ಚಿಯಾ ಸೀಡ್ಸ್ ಸೇವನೆಯಿಂದ ಮೂಲವ್ಯಾಧಿಯನ್ನು ಕಡಿಮೆ ಮಾಡಬಹುದೇ…

ಚಿಯಾ ಸೀಡ್ಸ್ ಸೇವನೆಯಿಂದ ಮೂಲವ್ಯಾಧಿಯನ್ನು ಕಡಿಮೆ ಮಾಡಬಹುದೇ…

ಚಿಯಾ ಸೀಡ್ಸ್: ಮೂಲವ್ಯಾಧಿ ಕಡಿಮೆ ಮಾಡುವ ಸಲಹೆ

ಚಿಯಾ ಬೀಜಗಳ   ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಅದರಲ್ಲಿಯೂ ವಿಶೇಷವಾಗಿ, ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಬೆಳಿಗ್ಗೆ ನೆನೆಸಿಟ್ಟ ಚಿಯಾ ಬೀಜಗಳನ್ನು ಸೇವನೆ ಮಾಡುವುದರಿಂದ ಆರೋಗ್ಯವಾಗಿರಬಹುದು ಅಷ್ಟೇ ಅಲ್ಲ, ಅನಾರೋಗ್ಯದಿಂದ ದೂರವಿರಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿದ್ದು ಕುಳಿತುಕೊಂಡು ಮಾಡುವ ಕೆಲಸ ಹೆಚ್ಚಾಗಿದೆ. ಈ ರೀತಿಯ ಅಭ್ಯಾಸ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಈ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು, ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಈಗಿನ ದಿನಮಾನದಲ್ಲಿ ಕುಳಿತು ಮಾಡುವ ಕಚೇರಿ ಕೆಲಸಗಳೇ ಹೆಚ್ಚಾಗುತ್ತಿದ್ದು, ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿ ಸಮಸ್ಯೆಗಳು ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಒಮ್ಮೆ ಮೂಲವ್ಯಾಧಿ ಪ್ರಾರಂಭವಾದರೆ, ಅವು ಸುಲಭವಾಗಿ ಕಡಿಮೆಯಾಗುವುದಿಲ್ಲ. ಬಹುತೇಕ ಜನರು ನೇರವಾಗಿ ಶಸ್ತ್ರಚಿಕಿತ್ಸೆಗೆ ಹೋಗುತ್ತಾರೆ. ಈ ರೀತಿ ಸಮಸ್ಯೆ ಬರಬಾರದು ಅಥವಾ ನೀವು ಈಗಾಗಲೇ ಮಲಬದ್ಧತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈಗಲೇ ಅವುಗಳಿಂದ ಪರಿಹಾರ ಕಂಡುಕೊಳ್ಳುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ಇದು ನಿಮ್ಮ ಕೈ ಮೀರಿ ಹೋಗುತ್ತದೆ. ಇವುಗಳಿಗೆ ವಿವಿಧ ರೀತಿಯ ಔಷಧಿ ಮಾಡುವ ಬದಲು ಚಿಯಾ ಸೀಡ್ಸ್ ಬಳಕೆ ಮಾಡಬಹುದು.

ಚಿಯಾ ಸೀಡ್ಸ್ ಪ್ರಯೋಜನ:

ಪ್ರತಿನಿತ್ಯ ಚಿಯಾ ಸೀಡ್ಸ್ ಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಅಷ್ಟು ಮಾತ್ರವಲ್ಲ, ನೀವು ನಿಯಮಿತವಾಗಿ ಚಿಯಾ ಸೀಡ್ಸ್ ಗಳನ್ನು ಸೇವಿಸುತ್ತಿದ್ದರೆ, ಎಂದಿಗೂ ಜೀರ್ಣಕಾರಿ ಅಸ್ವಸ್ಥತೆಗಳಿಂದ ಬಳಲುವ ಅಗತ್ಯವಿರುವುದಿಲ್ಲ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜದ ನೀರನ್ನು ಕುಡಿಯುವುದರಿಂದ ಇತರ ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಇದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಬೇಡಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *