ರಾಜ್ಯ ಸರ್ಕಾರಗಳಿಗೆ ಸಿಗುವ ತೆರಿಗೆಯಲ್ಲಿ ಬಹುಪಾಲು ಮದ್ಯ ಮಾರಾಟದಿಂದ ಅಬಕಾರಿ ಇಲಾಖೆ ಮೂಲಕವಾಗಿ ಬರುತ್ತದೆ ಎಂಬುದು ಗೊತ್ತಿರುವ ಸತ್ಯ. ಅನೇಕ ಬಾರಿ ಮದ್ಯದ ಬೆಲೆ ಏರಿಕೆ, ಇಳಿಕೆ ನುಡುವೆ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಕಡಿಮೆ ಬೆಲೆಗೆ ಪ್ರಿಮಿಯಂ ಮದ್ಯ ಸಿಗುವಂತೆ ಮಾಡಲು ಮುಂದಾಗಿದೆ.
ಈ ಮೂಲಕ ಇದೇ ಆಕ್ಟೋಬರ್ ತಿಂಗಳಿನಿಂದ ಮದ್ಯ ಮಾರಾಟದಿಂದ ಅತ್ಯಧಿಕ ಆದಾಯ ಗಳಿಕೆಗೆ ಪ್ಲಾನ್ ಮಾಡಿಕೊಂಡಿದೆ.
ಹೌದು, ರಾಜ್ಯದಲ್ಲಿ ಹೊಸ ಮದ್ಯ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಮೂಲಕ ಅಕ್ಟೋಬರ್ 12ರಿಂದಲೇ ಅತೀ ಕಡಿಮೆ ಅಂದರೆ ಬರೀ 99 ರೂಪಾಯಿಗೆ ಉತ್ತಮ ಗುಣಮಟ್ಟದ ಮದ್ಯೆ ನೀಡಲು ಮುಂದಾಗಿದೆ. ಪ್ರೀಮಿಯಂ ಬ್ರ್ಯಾಂಡ್ ಎಣ್ಣೆಗೆ ಬರ್ಜರಿ ರಿಯಾಯಿತಿ ಸಹ ಸಿಗುತ್ತಿದೆ. ಇಷ್ಟು ಕಡಿಮೆ ಬೆಲೆಗೆ ಈ ರಾಜ್ಯ ಹೊರತುಪಡಿಸಿದರೆ ಬೇರೆಲ್ಲೂ ಗುಣಮಟ್ಟದ ಎಣ್ಣೆಯ ಫುಲ್ ಬಾಟಲ್ ಸಿಗುವುದಿಲ್ಲ ಎನ್ನಲಾಗಿದೆ.
ವಾರ್ಷಿಕ ಅತ್ಯಧಿಕ ಆದಾಯ ನಿರೀಕ್ಷೆ
ಅಷ್ಟಕ್ಕೂ ಈ ಹೊಸ ಮದ್ಯ ನೀತಿ ಜಾರಿಗೆ ಬರುತ್ತಿರುವುದು ನೆರೆಯ ಆಂಧ್ರಪ್ರದೇಶದಲ್ಲಿ ಎಂಬುದು ವಿಶೇಷ. ಅಲ್ಲಿ ಮದ್ಯದ ಬಾಟಲಿಯ ಬೆಲೆ ಕೇವಲ 99 ರೂ. ನೀಡಲು ಸರ್ಕಾರ ತಿರ್ಮಾನಿಸಿದೆ. ಮದ್ಯ ನೀತಿ ಜಾರಿಗೆ ಬರುತ್ತಿದ್ದಂತೆ ಕಡಿಮೆ ಬೆಲೆಗೆ ಲಿಕ್ಕರ್ ಮಾರಾಟ ಶುರುವಾಗಲಿದೆ. ಇದರಿಂದಾಗಿ ಈ ವರ್ಷ ರಾಜ್ಯದ ಆದಾಯದಲ್ಲಿ 5,500 ಕೋಟಿ ರೂಪಾಯಿ ಏರಿಕೆ ಕಾಣಬಹುದು ಎಂದು ಅಂದಾಜಿಸಲಾಗಿದೆ.
ಹೊಸ ನೀತಿ ತರುವ ಮೂಲಕ ಕಡಿಮೆ ಹಣವಿರುವ ಮದ್ಯಪ್ರಿಯರಿಗೂ ನಕಲಿ ಅಥವಾ ನಕಲಿ ಮದ್ಯವನ್ನು ಸೇವಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಅವರಿಗೆ ಇಷ್ಟು ಕಡಿಮೆ ದರಕ್ಕೆ ಗುಣಮಟ್ಟದ ಎಣ್ಣೆ ಒದಗಿಸಿದಂತಾಗುತ್ತದೆ. ಪ್ರೀಮಿಯಂತ ಸೇರಿದಂತೆ ಬಹುತೇಕ ದೊಡ್ಡ ಮತ್ತು ಗುಣಮಟ್ಟದ ಬ್ರ್ಯಾಂಡ್ಗಳು ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಎಂದು ಆಂಧ್ರ ಅಬಕಾರಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
3,736 ಚಿಲ್ಲರೆ ಅಂಗಡಿಗಳ ಖಾಸಗೀಕರಣ
ಹೊಸ ನೀತಿಯಿಂದಾಗಿ ಖಾಸಗಿ ಚಿಲ್ಲರೆ ವ್ಯಾಪಾರ ಉತ್ತೇಜಿಸಲಾಗುವುದು. ರಾಜ್ಯದಾದ್ಯಂತ 3,736 ಚಿಲ್ಲರೆ ಮದ್ಯದ ಅಂಗಡಿಗಳನ್ನು ಖಾಸಗೀಕರಣ ಮಾಡಿ ಪರವಾನಗಿ ಶುಲ್ಕದ ಮೂಲಕ ಅತ್ಯಧಿಕ ಆದಾಯ ಗಳಿಕೆಗೆ ಆಂಧ್ರ ಪ್ರದೇಶ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಸದ್ಯ ಕಡಿಮೆ ಬೆಲೆಗೆ ಮದ್ಯ ಮಾರಾಟ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದೆ.
ಇನ್ನೂ ಸರ್ಕಾರದ ಈ ಹೊಸ ಮದ್ಯ ನೀತಿಯು ಎರಡು ವರ್ಷಗಳ ಅವಧಿಗೆ ಸಿಮೀತವಾಗಿ ಜಾರಿಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಮೇಲಿನ ಎಲ್ಲ ಅಂಶಗಳ ಕಾರಣದಿಂದ ಈ ನೀತಿಗೆ ಮಿಶ್ರ ಪ್ರತಿಕ್ರಿಯೆ, ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವು ಆರ್ಥಿಕ, ರಾಜಕೀಯ ತಜ್ಞರು ಈ ನೀತಿ ದೋಷಪೂರಿತ ಅಂತಲೂ ಹೇಳಿದ್ದಾರೆ. ಹಾಲಿ ಬೆಲೆಗೆ ಮದ್ಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಕಡಿಮೆ ಬೆಲೆಗೆ ಮದ್ಯರ ನೀಡಿದರೆ, ಅನೇಕ ಕುಟುಂಬಗಳು ಹಾಳಾಗುತ್ತವೆ. ಸಾರ್ವಜನಿಕ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.