ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಹಾಗೂ ಆಸ್ತಿ ಖಾತಾದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಿಗ್ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಆದರೆ ಇಲ್ಲಿಯ ವರೆಗೆ ಕೇವಲ 3ರಿಂದ 4 ಲಕ್ಷ ಆಸ್ತಿಗಳಿಗೆ ಮಾತ್ರ ಇ ಖಾತಾ ನೀಡಲಾಗಿದೆ. ಇದೀಗ ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿದಾರರಿಗೆ ಬಿಗ್ಗುಡ್ನ್ಯೂಸ್ ಕೊಡಲಾಗಿದೆ. ಯಾವುದೇ ಖಾತಾ ಇಲ್ಲದೆ ಇರುವವರು ಸರಳವಾಗಿ ಖಾತಾ ಪಡೆಯುವುದಕ್ಕೆ ಬಿಬಿಎಂಪಿಯು ಅವಕಾಶ ಮಾಡಿಕೊಟ್ಟಿದೆ. ಆಸ್ತಿದಾರರಿಗೆ ಬಿಬಿಎಂಪಿ ಕೊಟ್ಟಿರುವ ಗುಡ್ನ್ಯೂಸ್ ಏನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಯಾವುದೇ ಖಾತಾ ಇಲ್ಲದೆ ಇರುವವರಿಗೆ ಬಿಬಿಎಂಪಿಯು ಇದೇ ಮೊದಲ ಬಾರಿ ಬಿಗ್ಗುಡ್ನ್ಯೂಸ್ ನೀಡಿದೆ. ಸಾರ್ವಜನಿಕರು ಹೊಸ ಆಸ್ತಿ ಖಾತಾವನ್ನು ಇನ್ಮುಂದೆ ಆನ್ಲೈನ್ನ ಮೂಲಕವಾಗಿಯೇ 5 ಹಂತಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ಮುಂದೆ ಆಸ್ತಿದಾರರು ಬಿಬಿಎಂಪಿಯ ಕಚೇರಿಗೆ ಭೇಟಿ ನೀಡದೆ ತಾವೇ ಆನ್ಲೈನ್ನ ಮೂಲಕ ಖಾತಾ ಪಡೆದುಕೊಳ್ಳಬಹುದಾಗಿದೆ. ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರಿಗೆ ಹೊಸ ಖಾತಾ ಸಿಗುತ್ತಿಲ್ಲ. ಇಲ್ಲವೇ ಹಸ್ತಚಾಲಿತ ಖಾತಾ ಸಿಗದೆ ಸಮಸ್ಯೆ ಎದುರಾಗುತ್ತಿದೆ.
ಇದೀಗ ಬಿಬಿಎಂಪಿಯು ಇ -ಖಾತಾದೊಂದಿಗೆ ಹೊಸ ಖಾತಾ ನೀಡುವ ನಿಟ್ಟಿನಲ್ಲೂ ಆಸ್ತಿದಾರರಿಗೆ ಹೊಸ ಅಪ್ಡೇಟ್ವೊಂದನ್ನು ಕೊಟ್ಟಿದೆ. ಹಸ್ತಚಾಲಿತ ಮಾಹಿತಿ ಇಲ್ಲದೆ ಇರುವವರು ಹಾಗೂ ಯಾವುದೇ ಖಾತಾ ಇಲ್ಲದೆ ಇರುವವರು ಬಿಬಿಎಂಪಿ ಸ್ವಯಂ ಸೇವಾ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಮೂಲಕ ಆಸ್ತಿದಾರರು ಹೊಸ ಖಾತಾಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಸ್ತಿದಾರರು ಈ ಪೋರ್ಟಲ್ಗಳನ್ನು ಬಳಸಿಕೊಂಡು https://bbmp.karnataka.gov.in/NewKhata | https://bbmp.karnataka.gov.in/NewKhata ಹೊಸ ಖಾತಾಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಯಾವುದೇ ಖಾತಾ ಇಲ್ಲದವರಿಗೆ ಮಾತ್ರ ಅನ್ವಯ: ಇನ್ನು ಬೆಂಗಳೂರಿನಲ್ಲಿ ಶೇ 75ರಷ್ಟು ಜನರಿಗೆ ಖಾತಾ ಇದೆ. ಇನ್ನು 10ರಿಂದ 15ರಷ್ಟು ಆಸ್ತಿದಾರರಿಗೆ ಇ ಖಾತಾ ಸೌಲಭ್ಯ ಸಿಕ್ಕಿದೆ. ಆದರೆ ಇದೀಗ ಹೊಸ ಖಾತಾ ಸೌಲಭ್ಯವು ಈ ಎರಡೂ ಖಾತಾ ಇಲ್ಲದೆ ಇರುವವರಿಗೆ ಮಾತ್ರ ಸಿಗಲಿದೆ. ಹೀಗಾಗಿ ಈಗಾಗಲೇ ಖಾತಾ ಇರುವವರು ಈ ಹೊಸ ಖಾತಾಗೆ ಯಾವುದೇ ಕಾರಣಕ್ಕೂ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ. ಒಂದೊಮ್ಮೆ ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಹೊಸ ಖಾತಾಗೆ ಬೇಕಾಗುವ ದಾಖಲೆಗಳ ವಿವರ * ಆಧಾರ್ ಕಾರ್ಡ್ ಸಂಖ್ಯೆ * ಮಾರಾಟ ಅಥವಾ ನೋಂದಣಿ ಪತ್ರದ ಸಂಖ್ಯೆ * ಆಸ್ತಿಗೆ ಸಂಬಂಧಿಸಿದ ಇತ್ತೀಚಿನ ಫೋಟೋ * ಮಾರಾಟ ಇಲ್ಲವೇ ನೋಂದಣಿ ಪತ್ರ ದಿನಾಂಕದ ಒಂದು ದಿನದ ಮೊದಲು ಅಂದರೆ ಕನಿಷ್ಠ 31 ಅಕ್ಟೋಬರ್ 2024 ಅಥವಾ ನಂತರದಲ್ಲಿ ಆಸ್ತಿ ಮಾಲೀಕತ್ವದ ಇಸಿ ಇರಬೇಕು.
* ಹೊಸ ಖಾತಾ ಪಡೆಯುವ ಹಂತಗಳು * ಬಿಬಿಎಂಪಿ ಹೊಸ ಖಾತಾ ಪೋರ್ಟಲ್ಗೆ ಹೋಗಿ ನಂತರ ಅಗತ್ಯ ಮಾಹಿತಿಗಳನ್ನು ತುಂಬಿಸಿ * ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಿ. * ಅಪ್ಲೋಡ್ ಕೊಟ್ಟ ಮೇಲೆ ಆಸ್ತಿಗೆ ತೆರಿಗೆ ಐಡಿ ಜನರೇಟ್ ಆಗಲಿದೆ. * ಮುಂದುವರಿದು ಈ ಐಡಿಯ ಮೂಲಕ ಬಾಕಿ ಇರುವ ಎಲ್ಲಾ ಆಸ್ತಿ ತೆರಿಗೆಗಳನ್ನು ಪಾವತಿ ಮಾಡಿ. * ಆಸ್ತಿ ತೆರಿಗೆಯನ್ನು ಪಾವತಿ ಮಾಡಿದ ಮೇಲೆ ನೀವು ತಾತ್ಕಾಲಿಕ ಹೊಸ ಖಾತಾ ಪಡೆಯಬಹುದು. https://bbmpeaasthi.karnataka.gov.in ಅಥವಾ https://bbmpeaasthi.karnataka.gov.in ಇಲ್ಲಿಂದ ನೀವು ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. * ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಪರಿಶೀಲನೆ ಮಾಡಿದ ನಂತರ ಅಂದಾಜು ಎರಡು ತಿಂಗಳು / 60 ದಿನಗಳಲ್ಲಿ ಫೈನಲ್ ಹೊಸ ಖಾತಾ ಆಸ್ತಿದಾರರಿಗೆ ಸಿಗಲಿದೆ.