ಮಾಗಡಿ : ಚಾಲಕನ ನಿಯಂತ್ರಣ ತಪ್ಪಿ, ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂರು ಮಂದಿ ಮೃತ ಪಟ್ಟಿದ್ದು ಒಬ್ಬರು ಗಾಯಗೊಂಡಿರುವ ಘಟನೆ ಮಾಗಡಿ ತಾಲೂಕಿನ ರಾಷ್ಟ್ರೀಯಹೆದ್ದಾರಿ 75 ರ ಭದ್ರಾಪುರ ಗೇಟ್ ಸಂಬವಿಸಿದೆ.
ಬೆOಗಳೂರಿನ ಬಾಗಲುಗುಂಟೆ ಬಳಿಯ ಹಾವನೂರು ಬಡಾವಣೆ ನಿವಾಸಿ, ನಂಜುOಡಪ್ಪ (55) ಚಾಲಕ, ತಾಯಿ ಭದ್ರಮ್ಮ (7೦), ಪತ್ನಿ ಶಾರದ (47) ಮೃತ ವ್ಯಕ್ತಿಗಳು. ಕುಸುಮ (21) ಗಾಯಾಳು.
ಯಡಿಯೂರ್ ಬಳಿಯ ಹುಲಿವಾಹನ ಗ್ರಾಮದಲ್ಲಿ ಶ್ರೀ ಮುನ್ನೇಶ್ವರ ಸ್ವಾಮಿ ದೇವಾಲಯಕ್ಕೆ ಪೂಜೆಗೆ ಮುಗಿಸಿಕೊಂಡು ಸೆ.೧೭ರಂದು ಸಂಜೆ ೫ ಗಂಟೆ ವೇಳೆಯಲ್ಲ ವಾಪಾಸ್ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗ ಮದ್ಯದ ರಾ.ಹೆದ್ದಾರಿ ೭೫ ಭದ್ರಾಪುರ ಕ್ರಾಸ್ ಬಳಿ ಚಾಲಕ ನಂಜುOಡಪ್ಪನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ಚಾಲಕ ನಂಜುOಡಪ್ಪ, ತಾಯಿ ಭದ್ರಮ್ಮ, ಪತ್ನಿ ಶಾರದ ಸ್ಥಳದಲ್ಲೇ ಮೃತ ಪಟ್ಟಿದ್ದು ಪುತ್ರಿ ಕುಸುಮ ಗಂಭೀರವಾಗಿ ಗಾಯಗೊಂಡಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.ಕುದೂರು ಸಂಚಾರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿ ಶಾಮಕ ಸಿಬ್ಬಂದಿ ಬೇಟಿ: ಪಿತೃಪಕ್ಷದ ಮುನ್ನ ದಿನದ ಪೂಜೆಗಾಗಿ ತಮ್ಮ ಸ್ವಗ್ರಾಮ ಕುಣಿಗಲ್ ತಾಲ್ಲೂಕಿನ ಹುಲಿವಾನಕ್ಕೆ ತೆರಳಿದ್ದರು. ತಮ್ಮ ಜಮೀನಿನಲ್ಲಿ ನಿರ್ಮಾಣವಾಗಿದ್ದ ಮುನೇಶ್ವರನಿಗೆ ಪೂಜೆ ಮಾಡಿ ವಾಪಸ್ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಪಘಾತದ ಬಳಿಕ ಕಾರು ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮೃತ ದೇಹಗಳು ಕಾರಿನ ಒಳಗೆ ಸಿಲುಕಿಕೊಂಡಿದ್ದವು. ಬಳಿಕ ನೆಲಮಂಗಲ ಅಗ್ನಿಶಾಮಕ ತುರ್ತು ಸೇವೆಗಳ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮೃತದೆಹಗಳನ್ನ ಹೊರಗೆ ತೆಗೆದರು. ಐಜಿಪಿ ಬೇಟಿ: ಹೆದ್ದಾರಿಯಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿದ್ದ ಹಿನ್ನಲೆ ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್, ರಾಮನಗರ ಪೊಲೀಸ್ ವರಿಷ್ಠಾಧಿಕಾ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಪರಿಶೀಲನೆ ನಡೆಸಿದ್ದಾರೆ.