ಬೆಂಗಳೂರು  || Yellow Metro ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಕಹಿ ಸುದ್ದಿ

ಬೆಂಗಳೂರು || Yellow Metro ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಕಹಿ ಸುದ್ದಿ

ಬೆಂಗಳೂರು: ಹಳದಿ ಮಾರ್ಗದ ಮೆಟ್ರೋ (Metro Yellow Line) ಸಂಚಾರವನ್ನು 2025ರ ಜನವರಿಗೆ ಆರಂಭಿಸುವುದಾಗಿ ಬಿಎಂಆರ್‌ಸಿಎಲ್ (BMRCL) ಹೇಳಿಕೊಂಡಿದೆ. ಆದರೆ ಮೆಟ್ರೋ ಸಂಚಾರಕ್ಕೆ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಿವೆ.

ಹಳದಿ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ಸಂಚಾರ ಆರಂಭವಾಗಬೇಕಾದ್ರೆ ಸಂಪೂರ್ಣ ಟ್ರೈನ್‍ಗಳ ಅವಶ್ಯಕತೆ ಇದೆ. ಪೂರ್ಣ ಪ್ರಮಾಣದ ಟ್ರೈನ್‍ಗಳು ಇನ್ನೂ ಬಂದಿಲ್ಲ. ಇದರಿಂದ ಹಳದಿ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ಮೆಟ್ರೋ ಸಂಚಾರ ಆರಂಭವಾಗತ್ತಾ ಎಂಬ ಅನುಮಾನ ಕಾಡಿದೆ.

ಮಾರ್ಗದ ವಾಣಿಜ್ಯ ಸಂಚಾರಕ್ಕೆ ಬಿಎಂಆರ್‌ಸಿಎಲ್‌ಗೆ ಬೇಕಿರೋದು 8 ಸೆಟ್‍ನಷ್ಟು ಟ್ರೈನ್‍ಗಳು ಸದ್ಯ ಇರೋದು ಮೂರು ಸೆಟ್‍ಗಳು ಮಾತ್ರ. ಹೀಗಿರುವಾಗ ಉಳಿದ ಐದು ಸೆಟ್‍ಗಳು ಇದೇ ತಿಂಗಳ ಒಳಗಾಗಿ ಬಂದರೂ, ಅವನ್ನು ಟ್ರ್ಯಾಕ್‍ಗೆ ಇಳಿಸಿ, ಪರೀಕ್ಷೆ ಮುಗಿಸಿ ಸಂಚಾರಕ್ಕೆ ಅಣಿ ಮಾಡೋಕೆ ಸಮಯವಕಾಶ ಬೇಕಾಗಲಿದೆ.

 ಹೀಗಿರುವಾಗ ಜನವರಿ ಅಂತ್ಯಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿದೆ.

Leave a Reply

Your email address will not be published. Required fields are marked *