ನೈಟ್‌ಕ್ಲಬ್ ಮಾಲೀಕರಿಗೆ ಇಂಟರ್ಪೋಲ್ ಬ್ಲೂ ನೋಟಿಸ್.
ಪಣಜಿ : ಶನಿವಾರ ತಡರಾತ್ರಿ 25 ಜೀವಗಳನ್ನು ಬಲಿತೆಗೆದುಕೊಂಡ ಗೋವಾ ನೈಟ್‌ಕ್ಲಬ್ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್ ಮಾಲೀಕರಾದ ಸೌರವ್ ಲುಥ್ರಾ ಮತ್ತು ಗೌರವ್ ಲುಥ್ರಾ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಹಾಗೇ, ಲುಥ್ರಾ ಸಹೋದರರ ನೈಟ್‌ಕ್ಲಬ್ ನೆಲಸಮಗೊಳಿಸಲು ಸರ್ಕಾರ ಆದೇಶಿಸಿದೆ.
ಡಿಸೆಂಬರ್ 7ರ ಬೆಳಿಗ್ಗೆ ಲುಥ್ರಾ ಸಹೋದರರು ದೇಶವನ್ನು ತೊರೆದು ಫುಕೆಟ್‌ಗೆ ವಿಮಾನದಲ್ಲಿ ಪರಾರಿಯಾಗಿದ್ದರು. ಪೊಲೀಸರ ಹೇಳಿಕೆಯ ಪ್ರಕಾರ, ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರು ಡಿಸೆಂಬರ್ 7ರಂದು ಬೆಳಿಗ್ಗೆ 5.30ಕ್ಕೆ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಫುಕೆಟ್‌ಗೆ ಪಲಾಯನ ಮಾಡಿದರು.
ಗೋವಾ ನೈಟ್‌ಕ್ಲಬ್ ಬೆಂಕಿ ಅವಘಡದ ತನಿಖೆಯ ಭಾಗವಾಗಿ, ಪೊಲೀಸರು ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಅನ್ನು ಸಹ ಹೊರಡಿಸಿದ್ದಾರೆ. ಈ ನೋಟಿಸ್ ದೆಹಲಿಯ ಜಿಟಿಬಿ ನಗರದಲ್ಲಿರುವ ಅವರ ನಿವಾಸವನ್ನು ತಲುಪಿದೆ. ಆದರೆ ಮನೆಗೆ ಬೀಗ ಹಾಕಲಾಗಿತ್ತು. ಈ ಮಧ್ಯೆ ಗೋವಾ ಪೊಲೀಸರು ಲುಥ್ರಾ ಸಹೋದರರು ಮತ್ತು ಅವರ ಸಹಚರರನ್ನು ಪತ್ತೆಹಚ್ಚಲು ದೆಹಲಿಯಲ್ಲಿ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯದ ಲುಥ್ರಾ ಸಹೋದರರ ಮುಖ್ಯ ಕ್ಲಬ್ ಆದ ರೋಮಿಯೋ ಲೇನ್ ವಾಗೇಟರ್ ಅನ್ನು ಕೆಡವಲು ಆದೇಶ ನೀಡಿದ್ದಾರೆ. ಸುರಕ್ಷತಾ ಉಲ್ಲಂಘನೆಗಳು ಮತ್ತು ಕ್ಲಬ್ ಅಗ್ನಿಶಾಮಕ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂಬ ಆರೋಪದ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




