ಬೆಂಗಳೂರು || ಕೇವಲ ₹6 ನಲ್ಲಿ ಕಚೇರಿಗೆ ತೆರಳಿದೆ, ಅಗ್ಗದ ಬಸ್ ಸಾರಿಗೆ ಉತ್ತೇಜಿಸಿದ ಸಿಇಒ ದೀಪಕ್ ಶೆಣೈ

ಬೆಂಗಳೂರು || ಕೇವಲ ₹6 ನಲ್ಲಿ ಕಚೇರಿಗೆ ತೆರಳಿದೆ, ಅಗ್ಗದ ಬಸ್ ಸಾರಿಗೆ ಉತ್ತೇಜಿಸಿದ ಸಿಇಒ ದೀಪಕ್ ಶೆಣೈ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾರಿಗೆ ಬಸ್, ನಮ್ಮಮೆಟ್ರೋ, ಓಲಾ, ಊಬರ್ ದರ ಹೆಚ್ಚಿರುವ ಸಂದರ್ಭದಲ್ಲಿ ಪ್ರಮುಖ ಕಂಪನಿಯೊಂದರ ಸಿಇಒವೊಬ್ಬರು ಕೇವಲ 06 ರೂಪಾಯಿಗೆ ಬಸ್ನಲ್ಲಿ ಸಂಚರಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಸಾರಿಗೆ ಇಷ್ಟು ಅಗ್ಗವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಸಹ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಕ್ಯಾಪಿಟಲ್ಮೈಂಡ್ ಕಂಪನಿಯ ಸಿಇಒ ಮತ್ತು ಸಂಸ್ಥಾಪಕ ದೀಪಕ್ ಶೆಣೈ ಅವರು ಸಾಮಾನ್ಯವಾಗಿ ಎಐ ತಂತ್ರಜ್ಞಾನ, ಆಹಾರ ವಿತರಣೆ ಅಪ್ಲಿಕೇಷನ್ ಸೇರಿದಂತೆ ತಮ್ಮ ಕೆಲವು ಅಪ್ಡೇಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ X ಖಾತೆಯಲ್ಲಿ ಅವರು, ತಾವು ಮೊಣಕಾಲು ನೋವು ಇದ್ದ ಕಾರಣ, ಬೆಂಗಳೂರಿನ ಕಚೇರಿಗೆ ಬಸ್ನಲ್ಲಿ ಹೋಗಬೇಕಾಯಿತು. ಈ ಬಸ್ ಪ್ರಯಾಣಕ್ಕೆಕೇವಲ 6 ರೂ. ಖರ್ಚಾಯಿತು. ಅರೇ ಇಷ್ಟು ಕಡಿಮೆ ಖರ್ಚಿನಲ್ಲಿ ಕಚೇರಿಗೆ ಹೋಗಬಹುದಾ ಎಂದು ಅವರು ಆಶ್ಚರ್ಯದಿಂದ ಪೋಸ್ಟ್ ಹಂಚಿಕೊಂಡಿದ್ದಾರೆ.

ದೀಪಕ್ ಶೆಣೈ ಅವರು ತಾವು ನಡೆದುಕೊಂಡು ಕಚೇರಿಗೆ ಹೋಗುತ್ತಿದ್ದುದ್ದನ್ನು ಬಹಿರಂಗಪಡಿಸಿದರು. ಮೊಣಕಾಲಿನ ಗಾಯದ ನಂತರ, ನಾನು ಈ ಬಾರಿ ಬಸ್ ಪ್ರಯಾಣಕ್ಕೆ ಮನಸ್ಸು ಮಾಡಿದೆ. ಈ ಬಸ್ ಪ್ರಯಾಣ ಎಷ್ಟು ಅಗ್ಗವಾಗಿದೆ. 6 ರೂ.ಗೆ ಬಸ್ ಮೂಲಕ ಕಚೇರಿಗೆ ತಲುಪಿದ್ದೇನೆ ಎಂಬುದೇ ನನಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಬಸ್ಗಳಲ್ಲಿ ಸುಲಭ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇದೆ. ಅದರ ಪಾವತಿಗಳಿಗಾಗಿ ಬಸ್ನಲ್ಲಿ UPI QR ಸ್ಕ್ಯಾನರ್ ಸಹ ಅಳವಡಿಸಲಾಗಿದೆ. ನಗದು ಹಣವಿಲ್ಲದೇ ಸಂಚರಿಸಬಹುದೆಂದು ಅವರು ತಿಳಿಸಿದರು.

ಪ್ರಮುಖ ಕಾರಣಗಳಿಂದ ಸಾರ್ವಜನಿಕ ಬಸ್ ಮತ್ತು ಮೆಟ್ರೋ ದರಗಳು ಸಾಮಾನ್ಯವಾಗಿ ಹೆಚ್ಚಿರುತ್ತವೆ. ನಿತ್ಯ ನಾನು ಕಡಿಮೆ ದೂರ ನಡೆಯುತ್ತೇನೆ. ಆದರೆ ಮೊಣಕಾಲು ನೋವಿನಿಂದಾಗಿ ಇಂದು ಬಸ್ ಏರಿದೆ. 1 ಕಿಮೀ ತ್ವರಿತ ಬಸ್ ಪ್ರಯಾಣ ಮಾಡಿದೆ. ನಾನು ಯಾವಾಗಲೂ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತೇನೆ ಎಂದರು.

ಅಗ್ಗದ ಬಸ್ ಸಾರಿಗೆ ಪೋಸ್ಟ್: ನೆಟ್ಟಿಗರು ಹೇಳಿದ್ದೇನು?

ಸಿಇಒ ಶೆಣೈ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಪಡೆದುಕೊಂಡಿದೆ. ಸಾರ್ವಜನಿಕ ಸಾರಿಗೆ ಉಪಯೋಗ ತಿಳಿಸಿದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ಸಾರಿಗೆ ಉತ್ತೇಜನ ಶ್ಲಾಘನೀಯ ಎಂದಿದ್ದಾರೆ. ಹೀಗೆ ಸಾರ್ವಜನಿಕ ಸಾರಿಗೆ ಪ್ರಚಾರ ಮಾಡಿದರೆ ದೇಶದಲ್ಲಿ ಪ್ರಯಾಣ ವಿಧಾನ ಬದಲಾಯಿಸಲೂಬಹುದು. ಪ್ರಯಾಣಿಕರ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಕೈಗೆಟುಕುವ ಯಶಸ್ವಿ ಸಾರ್ವಜನಿಕ ಸಾರಿಗೆ ಹೆಚ್ಚು ಹೆಚ್ಚು ಬಳಸುವಂತಾಗಬೇಕು.

ಹೌದು ಸಾರ್.. ನೀವು ಸಾರ್ವಜನಿಕ ಸಾರಿಗೆಯ ಮೇಲೆ ಬೆಳಕು ಚೆಲ್ಲಿದ್ದೀರಿ. ನಿತ್ಯ ಜನ ಸಾಮಾನ್ಯರು ತಮ್ಮ ಜೀವನ ನಡೆಸಲು ಅಗ್ಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅವಲಂಭಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಸಾರಿಗೆ ಸದಾ ಪೂರಕವಾಗಿದೆ. ಬೆಂಗಳೂರಿನಲ್ಲಿ ನಗರ ಸಾರಿಗೆ ಜನರ ಜೀವನಾಡಿಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *