ಬೆಂಗಳೂರು: ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಕಡೆ ರಸ್ತೆ ಕಾಮಗಾರಿ, ಕಾರ್ಯಕ್ರಮ, ಮೆರವಣಿಗೆ, ಉತ್ಸವ ಇದ್ದೆ ಇರುತ್ತದೆ. ಇದರಿಂದ ವಾಹನ ಸಂಚಾರದಲ್ಲಿ ಬದಲಾವಣೆ, ನಿಷೇಧ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಇದೇ ರೀತಿ ಆಡುಗೋಡಿ ಮುಖ್ಯರಸ್ತೆಯಲ್ಲಿ ಓಡಾಡುವವರಿಗೆ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ. ನಿಷೇಧ ರಸ್ತೆಗಳಲ್ಲಿ ಓಡಾದಂತೆ, ಪಾಕಿಂಗ್ ಮಾಡದಂತೆ ಸೂಚನೆ ನೀಡಿದ್ದಾರೆ.
ಹೌದು, ಫೆಬ್ರವರಿ 4ರಿಂದ ಸಂಜೆ 7 ಗಂಟೆಯಿಂದ ಫೆಬ್ರವರಿ 5ರವರೆಗೆ ಬೆಳಗ್ಗೆ 09 ಗಂಟೆಯವರೆಗೆ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮುಖ್ಯ ರಸ್ತೆಯಲ್ಲಿ ರಥ ಸಪ್ತಮಿ ಜಾತ್ರಾ ಮಹೋತ್ಸವ ನಡೆಯಲಿವೆ. ಇದೇ ವೇಳೆ ವಿವಿಧ ದೇವರುಗಳ ಸುಮಾರು 32 ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಸದರಿ ರಥಸಮಪ್ತಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲಿದ್ದಾರೆ. ಹೀಗಾಗಿ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಈ ಕೆಳಕಂಡಂತೆ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲವೆಡೆ ಪಾರ್ಕಿಂಗ್ ನಿಷೇಧಿಸಲಾಗಿದೆ. ಬೆಂಗಳೂರು ಸಂಚಾರ ಪೊಲೀಸರ ಸಲಹೆ, ಸೂಚನೆಗಳು ಹೀಗಿವೆ. Also Read Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗದಿಂದ ನಿವೃತ್ತಿ ಘೋಷಣೆ…. ಎಲ್ಲೆಲ್ಲಿ ಸಂಚಾರ ನಿರ್ಬಂಧ * ರಥ ಸಪ್ತಮಿ ಜಾತ್ರಾ ಮಹೋತ್ಸವ ನಡೆಯುವ ಆಡುಗೋಡಿ ಮುಖ್ಯ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ನಿಂದ ಯುಕೋ ಬ್ಯಾಂಕ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. * ಆಡುಗೋಡಿ ಜಂಕ್ಷನ್ಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳಾದ ನ್ಯೂ ಮೈಕೋ ಲಿಂಕ್ ರಸ್ತೆ ಮತ್ತು ಬಜಾರ್ ಸ್ಟ್ರೀಟ್ ರಸ್ತೆಗಳಲ್ಲಿಯೂ ಸಹಾ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಟ್ರಾಫಿಕ್ ಡೈವರ್ಷನ್ ಸ್ಥಳಗಳು * ಆನೇಪಾಳ್ಯ ಜಂಕ್ಷನ್ * ಯುಕೋ ಬ್ಯಾಂಕ್ ಜಂಕ್ಷನ್ * ಮೈಕೋ ಬಂಡೆ ಜಂಕ್ಷನ್ * ಬಜಾರ್ ಸ್ಟ್ರೀಟ್ ರಸ್ತೆ (ಶನಿಮಹಾತ್ಮ ದೇವಸ್ಥಾನ ಜಂಕ್ಷನ್) * ಡೈರಿ ಸರ್ಕಲ್ ಪರ್ಯಾಯ ರಸ್ತೆ ಮಾರ್ಗಗಳು ಹೀಗಿವೆ * ಯುಕೋ ಬ್ಯಾಂಕ್ ಜಂಕ್ಷನ್ ಕಡೆಯಿಂದ ಅನೇಪಾಳ್ಯ ಮತ್ತು ಎಂ.ಜಿ ರಸ್ತೆಗೆ ಸಾಗುವ ವಾಹನಗಳು, ಯುಕೋ ಬ್ಯಾಂಕ್ ಜಂಕ್ಷನ್ ನಲ್ಲಿ ಬಲತಿರುವು ಪಡೆಯಬೆಕು. ಅಲ್ಲಿಂ ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಪಾಸ್ಪೋಟ್ ಆಫೀಸ್ ಬಳಿ ಬಲತಿರುವು ಪಡೆದು ಬುಚರಿ ಜಂಕ್ಷನ್ ಮೂಲಕ ಅನೇಪಾಳ್ಯ ಮತ್ತು ಎಂ.ಜಿ ರಸ್ತೆಯ ಕಡೆಗೆ ಸಾಗಬೇಕು. * ಆನೇಪಾಳ್ಯ ಜಂಕ್ಷನ್ ಕಡೆಯಿಂದ ಮಡಿವಾಳ ಚೆಕ್ಪೋಸ್ಟ್ ಹಾಗೂ ಹೊಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ಆನೇಪಾಳ್ಯ ಜಂಕ್ಷನ್ನಲ್ಲಿ ಬಲತಿರುವು ಪಡೆಯಬೇಕು. ನಂತರ ಅಲ್ಲಿಂದ ಬಿ.ಜಿ ರಸ್ತೆಯ ಮುಖಾಂತರ ಸಾಗಿ ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಡೈರಿ ಸರ್ಕಲ್ ಜಂಕ್ಷನ್ನಲ್ಲಿ ಎಡತಿರುವು ಪಡೆದು ಡಾ> ಮರಿಗೌಡ ರಸ್ತೆಯ ಮೂಲಕ ಮಡಿವಾಳ ಚೆಕ್ ಪೋಸ್ಟ್ ಮತ್ತು ಹೊಸೂರು ರಸ್ತೆಗೆ ತಲುಪಿ ಅಲ್ಲಿಂದ ಗಮ್ಯಸ್ಥಾನ ತಲುಪಬಹುದು. Advertisement * ಲಕ್ಕಸಂದ್ರ ಮೆಟ್ರೋ ಕಾಮಗಾರಿ ಸಂಬಂಧ ಬಿ.ಜಿ ರಸ್ತೆ ಚೆನ್ನಯ್ಯನ ಪಾಳ್ಯ ಕ್ರಾಸ್ನಿಂದ ಅನೇಪಾಳ್ಯ ಜಂಕ್ಷನ್ ವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಥ ಸಪ್ತಮಿ ಜಾತ್ರಾ ಮಹೋತ್ಸವ ಸಂಬಂಧ ಮೈಕೋಬಂಡೆ ಜಂಕ್ಷನ್ನಿಂದ ಅಡುಗೋಡಿ ಜಂಕ್ಷನ್ ವರೆಗೆ ಮೈಕೋ ಲಿಂಕ್ ರಸ್ತೆಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ ಡೈರಿ ಸರ್ಕಲ್ ಕಡೆಯಿಂದ ಆನೇಪಾಳ್ಯ ಹಾಗೂ ಎಂ.ಜಿ ರಸ್ತೆಯ ಕಡೆಗೆ ಸಾಗುವ ವಾಹನಗಳು ಮೈಕೋ ಬಂಡೆ ಜಂಕ್ಷನ್ ನಿಂದ ಬಿ.ಜಿ ರಸ್ತೆಯಲ್ಲಿಯೇ ಸ್ವಲ್ಪ ಮುಂದೆ ಸಾಗಿ ಚಿನ್ನಯ್ಯನ ಪಾಳ್ಯ ಕ್ರಾಸ್ನಲ್ಲಿ ಎಡತಿರುವು ಪಡೆಯಬೇಕು. ಅಲ್ಲಿಂದ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಕಡೆಗೆ ಸಂಚರಿಸಿ ಕೆ.