ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ಮುಗಿದಿದೆ. ಆದರೆ ಹೊಸ ವರ್ಷದ ಆಫರ್ ಮುಗಿದಿಲ್ಲ. ಹೊಸ ವರ್ಷ 2025ರ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಈ ವರ್ಷಾಂತ್ಯದ ವರೆಗೆ ಕಡಿಮೆ ಬೆಲೆಗೆ ಬಿಯರ್ ಸೇರಿದಂತೆ ಹಲವು ಪ್ರಮುಖ ಆಫರ್ಗಳನ್ನು ಕೊಡಲಾಗಿದೆ. 2024ನೇ ಸಾಲಿನ ಕೊನೆಯ ದಿನ ಹಾಗೂ 2025ರ ಮೊದಲ ದಿನ ಮದ್ಯ ಮಾರಾಟದಲ್ಲಿ ಭರ್ಜರಿ ದಾಖಲೆ ಸೃಷ್ಟಿಯಾಗಿದೆ. ಈಗ ಬೆಂಗಳೂರಿನ ಪ್ರಮುಖ ಬಾರ್ವೊಂದರಲ್ಲಿ ಜನವರಿ ಅಂತ್ಯದ ವರೆಗೂ ಬಿಯರ್ ಮಾರಾಟದಲ್ಲಿ ಡಿಸ್ಕೌಂಟ್ ಕೊಡಲಾಗಿದೆ. ನೀವಿಲ್ಲಿ ಎಷ್ಟೇ ಮಗ್ ಬಿಯರ್ ತೆಗೆದುಕೊಂಡರೂ ಕಡಿಮೆ ಬೆಲೆ ಇದೆ. ಯಾವುದು ಈ ಬಾರ್, ಎಷ್ಟು ಕಡಿಮೆ ಬೆಲೆಗೆ ಈ ಬಿಯರ್ ಮಾರಾಟವಾಗುತ್ತಿದೆ ಹಾಗೂ ಷರತ್ತುಗಳೇನು ಎನ್ನುವ ಕಂಪ್ಲೀಟ್ ಮಾಹಿತಿ ನೋಡೋಣ..
ಬೆಂಗಳೂರಲ್ಲಿ ತಣ್ಣನೆ ಮೈಕೊರೆಯುವ ಚಳಿ ಇದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಬಿಯರ್ ಸೇಲ್ ಆಗುತ್ತದೆ. ಬೇಸಿಗೆ ಸಮಯದಲ್ಲಿ ದೇಹ ತಂಪು ಹಾಗೂ ತಣ್ಣನೆಯ ಅನುಭವ ಪಡೆಯುವುದಕ್ಕೆ ಜನ ಬಿಯರ್ ಕುಡಿಯುವುದು ಇದೆ. ಆದರೆ, ಬೇಸಿಗೆ ಕಾಲಕ್ಕೆ ಹೋಲಿಕೆ ಮಾಡಿದರೆ ಚಳಿಗಾಲದಲ್ಲಿ ಬಿಯರ್ ತೆಗೆದುಕೊಳ್ಳುವುದು ಸ್ವಲ್ಪ ಕಡಿಮೆ. ಆದರೆ ಮದ್ಯ ಪ್ರಿಯರು ಹಾಗೂ ಬಿಯರ್ ಇಷ್ಟ ಪಡುವವರು ಯಾವಾಗಲು ಗೆಳಯರು ಹಾಗೂ ಆತ್ಮೀಯರೊಂದಿಗೆ ಸಿಟ್ಟಿಂಗ್ ಹಾಕುವುದು ಇದೆ. ಈ ರೀತಿ ಅಪರೂಪಕ್ಕೆ ಇಲ್ಲ ಯಾವಾಗಲು ಪಾರ್ಟಿ ಮಾಡಬೇಕು ಅಂತ ಆಸೆ ಪಡುವವರಿಗೆ ಬೆಂಗಳೂರಿನ ಪ್ರಮುಖ ಬಾರ್ವೊಂದು ಬಿಯರ್ ಮೇಲೆ ಭರ್ಜರಿ ಆಫರ್ ಕೊಟ್ಟಿದೆ. ಇದು ಜನವರಿ ಅಂತ್ಯದ ವರೆಗೂ ಇರಲಿದೆ ಅಂತ ಹೇಳಲಾಗಿದೆ.
