ಬೆಂಗಳೂರು || ಬೆಂಗಳೂರಲ್ಲಿ ಕಾಂಗ್ರೆಸ್ನಿಂದ ತಮಿಳು ದರ್ಬಾರ್: ರೊಚ್ಚಿಗೆದ್ದ ಕನ್ನಡಿಗರು!

ಬೆಂಗಳೂರು || ಬೆಂಗಳೂರಲ್ಲಿ ಕಾಂಗ್ರೆಸ್ನಿಂದ ತಮಿಳು ದರ್ಬಾರ್: ರೊಚ್ಚಿಗೆದ್ದ ಕನ್ನಡಿಗರು!

ಬೆಂಗಳೂರು: ಬೆಂಗಳೂರಿನಲ್ಲಿ ಶಾಂತಿನಗರದಲ್ಲಿ ತಮಿಳು ದರ್ಬಾರ್ ಶುರುವಾಗಿದ್ದು, ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾನವೀಯತೆಯ ಹಬ್ಬ ಎನ್ನುವ ಹೆಸರಿನಲ್ಲಿ ತಮಿಳು ದರ್ಬಾರ್ ಶುರುವಾಗಿದ್ದು, ಇದಕ್ಕೆ ಕಾಂಗ್ರೆಸ್ ಶಾಸಕರ ಕಾರ್ಯಕ್ರಮವೇ ಕಾರಣ. ಪ್ರಚಾರದ ಹೆಸರಿನಲ್ಲಿ ಬೆಂಗಳೂರಿನಲ್ಲಿ ತಮಿಳು ಹಾಡು ಹಾಕಲಾಗುತ್ತಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಏನಿದು ಮಾನವೀಯತೆಯ ಕಾರ್ಯಕ್ರಮ ವಿರೋಧವೇಕೆ, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನೋಡೋಣ ಬನ್ನಿ.

ಬೆಂಗಳೂರಿನಲ್ಲಿ ಹಿಂದಿ – ಕನ್ನಡ ವಿವಾದ ತೀವ್ರವಾಗಿತ್ತು. ಇದರ ನಡುವೆಯೇ ಬೆಂಗಳೂರಿನಲ್ಲಿ ತಮಿಳು ಹಾಗೂ ಕನ್ನಡ ವಿವಾದ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಶಾಂತಿ ನಗರ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಅವರು ಆಯೋಜಿಸಿರುವ ಕಾರ್ಯಕ್ರಮ. ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾನವೀಯತೆಯ ಹಬ್ಬ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ತಮಿಳು ದರ್ಬಾರು ಜೋರಾಗಿದ್ದು, ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಶಾಂತಿ ನಗರದಲ್ಲಿ ಮಾನವೀಯತೆಯ ಹಬ್ಬ ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು. ಇದರ ಪ್ರಚಾರದ ಭಾಗವಾಗಿ ಖಾಸಗಿ ವಾಹನವೊಂದರಲ್ಲಿ ತಮಿಳು ಹಾಡುಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಪ್ರತಿದಿನ ಈ ವಾಹನದಲ್ಲಿ 10ರಿಂದ 15 ತಮಿಳುಹಾಡುಗಳನ್ನು ಹಾಕಲಾಗುತ್ತಿದೆ. ಕರ್ನಾಟಕದಲ್ಲಿ ವಲಸಿಗರನ್ನು ಮೆಚ್ಚಿಸುವ ಹಾಗೂ ವೋಟ್ ಬ್ಯಾಂಕ್ ರಾಜಕೀಯ ನಡೆಯುತ್ತಿದೆ ಎಂದು ಬೆಂಗಳೂರಿನ ಕನ್ನಡಿಗರು ಆರೋಪಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ: ಇನ್ನು ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕವನ್ನು ವಲಸಿಗರ ಸ್ಥಳವನ್ನಾಗಿ ಮಾಡಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಇರುವುದೇ ಕರ್ನಾಟಕದಲ್ಲಿ ವಲಸಿಗರನ್ನು ಉದ್ಧಾರ ಮಾಡುವುದಕ್ಕೆ ಎಂದು ಕೆಲವರು ಕಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಹ್ಯಾರಿಸ್ ಅವರಿಗೆ ಧನ್ಯವಾದಗಳು, ಇಂದು ತಮಿಳುಹಾಡುಗಳನ್ನು ಹಾಕಿದ್ದೀರಿ. ನಾಳೆ ಮಲಯಾಳಂ ಹಾಡುಗಳನ್ನು ಹಾಕಿ. ಆದರೆ ಕನ್ನಡದ ಹಾಡುಗಳನ್ನು ಮಾತ್ರ ಹಾಕಬೇಡಿ ಎಂದಿದ್ದಾರೆ.

Leave a Reply

Your email address will not be published. Required fields are marked *