ಮಾರಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಖರೀದಿಸುವಾಗ ಎಚ್ಚರವಾಗಿರಿ

ಮಾರಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ

ಮುಂಬೈ: ಬೆಳ್ಳುಳ್ಳಿ (Garlic) ಸಿಪ್ಪೆ ಸುಲಿಯುತ್ತಿರುವಾಗ ನಕಲಿ ಬೆಳ್ಳುಳ್ಳಿ ಎಂದು ಗೊತ್ತಾಗಿರುವ ಘಟನೆಯೊಂದು ಮಹಾರಾಷ್ಟ್ರದ (Maharashtra)  ಅಕೋಲಾ ಜಿಲ್ಲೆಯಲ್ಲಿ (Akola District)  ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ತುಂಬಾ ಗಟ್ಟಿಯಾಗಿರುವ ಅನುಭವವಾಗಿದ್ದು, ಒಳಗಡೆ ನೋಡಿದಾಗ ಸಿಮೆಂಟ್ (Cement) ಕಂಡುಬಂದಿದೆ

ದೇಶದಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ದರ ೩೦೦-೩೫೦ ರೂ.ಗೆ ಏರಿಕೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಸಿಮೆಂಟ್‌ನಿಂದ ತಯಾರಾದ ಬೆಳ್ಳುಳ್ಳಿ ಮಾರಾಟವಾಗಿರುವ ಘಟನೆಗಳು ಪತ್ತೆಯಾಗಿವೆ. ನಿಜವಾದ ಬೆಳ್ಳುಳ್ಳಿ ರೀತಿಯಲ್ಲಿ ಸಿಮೆಂಟ್‌ನಿಂದ ಬೆಳ್ಳುಳ್ಳಿ (Cement Garlic) ತಯಾರಿಸಿ, ನಂತರ ಅದಕ್ಕೆ ಬಿಳಿ ಬಣ್ಣವನ್ನು ಲೇಪಿಸುತ್ತಾರೆ

ಅಸಲಿ ಬೆಳ್ಳುಳ್ಳಿಯ ಜೊತೆಗೆ ನಕಲಿ ಬೆಳ್ಳುಳ್ಳಿಯನ್ನು ಸೇರಿಸಿ, ತೂಕ ಹೆಚ್ಚಿಸುವ ಮೂಲಕ ವ್ಯಾಪಾರಿಗಳನ್ನು ವಂಚನೆ ಮಾಡಲಾಗುತ್ತಿದೆ. ನಕಲಿ ಬೆಳ್ಳುಳ್ಳಿ ಒಡೆದಾಗ ಅದರಲ್ಲಿ ಸಿಮೆಂಟ್ ಪುಡಿ ಉದುರುತ್ತಿವೆ

Leave a Reply

Your email address will not be published. Required fields are marked *