ಬೆಂಗಳೂರು: ದೇಶದ ಶ್ರೀಮಂತ ಕುಟುಂಬಕ್ಕೆ ಸೇರಿದ ಹಾಗೂ ಶ್ರೀಮಂತ ಮಹಿಳೆಯಲ್ಲಿ ಒಬ್ಬರಾಗಿರುವ ನೀತಾ ಅಂಬಾನಿಗೂ ಬೆಂಗಳೂರು ಟ್ರಾಫಿಕ್ಜಾಮ್ ಬಿಸಿ ಮುಟ್ಟಿದೆ. ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಅವರು ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯರು. ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ನಲ್ಲಿ ಜನ ಗಂಟೆಗಟ್ಟಲೆ ಕಾದು ಹೈರಾಣಾಗ್ತಿದ್ದಾರೆ. ಇದೀಗ ಕೋಟ್ಯಾಧಿಪತಿ ನೀತಾ ಅಂಬಾನಿ ಅವರು ಸಹ ಬೆಂಗಳೂರು ಟ್ರಾಫಿಕ್ನಿಂದ ಸುಸ್ತಾಗಿದ್ದಾರೆ. ಅಲ್ಲದೆ ಅವರ ಸೆಕ್ಯೂರಿಟಿ ಸಿಬ್ಬಂದಿಯನ್ನು ಬೆಂಗಳೂರಿನ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದು ನೀತಾ ಅಂಬಾನಿ ಅವರಿಗೆ ಭಾರೀ ಮುಜುಗರವನ್ನು ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.
ನೀತಾ ಅಂಬಾನಿ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನೀತಾ ಅಂಬಾನಿ ಅವರು ಕೆಲವು ವಿಷಯದಲ್ಲಿ ದೇಶದಲ್ಲೇ ಫೇಮಸ್. ಅವರ ಶಾಪಿಂಗ್ ಹಾಗೂ ಡ್ರೆಸ್ ಸೆನ್ಸ್ ಸಿಕ್ಕಾಪಟ್ಟೆ ಸುದ್ದಿಯಾಗುವುದು ಇದೆ. ಅವರ ಬ್ಯಾಗ್ ಹಿಡಿದುಕೊಳ್ಳುವುದಕ್ಕೂ ಒಬ್ಬರು ಸಹಾಯಕ ಸಿಬ್ಬಂದಿ, ಮ್ಯಾನೇಜರ್ಗಳು ಇದ್ದಾರೆ. ಅಂದುಕೊಂಡದ್ದನ್ನು ತೆಗೆದುಕೊಳ್ಳುವ, ಮಾಡಬೇಕು ಅನಿಸಿದ್ದನ್ನು ಮಾಡುವಷ್ಟು ದುಡ್ಡು ಅವರ ಬಳಿ ಇದೆ. ಅವರು ಈಚೆಗೆ ಬೆಂಗಳೂರಿಗೆ ಶಾಪಿಂಗ್ಗೆ ಎಂದು ಬಂದಿದ್ದಾರೆ. ಆದರೆ, ಈ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಅವರು ಮುಜುಗರದ ಸನ್ನಿವೇಶವೊಂದಕ್ಕೆ ಒಳಗಾಗಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಬೆಂಗಳೂರಿನ ಟ್ರಾಫಿಕ್ ಜಾಮ್ನ ಮುಂದೆ ಎಲ್ಲರೂ ಒಂದೇ. ಅದು ನೀತಾ ಅಂಬಾನಿ ಅವರಾದರೂ ಅಷ್ಟೇ ಅಂತ ಜನ ಮಾತನಾಡಿಕೊಳ್ಳತ್ತಿದ್ದಾರೆ.
ಘಟನೆಯ ಹಿನ್ನೆಲೆ ಏನು: ನೀತಾ ಅಂಬಾನಿ ಅವರು ಈಚೆಗೆ ಬೆಂಗಳೂರಿಗೆ ಶಾಪಿಂಗ್ ಮಾಡುವುದಕ್ಕೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಬೆಲೆ ಬಾಳುವ Mercedes-Benz S600 ಗಾರ್ಡ್ ಎನ್ನುವ ಬುಲೆಟ್ ಪ್ರೂಫ್ ಗಾಡಿಯಲ್ಲಿ ಬಂದಿದ್ದರು. ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಶಾಪಿಂಗ್ ಮಾಡಿದ್ದಾರೆ. ಆದರೆ, ಗಾಡಿಯನ್ನು ರಸ್ತೆಯಲ್ಲೇ ನಿಲ್ಲಿಸಲಾಗಿದ್ದು, ಇದರಿಂದ ಈ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಅದೇ ರಸ್ತೆಯಲ್ಲಿ ಬಂದ ಮಹಿಳೆಯೊಬ್ಬರು ನೀತಾ ಅಂಬಾನಿಯ ಅಂಗರಕ್ಷಕ (ಸೆಕ್ಯೂರಿ) ಸಿಬ್ಬಂದಿಯ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಗಾಡಿನ ಈ ತರ ರೋಡ್ನಲ್ಲಾ ನಿಲ್ಲಿಸೋದ ಅಂತ ಅವರು ಕೇಳ್ತಾ ಇರೋದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ರೀತಿ ಬೆಂಗಳೂರಿನ ಮಹಿಳೆ ಸೆಕ್ಯೂರಿಟಿಗೆ ಕ್ಲಾಸ್ ತೆಗೆದುಕೊಳ್ಳುವಾಗಲೇ ನೀತಾ ಅಂಬಾನಿ ಅವರು ಶಾಫಿಂಗ್ ಮುಗಿಸಿ ಅಂಗಡಿಯಿಂದ ಹೊರ ಬಂದಿದ್ದಾರೆ.
ಬೆಂಗಳೂರು ಮಹಿಳೆ ನಡೆಗೆ ಮೆಚ್ಚುಗೆ: ಬೆಂಗಳೂರಿನಲ್ಲಿ ನೀತಾ ಅಂಬಾನಿ ಅವರ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಸಮಸ್ಯೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಹಿಳೆ ಪ್ರಶ್ನೆ ಮಾಡಿದ್ದು, ಮಹಿಳೆಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನೀತಾ ಅಂಬಾನಿ ಅವರನ್ನು ನೋಡುವುದಕ್ಕೆ ಜನ ಸೇರುತ್ತಾರೆ. ಅವರ ಸೆಕ್ಯೂರಿಟಿ ಸಿಸ್ಟಂ ನೋಡಿ ಜನ ದೂರ ನಿಲ್ಲುವುದೂ ಇದೆ. ಆದರೆ, ಇದ್ಯಾವೂದನ್ನೂ ಲೆಕ್ಕಾ ಮಾಡದೆ ಮಹಿಳೆ ಈ ರೀತಿ ಪ್ರಶ್ನೆ ಮಾಡಿರುವುದಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೀತಾ ಅಂಬಾನಿ ಬೆಂಗಳೂರಿಗೆ ಬಂದಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಅವರು ಬೆಂಗಳೂರಿನಲ್ಲಿ ಕೋಟ್ಯಾಂತ ರೂಪಾಯಿ ಮೌಲ್ಯದ ಸೀರೆಗಳನ್ನು ಖರೀದಿ ಮಾಡಿದ್ದರು. ಸೀರೆಗಳನ್ನು ಖರೀದಿ ಮಾಡುವಾಗ ಗಾಡಿ ರೋಡ್ನಲ್ಲಿಯೇ ನಿಲ್ಲಿಸಲಾಗಿದೆ. ಏಳೆಂಟು ಕಾರುಗಳು ಹಾಗೂ ಸೆಕ್ಯೂರಿಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿದೆ ಅಂತ ಹೇಳಲಾಗಿದೆ.