ಒಂದು ಬಿಯರ್ಗೆ ಕೇವಲ 76 ರೂಪಾಯಿ: ಬೆಂಗಳೂರಿನ ಜೆಪಿ ನಗರದಲ್ಲಿರುವ ಮೆಜೆರಾ ಬ್ರೂವರಿ ಮತ್ತು ಕಿಚನ್ (Mezera Brewery & Kitchen)ನಲ್ಲಿ ಸ್ಪೆಷಲ್ ಆಫರ್ವೊಂದನ್ನು ಪರಿಚಯಿಸಲಾಗಿದೆ. @76 ರೂ. ಬಿಯರ್ ಪರೇಡ್ ಎನ್ನುವ ಸ್ಪೆಷಲ್ ಆಫರ್ ಕೊಡಲಾಗಿದೆ. ನೀವು ಇಲ್ಲಿ ಎಷ್ಟೇ ಬಿಯರ್ ತೆಗೆದುಕೊಂಡರು ಪ್ರತಿ ಗ್ಲಾಸ್ಗೆ 76 ರೂಪಾಯಿ ಮಾತ್ರ ಆಗಲಿದೆ. ಬಿಯರ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ ಆಗಿದೆ. ಅಲ್ಲದೆ ಬಿಯರ್ ಜೊತೆಗೆ ಕೇಸ್, ಸ್ವೀಟ್ ಹಾಗೂ ಸೈಡ್ ಡಿಷ್ ಅಲ್ಲದೆ ನಾನ್ವೆಜ್ ಸಹ ಕಡಿಮೆ ಬೆಲೆಗೆ ಸಿಗುತ್ತಿವೆ.
ಆಫರ್ನ ಉದ್ದೇಶವೇನು: ಮೆಜೆರಾ ರಿಪಬ್ಲಿಕ್ ಡೇ ಹಿನ್ನೆಲೆಯಲ್ಲಿ ಈ ಆಫರ್ ಬಿಟ್ಟಿದೆ. ಇದರ ಭಾಗವಾಗಿ ಬಿಯರ್ ಪರೇಡ್ ಎನ್ನುವ ವಿಶೇಷ ಆಫರ್ ಪರಿಚಯಿಸಲಾಗಿದ್ದು. ಈ ಆಫರ್ ಇದೇ ತಿಂಗಳು ಅಂತ್ಯದ ವರೆಗೆ (ಜನವರಿ 31) ಇರಲಿದೆ.
ಬಿಯರ್ ಪ್ರಿಯರಿಗೆ ಒಳ್ಳೆಯ ಜಾಗ: ಫ್ಯಾಮಿಲಿ, ಫ್ರೆಂಡ್ಸ್ ಹಾಗೂ ಆತ್ಮೀಯರೊಂದಿಗೆ ಟೈಮ್ ಕಳೆಯುವುದಕ್ಕೆ ಹಾಗೂ ಬಿಯರ್ ಪ್ರಿಯರಿಗೆ ಇದು ತುಂಬಾ ಒಳ್ಳೆಯ ಆಫರ್ ಅಂತಲೇ ಹೇಳಬಹುದು. ಇಲ್ಲಿ ನೀವು ಎಷ್ಟು ಬಿಯರ್ ಬೇಕಾದರೂ ಕೇವಲ 76 ರೂಪಾಯಿಗೆ ತೆಗೆದುಕೊಳ್ಳಬಹುದಾಗಿದೆ.