ಹೆಚ್. ರಸ್ತೆಯ ಮೂಲಕ ಮುಂದೆ ಸಾಗುವಂತೆ ಸೂಚಿಸಲಾಗಿದೆ. * ಡೈರಿ ಸರ್ಕಲ್ ಜಂಕ್ಷನ್ನಲ್ಲಿ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್, ಚಿನ್ನಯ್ಯನಪಾಳ್ಯ ಕ್ರಾಸ್ ಕಡೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸದರಿ ವಾಹನಗಳು ನಿಮ್ಹಾನ್ಸ್, ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಮೂಲಕ ಸಾಗಿಸಬೇಕು. * ಮಡಿವಾಳ ಚೆಕ್ ಪೋಸ್ಟ್ ಕಡೆಯಿಂದ ಬುಕೋ ಬ್ಯಾಂಕ್ ಜಂಕ್ಷನ್ ಕಡೆಗೆ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ಸದರಿ ವಾಹನಗಳು ಡಾ.ಮರೀಗೌಡ ರಸ್ತೆ-ಡೈರಿಸರ್ಕಲ್-ನಿಮ್ಹಾನ್ಸ್-ವಿಲ್ಸನ್ ಗಾರ್ಡನ್ 10ನೇ ಕ್ರಾಸ್, ಮೂಲಕ ಸಾಗಬೇಕು. ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು * ಆಡುಗೋಡಿ ಮುಖ್ಯ ರಸ್ತೆಯಲ್ಲಿ ಅನೇಪಾಳ್ಯ ಜಂಕ್ಷನ್ನಿಂದ ಯುಕೋ ಬ್ಯಾಂಕ್ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. * ಮೈಕೋ ಬಂಡೆ ಜಂಕ್ಷನ್ ನಿಂದ ಆಡುಗೋಡಿ ಜಂಕ್ಷನ್ ವರೆಗೆ ನ್ಯೂ ಮೈಕೋ ಲಿಂಕ್ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ನಿರ್ಬಂಧ. * ಆಡುಗೋಡಿ ಬಜಾರ್ ಸ್ಟ್ರೀಟ್ ರಸ್ತೆಯ ಎರಡೂ ಬದಿಗಳಲ್ಲಿ ಆಡುಗೋಡಿ ಸಂಚಾರ ಠಾಣಾ ಸರಹದ್ದಿನ ಆಡುಗೋಡಿಯ ವಿವಿಧ ಬಡಾವಣೆಗಳ ನಿವಾಸಿಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ. * ಅಡುಗೋಡಿಯ ನಂಜಪ್ಪ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಅನ್ನಲ್ ಕೃಷ್ಣ ಅಪಾರ್ಟ್ ಮೆಂಟ್, ಬೃಂದಾವನ ಅಪಾರ್ಟ್ಮೆಂಟ್, ಪೆಸ್ಟೀಜ್ ಅಪಾರ್ಟ್ ಮೆಂಟ್ ನಿವಾಸಿಗಳು ಡೈರಿ ಸರ್ಕಲ್ ಪೊಲೀಸ್ ವಸತಿಗೃಹದ ಪಕ್ಕದ ರಸ್ತೆಯಿಂದ ಸಂಚರಿಸುವುದು. * ಆಡುಗೋಡಿ ಸಿ.ಎ.ಆರ್ ದಕ್ಷಿಣ ಪೊಲೀಸ್ ವಸತಿಗೃಹದ ನಿವಾಸಿಗಳು ಮೇಲ್ಕಂಡ ಸಮಯದಲ್ಲಿ ಆಡುಗೋಡಿ ಮುಖ್ಯರಸ್ತೆಯ ಬದಲಾಗಿ ಮಂಗಳ ಕಲ್ಯಾಣ ಮಂಟಪದ ಗೇಟ್ ಮುಖಾಂತರ ಸಂಚರಿಸಬೇಕು. * ಬಜಾರ್ ಸ್ಟ್ರೀಟ್, ದೇವೆಗೌಡ ಬ್ಲಾಕ್, ಎ.ಕೆ ಕಾಲೋನಿ, ಆಡುಗೋಡಿ ಗ್ರಾಮ ಹಾಗೂ ಕೋರಮಂಗಲ 8ನೇ ಬ್ಲಾಕ್, ಬಾಲಪ್ಪ ಲೇಔಟ್ ನಿವಾಸಿಗಳು ಪಾಸ್ಪೋರ್ಟ್ ಆಫೀಸ್ ಕಡೆಯಿಂದ ಅಥವಾ ಕೋರಮಂಗಲ ಪೊಲೀಸ್ ಠಾಣೆ ಎದುರು ರಸ್ತೆಯ ಕಡೆಯಿಂದ ಸಂಚರಿಸಬೇಕು.