ಬೆಂಗಳೂರು : ಜೂನ್ 4 ರಂದು ನಗರದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ವಿನಾಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ತನ್ನ ಮಾನ ಉಳಿಸಿಕೊಳ್ಳಲು ಪ್ರಯತ್ನಿಸಿದ ಸರ್ಕಾರದ ಪ್ರಯತ್ನಕ್ಕೆ ಮುಖಭಂಗವಾಗಿದೆ. ಪೊಲೀಸ್ ಅಧಿಕಾರಿಗಳನ್ನು ಆಧಾರವಿಲ್ಲದೆ ಸಸ್ಪೆಂಡ್ ಮಾಡಿರುವುದು ತಪ್ಪೆಂದು ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ ಹೇಳಿದೆ.

ಇದೇ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪ್ರಶ್ನೆ ಕೇಳಿದಾಗ ಅವರು ತಮ್ಮ ಎಂದಿನ ಗೊತ್ತಿಲ್ಲ, ಆದೇಶ ಪ್ರತಿ ನೋಡಿಲ್ಲ ಪ್ರತಿಕ್ರಿಯೆಗಳಿಗೆ ಶರಣಾದರು. ಸಿಎಟಿ ಚಾಟಿ ಬೀಸಿ ಮೂರುದಿನ ಕಳೆದರೂ ಪರಮೇಶ್ವರ್ ತಾನಿನ್ನೂ ಆದೇಶದ ಪ್ರತಿ ನೋಡಿಲ್ಲ ಅಂತ ಹೇಳಿರುವುದು ಆಶ್ಚರ್ಯ ಮೂಡಿಸುತ್ತದೆ.