ಕೆಡೆಗೆ ಬರುವಾಗ ಬೊಮಸಂದ್ರ ಫ್ಲೈಓವರ್ ಮೇಲೆ ಕಾರಿಗೆ ವೇಗವಾಗಿ ಹಿಂದಿನಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ. ‘ಸಿಟಿಜನ್ ಮೂವ್ಮೆಂಟ್ ಈಸ್ಟ್ ಬೆಂಗಳೂರು’ ಎಕ್ಸ್ ಖಾತೆಯಿಂದ ಹಮಚಿಕೊಳ್ಳಲಾಗಿದೆ. ಘಟನೆ ಬಳಿಕ ಪೊಲೀಸರ ನಡೆ ಜನರಲ್ಲಿ ಬೇಸರ ತರಿಸಿದೆ.

ಅಂದು ಸಂಜ್ ಎಸಂಜೆ 4:50 ಗಂಟೆಗೆ ಹೊತ್ತಿಗೆ ಬೊಮಸಂದ್ರ ಫ್ಲೈಓವರ್ನಲ್ಲಿ ಕಾರು ಚಲಿಸುತ್ತಾ ಬಂದಿದೆ. ನಂತರ ಮೇಲ್ಸೇತುವೆ ಎಡ ಬದಿಗೆ ಕಾರು ನಿಧಾನವಾಗುತ್ತಾ ನಿಲ್ಲುತ್ತದೆ. ಇದನ್ನು ಗಮನಿಸದ ಸ್ಕೂಟರ್ ಸವಾರು ವೇಗವಾಗಿ ಬಂದು ಕಾರಿನ ಹಂಬದಿಗೆ ಗುದ್ದಿದ್ದು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಡಿಕ್ಕಿ ರಭಸಕ್ಕೆ ಕಾರು ಹಿಂಬದಿ ಡ್ಯಾಮೇಜ್ ಆಗಿದೆ. ಅಲ್ಲದೇ ಸ್ಕೂಟರ್ ಸವಾರನಿಗೆ ತಲೆ ಗಾಯವಾಗಿದೆ. ರಸ್ತೆಗೆ ಬಿದ್ದಿದ್ದ ಅವರನನ್ನು ಕಾರು ಚಾಲಕ ಆಸ್ಪತ್ರೆಗೆ ಸೇರಿಸುವ ಮೂಲಕ ಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಮನುಷ್ಯನಾಗಿ ಮಾನವೀಯತೆ ಮೆರೆದಿದ್ದಾರೆ. ಗಾಯಾಳುವನ್ನು ನಾರಾಯಣ ಹೃದಯಾಲಯಕ್ಕೆ ದಾಖಲಿಸಿ, ವೈದ್ಯಕೀಯ ವೆಚ್ಚ ಸಹ ಭರಿಸಿದ್ದಾನೆ ಎಂದು ವಿಡಿಯೋ ಜೊತೆಗೆ ವಿವರಣೆ ಕೊಡಲಾಗಿದೆ.

ಗಾಯಾಳು ಆಸ್ಪತ್ರೆ ಸೇರಿದ ಕಾರು ಚಾಲಕ ಹತ್ತಿರದ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲಿ ಪೊಲೀಸ್ ಅಧಿಕಾರಿಗಳಿಗೆ ಘಟನೆಯ ಬಗ್ಗೆ ವಿವರಿಸಿ ವರದಿ ಮಾಡಲು ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಬೆಂಬಲ ನೀಡುವ ಬದಲು, ಪೊಲೀಸರು ಕಾರಿನ ಕೀ ಕಿತ್ತುಕೊಂಡಿದ್ದಾರೆ. ಕೀಲಿ ವಶಕ್ಕೆ ಪಡೆದು ಒಂದು ದಿನದ ಬಳಿಕ ಬಂದು ಪಡೆಯುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರ ಪೊಲೀಸ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಎಕ್ಸ್ ಖಾತೆ ಹ್ಯಾಂಡಲ್ಗೆ ಈ ವಿಡಿಯೋ ಟ್ಯಾಗ್ ಮಾಡಲಾಗಿದೆ.

