ತುರುವೇಕೆರೆ : ಸಿ.ಟಿ.ರವಿ ಯವರಂತಹ ಕೆಟ್ಟ ಮನಸ್ಥಿತಿ ಇರುವವರು ವಿಧಾನ ಪರಿಷತ್ನಲ್ಲಿ ಇರಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಸ್ತಿಗೊಂಡನಹಳ್ಳಿ ದೇವರಾಜ್ ತಿಳಿಸಿದರು. ಅವರು ಕಾಂಗ್ರೆಸ್ ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಓರ್ವ ಹೆಣ್ಣುಮಗಳು ಎಂಬ ಮನೋಭಾವವೂ ಇಲ್ಲದೇ ಮಹಿಳೆಯರನ್ನು ಕುರಿತು ಆಡಿರುವ ಮಾತು ಹೆಣ್ಣು ಕುಲಕ್ಕೆ ಅವಮಾನ ಮಾಡಿದಂತೆ ಆಗಿದೆ. ಮೇಧಾವಿಗಳ ಚಿಂತಕರ ಕೂಟವಾಗಿರುವ ವಿಧಾನ ಪರಿಷತ್ನಿಂದ ಸಿ.ಟಿ.ರವಿಯರವನ್ನು ಕೂಡಲೇ ವಜಾಗೊಳಿಸಬೇಕೆಂದು ರಾಜೀನಾಮೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ. ನ್ಯಾಯಾಲಯದ ಆದೇಶದ ಮೇರೆಗೆ ಸಿ.ಟಿ.ರವಿಯವರನ್ನು ಬಿಡುಗಡೆಗೊಳಿಸಿದ ವೇಳೆ ಬಿಜೆಪಿ ಕಾರ್ಯಕರ್ತರು ವಿಜೃಂಭಿಸಿದ ರೀತಿ ನಾಚಿಕೆಗೇಡು. ಹಿಂದೂ ಪರ ಎಂದು ಹೇಳುವ ಬಿಜೆಪಿ ಓರ್ವ ಮಹಿಳೆಯನ್ನು ಅವಮಾನಿಸಿರುವುದು ಎಷ್ಟು ಸರಿ ಎಂದು ದೇವರಾಜು ಪ್ರಶ್ನಿಸಿದರು.
ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯ್ಯಕ್ಷ ಕೊಳಾಲ ನಾಗರಾಜು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮೀತ್ ಶಾ ಆಡಿರುವ ಮಾತು ದೇಶಕ್ಕೇ ಅವಮಾನ ಮಾಡಿದಂತೆ. ಅಮೀತ್ ಶಾ ಓರ್ವ ಜವಾಬ್ದಾರಿಯುತ ಸಚಿವರಾಗಿದ್ದು ಡಾ.ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿರುವುದು ಅವರ ಮನಸ್ಥಿತಿಯನ್ನು ಬಿಂಬಿಸಿದೆ. ಹಾಗಾಗಿ ಬಿಜೆಪಿ ಪಕ್ಷದಿಂದ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಪಟ್ಟಣ ಪಂಚಾಯ್ತಿ ಸದಸ್ಯ ಯಜಮಾನ್ ಮಹೇಶ್, ಮಾಜಿ ಅಧ್ಯಕ್ಷ ಶಶಿಶೇಖರ್, ಅಫ್ಜಲ್, ಕೊಂಡಜ್ಜಿ ಶಿವಕುಮಾರ್, ಗವಿರಂಗಪ್ಪ, ನಂಜುAಡಪ್ಪ, ಬೇವಿನಹಳ್ಳಿ ಬಸವರಾಜು, ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.