ಬೆಂಗಳೂರು : ನಾನು ಉಸ್ತುವಾರಿ ಇದ್ದಾಗ ಸೈಟ್ ಅಲಾಟ್ ಆಗಿದ್ದು. ಸರ್ಕಾರವೇ ಸೈಟ್ ಅಲಾಟ್ ಮಾಡಿದೆ. ಡೆವಲಪ್ಮೆಂಟ್ ಸೈಟ್ ಕೊಡಬೇಕು ಅಂತ ಬಿಜೆಪಿ ಸರ್ಕಾರದಲ್ಲೇ ನಿರ್ಧಾರ ಆಗಿತ್ತು. ಸಿದ್ದರಾಮಯ್ಯ ಧರ್ಮಪತ್ನಿ ಒಬ್ಬರಿಗೇ ಕೊಟ್ಟಿಲ್ಲ. ಹಲವರಿಗೆ ಕೊಟ್ಟ ನಿದರ್ಶನ ಇದೆ. ನಮ್ಮ ಬಿಜೆಪಿ ಸರ್ಕಾರ ಇದ್ದಾಗಲೇ ಕೊಟ್ಟಿದ್ದು. ಕಾನೂನಿನ ಪ್ರಕಾರ ಕೊಟ್ಟಿದ್ದು. ಬಿಜೆಪಿ ಈಗ ದ್ವೇಷದ ರಾಜಕಾರಣ ಮಾಡ್ತಿದೆ ಎಂದು ಶಾಸಕ ಎಸ್. ಟಿ ಸೋಮಶೇಖರ್ ಹೇಳಿದ್ದಾರೆ.
ಇದರಿಂದ ಮನಸ್ಸಿಗೆ ನೋವಾಗಿ ಸೈಟ್ ವಾಪಸ್ ಕೊಟ್ಟಿರೋದಾಗಿ ಸಿದ್ದರಾಮಯ್ಯ ಪತ್ನಿ ಹೇಳಿದ್ದಾರೆ. ಬಿಜೆಪಿ ಅವರಿಗೆ ಮಾಡಲು ಕೆಲಸ ಇಲ್ಲ. ಬಿಜೆಪಿ ನಾಯಕರು ಯಾರೂ ಸೈಟು ಪಡೆದಿಲ್ಲವಾ.? ಸಿದ್ದರಾಮಯ್ಯ ಅವರ ಪತ್ನಿ ಮಾತ್ರ ಪಡೆದಿದ್ದಾರಾ.? ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ಬಾರದೆ, ಅಧಿಕಾರಿಗಳ ಹಂತದಲ್ಲಿ ಸೈಟ್ ಪಡೆದಿರೋ ಪ್ರಶ್ನೆ.? ಆ ರೀತಿ ಆಗಿದ್ರೆ ರಿಜೆಕ್ಟ್ ಮಾಡಬೇಕಾಗಿದ್ದು ಯಾರು.? ಎಂದು ಪ್ರಶ್ನೆ ಮಾಡಿದ್ದಾರೆ.
ಕಾನೂನು ಪ್ರಕಾರವೇ 14 ಸೈಟು ಪಡೆದಿದ್ದಾರೆ. ಆಗ ಕಾಂಗ್ರೆಸ್ ಸರ್ಕಾರ ಇದ್ರೆ ಇವರು ಸುಮ್ಮನೆ ಇರ್ತಿದ್ರಾ.? ನೀವೇ ಕಾರಣ ಅಂತ ಆರೋಪ ಮಾಡ್ತಿರಲಿಲ್ಲವಾ ಎಂದು ಹಿಂದಿನ ಬಿಜೆಪಿ ಸರ್ಕಾರವನ್ನೇ ಪ್ರಶ್ನಿಸಿದ್ದಾರೆ ಸೋಮಶೇಖರ್.
ಯತ್ನಾಳ್ ಬಣ ಸಭೆ ಹಾಗೂ ಸಂಘರ್ಷ ವಿಚಾರ ಒಂದಷ್ಟು ಸಂಘರ್ಷ ಅಲ್ಲ, ಸಾಕಷ್ಟು ಇದೆ. ನಿಮಗೆ ಕಾಣೋದು ಯತ್ನಾಳ್ ಅಷ್ಟೇ ಅಲ್ಲ, ಸಾಕಷ್ಟು ಬಣ ಇದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ, ಬೊಮ್ಮಾಯಿ ಸಿಎಂ ಆಗಿದ್ದಾಗಲೂ ಹೇಳ್ತಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಮಾತಾಡ್ತಿದ್ರು. ಈಗಲೂ ಅವರೆಲ್ಲಾ ಮಾತಾಡ್ತಿದ್ದಾರೆ.