ಸಂತ್ರಸ್ತ ಕಾರು ಚಾಲಕ ಪೋಸ್ಟ್ ಸತಃ ಕಾರಿನ ಚಾಲಕ ಸಂತ್ರಸ್ತ ಸತೀಶ್ ಕುಮಾರ್ ಜಯರಾಜ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸರೇ ನನಗೆ ಅಪಘಾತವಾಗಿದೆ… ದ್ವಿಚಕ್ರ ವಾಹನ ಸವಾರರೊಬ್ಬರು ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅವನ ತಲೆಗೆ ಪೆಟ್ಟು ಬಿದ್ದಿದೆ. ನಾನು ಅವನನ್ನು ಬೊಮ್ಮಸಂದ್ರ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೇನೆ. ಇನ್ನೇನು ಮಾಡಬೇಕು ದಯವಿಟ್ಟು ಸಲಹೆ ಕೊಡಿ ಎಂದು ಫೋಟೋ, ವಿಡಿಯೋ ಶೇರ್ ಮಾಡಿಕೊಂಡು ಮನವಿ ಮಾಡಿದ್ದಾರೆ.

ನಾನು ಮೂರ್ಖನಂತೆ ಪೊಲೀಸರಿಗೆ ಕರೆ ಮಾಡಿದೆ: ಅಸಹಾಯಕತೆ ವಕೀಲರ ಸಹಾಯ ಪಡೆದು ಪೊಲೀಸರ ಬಳಿ ಹೋದೆ. ಎಎಸ್ಐ ಜೊತೆ ಮಾತನಾಡಿದ್ದು, ಆಸ್ಪತ್ರೆಯಿಂದ ಹೇಳಿಕೆ ಬರುವವರೆಗೂ ಕಾರು ಬಿಡುವುದಿಲ್ಲ ಎಂದಿದ್ದಾರೆ. ಈವರೆಗೆ ಆಸ್ಪತ್ರೆಗೆ ಜೊತೆಗೆ ಯಾವುದೇ ಸಂವಹನ ನಡೆಸಿಲ್ಲ. ನನ್ನು ಹೆಂಡತಿ ತುಂಬು ಗಂರ್ಭಿಣಿ, ಅವರಿಂದ ಕರೆ ಬಂದಾಗ ವಾಹನ ಬದಿಗೆ ಹಾಕಿದೆ. ಅದೇ ನನ್ನ ತಪ್ಪು ಎಂದಿದ್ದಾರೆ. ವಕೀಲರಿದ್ದರು ನನ್ನ ಕಾರು ನನಗೆ ಸಿಗುತ್ತಿಲ್ಲ. ಕಾರು ಸಿಗಲು ಇನ್ನೂ ಎರಡು ದಿನ ಕಾಯಬೇಕಿದೆ. ಗಾಯಾಳು ಕುಟುಂಬಸ್ಥರು ಪೊಲೀಸ್ ಠಾಣೆಗೆ ಬರಲು ಸಿದ್ಧರಿಲ್ಲ. ನಾನು ಮೂರ್ಖನಂತೆ ಪೊಲೀಸರಿಗೆ ಕರೆ ಮಾಡಿದ್ದೇನೆ ಎಂದು ಬೇರೆಯವರಿಗೆ ಸಹಾಯ ಮಾಡಿದ ಬಳಿಕವು ತಮ್ಮ ನೋವು ಮತ್ತು ಅಸಹಾಯಕತೆಯನ್ನು ಅವರು ತೋಡಿಕೊಂಡಿದ್ದಾರೆ. ಜೊತೆಗೆ ಅವರ ಕಾರಿನ ಹಿಂಬದಿ ಹಾನಿಯಾಗಿದೆ.

Leave a Reply

Your email address will not be published. Required fields are marked *