Brand Bengaluru ಪರಿಕಲ್ಪನೆಗೆ ತೀವ್ರ ಹಿನ್ನಡೆ : ಹೈಟೆಕ್ ಪಾರ್ಕಿಂಗ್ ಸಂಕೀರ್ಣ ಬಂದ್’ಗೆ ನಿರ್ಧಾರ

ದೇಶದ ಜನ ಬದಲಾವಣೆ ಬಯಸಿದ್ದಾರೆ; ಎಲ್ಲದಕ್ಕೂ ಒಂದು ಕಾಲಘಟ್ಟ ಇರುತ್ತೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೆ ತೀವ್ರ ಹಿನ್ನಡೆಯುಂಟಾಗಿದೆ. ಯೋಜನೆಯ ಅಡಿಯಲ್ಲಿ ಸರ್ಕಾರ ನಿರ್ಮಿಸಿದ್ದ ಹೈಟೆಕ್ ಪಾರ್ಕಿಂಗ್ ಸಂಕೀರ್ಣ ಬಂದ್ ಮಾಡಲು ಗುತ್ತಿಗೆ ಸಂಸ್ಥೆ ನಿರ್ಧರಿಸಿದೆ ಎಂದು ಹೇಳಲಾಗಿದೆ

ಫ್ರೀಡಂ ಪಾರ್ಕ್, ಗಾಂಧಿನಗರ ಸುತ್ತಮುತ್ತ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಹಾಕಲು ಸರ್ಕಾರ ಹೈಟೆಕ್ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಿತ್ತು. ಕಟ್ಟಡಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಚಾಲನೆ ನೀಡಿದ್ದರು. ಆದರೆ, ಆದಾಯದ ನಿರೀಕ್ಷೆಯಲ್ಲಿದ್ದ ಗುತ್ತಿಗೆ ಸಂಸ್ಥೆಗೆ ಭಾರೀ ನಿರಾಸೆ ಎದುರಾಗಿದೆ. ಕೋಟಿಗಟ್ಟಲೆ ಹಣ ವ್ಯಯಿಸಿದ್ದ ಗುತ್ತಿಗೆ ಸಂಸ್ಥೆಗೆ 64 ಲಕ್ಷ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಹೈಟೆಕ್ ಪಾರ್ಕಿಂಗ್ ಸಂಕೀರ್ಣದ ನಿರ್ವಹಣೆ ಗುತ್ತಿಗೆ ಪಡೆದಿದ್ದ ಪ್ರಿನ್ಸ್ ರಾಯಲ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ ಸಾಕಷ್ಟು ಸವಾಲು ಎದುರಿಸುತ್ತಿದೆ.

ಜೂನ್.21ರಿಂದ ಪಾರ್ಕಿಂಗ್ ಸಂಕೀರ್ಣ ನಿರ್ವಹಣೆಯ ಗುತ್ತಿಗೆ ಪಡೆಯಲಾಗಿದೆ. ಆದರೆ, ನಷ್ಟವನ್ನೇ ಎದುರಿಸುತ್ತಿದ್ದೇವೆ. ಹೀಗಾಗಿ ಹೈಟೆಕ್ ಪಾರ್ಕಿಂಗ್ ಸಂಕೀರ್ಣ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಏಜೆನ್ಸಿ ನಡೆಸುತ್ತಿರುವ ಕುಮಾರ್ ಎಚ್‌ಎನ್ ಅವರು ಹೇಳಿದ್ದಾರೆ.

ಆಕ್ಯುಪೆನ್ಸಿ ದರ ಕಡಿಮೆ ಇರುವ ಕಾರಣ ಬಾಡಿಗೆಯನ್ನು ಕಡಿಮೆ ಮಾಡಲು ಮತ್ತು ವಿದ್ಯುತ್ ಬಿಲ್‌ಗಳನ್ನು ಕೈಬಿಡುವಂತೆ ಮನವಿ ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎಂಟು ಬಾರಿ ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

5 ವರ್ಷಗಳ ಒಪ್ಪಂದದ ನಂತರ ನಾವು ರೂ 1 ಕೋಟಿ ಭದ್ರತಾ ಠೇವಣಿ ಪಾವತಿಸಿದ್ದೇವೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 48 ಲಕ್ಷ ಬಾಡಿಗೆ ಪಾವತಿಸಬೇಕಾಗಿತ್ತು. ಆದರೆ, ಇದುವರೆಗೆ ನಮಗೆ ರೂ 64 ಲಕ್ಷ ನಷ್ಟವಾಗಿದೆ.

ನಷ್ಟವನ್ನು ಸರಿದೂಗಿಸಲು ಪಾರ್ಕಿಂಗ್ ಲಾಟ್ನಲ್ಲಿ ಹೊಟೇಲ್ ಅಥವಾ ವಾಣಿಜ್ಯ ಚಟುವಟಿಕೆಗೆ ಅನುಮತಿ ಕೊಡಿ ಎಂದೂ ಪಾಲಿಕೆಗೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *