ಬೆಂಗಳೂರು || ತುಮಕೂರಿನ ಬಳಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ್ರೆ ಉತ್ತರ ಕರ್ನಾಟಕಕ್ಕೆ ಏನು ಲಾಭ?

ಬೆಂಗಳೂರು || 2ನೇ ವಿಮಾನ ನಿಲ್ದಾಣಕ್ಕೆ ತುಮಕೂರಿನ ಈ ಸ್ಥಳ ಬೆಸ್ಟ್; ಕಾರಣವೇನು?

ಬೆಂಗಳೂರು: ಬೆಂಗಳೂರನಲ್ಲಿ ಈಗಾಗಲೇ ಕೆಂಪೇಂಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಇದು ಎರಡು ಟರ್ಮಿನಲ್ಗಳನ್ನು ಹೊಂದಿದ್ದು, ಈ ಪೈಕಿ ಎರಡನೆಯದು ವಿಶ್ವದ ಅತ್ಯಂತ ಸುಂದರ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಷ್ಟೆಲ್ಲ ಇದ್ದರೂ ಸಹ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಲೇ ಇದ್ದು, ಈ ಹಿನ್ನೆಲೆ ಸರ್ಕಾರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮುಂದಾಗಿದೆ. ಇನ್ನು ಈ ಬಗ್ಗೆ ಒಬ್ಬೊಬ್ಬರು ಒಂದು ಅಭಿಪ್ರಾಯವನ್ನು ನೀಡುತ್ತಲಿದ್ದಾರೆ.

ಬೆಂಗಳೂರಿನ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಾಲ್ಕು ಸ್ಥಳಗಳನ್ನು ಸಹ ಗುರುತಿಸಲಾಗಿತ್ತು. ಇದರ ನಡುವೆಯೂ ನೆಲಮಂಗಲದಲ್ಲಿ ಸರ್ವೇ ಕಾರ್ಯ, ಸಮೀಕ್ಷೆಗಳನ್ನು ನಡೆಸಲಾಗಿದೆ. ಈ ಭಾಗದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಆದರೆ, ಇಲ್ಲಿನ ಜನರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಫಲವತ್ತಾದ ಭೂಮಿಯನ್ನು ನೀಡಲಯ ನಾವು ತಯಾರಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

ಮತ್ತೊಂದೆಡೆ ಬಹುತೇಕ ಶಾಸಕ, ಸಚಿವರುಗಳು ತುಮಕೂರಿನ ಬಳಿ ನಿರ್ಮಾಣ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಇಲ್ಲಿ ವಿಮಾನ ನಿಲ್ದಾಣ ಆದ್ರೆ, ಈ ಭಾಗದ ಜನರಿಗೆ ಏನೆಲ್ಲ ಉಪಯೋಗ ಆಗಲಿವೆ ಅಂತಲೂ ಹೇಳಿದ್ದಾರೆ. ಇದೀಗ ಅಧಿವೇಶದನ ವೇಳೆ ವಿಪಕ್ಷ ನಾಯಕ ಅರವಿಂದ್ ಬೆಲ್ಲದ್ ಈ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತುಮಕೂರು-ಶಿರಾ ನಡುವೆ ಸ್ಥಾಪನೆ ಆಗಬೇಕು. ಇದರಿಂದ ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಕುರಿತಂತೆ ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕಕ್ಕಿಂತ ಹಿಂದಿದೆ. ಉತ್ತರ ಕರ್ನಾಟಕದ ಜನರ ಸರಾಸರಿ ಆದಾಯದಲ್ಲಿ ಕಡಿಮೆಯಿದೆ ಅಂತಲೂ ಹೇಳಿದರು.

ಉತ್ತರ ಕರ್ನಾಟಕದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಆದರೂ ಅಭಿವೃದ್ಧಿ ಆಗುತ್ತಿಲ್ಲ. ಅಲ್ಲದೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿಲ್ಲ. ಎಲ್ಲವೂ ಬೆಂಗಳೂರು ಕೇಂದ್ರೀಕೃತ ಅಭಿವೃದ್ಧಿ ಆಗುತ್ತಿದೆ. ಇದು ಉತ್ತರ ಕರ್ನಾಟಕ ಹಿಂದುಳಿದಿರುವುದಕ್ಕೆ ಉದಾಹರಣೆ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.

ಉತ್ತರ ಕರ್ನಾಟಕ ಭಾಗದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬೆಂಗಳೂರಿನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಇದು ಇರುವಾಗಲೇ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾಕೆ ಮಾಡುತಿದ್ದೀರಿ? ಯಾರ ಪ್ರೇರಣೆಯಿಂದ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೆ, ಬೆಂಗಳೂರಿನ ಬಳಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಬದಲು ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿ ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *