ಚಾಮರಾಜನಗರ || ಬಂಡೀಪುರದಲ್ಲಿ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ

ಚಾಮರಾಜನಗರ || ಬಂಡೀಪುರದಲ್ಲಿ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ

ಚಾಮರಾಜನಗರ : ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚೆಲ್ಲಾಟ ಆಡಿದ್ದ ಆರೋಪಿಗೆ ಅರಣ್ಯ ಇಲಾಖೆ 25 ಸಾವಿರ ರೂಪಾಯಿ ದಂಡ ವಿಧಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಮುಚ್ಚಳಿಕೆ ಬರೆಸಿಕೊಂಡಿದೆ.

ಗುಂಡ್ಲುಪೇಟೆಯ ಶಾಹುಲ್ ಹಮೀದ್ ಎಂಬವರು 25 ಸಾವಿರ ರೂ. ದಂಡ ಕಟ್ಟಿದ್ದಾರೆ. ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಮುಂದೆ ಫೋಟೋಗಾಗಿ ಹುಚ್ಚಾಟ ಮೆರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗುಂಡ್ಲುಪೇಟೆ-ಊಟಿ ಹೆದ್ದಾರಿ ಹಾದುಹೋಗುವ ಬಂಡೀಪುರದಲ್ಲಿ ಕಾಡಾನೆ ಮುಂದೆ ಕಿರುಚಾಡಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ರಸ್ತೆಗೆ ಬಂದ ಕಾಡಾನೆ ಕಂಡು ಫೋಟೋ ತೆಗೆಸಿಕೊಂಡು ಹಾ.., ಹೂ.. ಎಂದು ಕಿರುಚಾಡಿ ಕೀಟಲೆ ಮಾಡಿದ್ದರು. ಕಾಡಾನೆ ಎದುರು ಹುಚ್ಚಾಟ ಮೆರೆದ ಯುವಕನನ್ನು ಬಂಧಿಸಬೇಕೆಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಆಗ್ರಹಿಸಿದ್ದರು.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆಯು 25 ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ದಂಡ ಪಾವತಿಸಿದ ಶಾಹುಲ್ ಹಮೀದ್ ವಿಡಿಯೋದಲ್ಲಿ ಮಾತನಾಡಿದ್ದು, ”ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವಾಪ್ತಿಯಲ್ಲಿ ಊಟಿಗೆ ಹೋಗುವಾಗ ಆನೆ ನಾನು ಮುಂದೆ ಫೋಟೊ ಹಾಗೂ ವಿಡಿಯೋಗಳನ್ನು ಕ್ಲಿಕ್ಕಿಸಿದ್ದು, ಇದಕ್ಕಾಗಿ 25 ಸಾವಿರ ರೂ. ದಂಡ ಕಟ್ಟಿದ್ದೇನೆ. ಈ ರಾಷ್ಟ್ರೀಯ ಉದ್ಯಾನವನ ಪರಿಸರದಲ್ಲಿ ಪ್ಲಾಸ್ಟಿಕ್ ಎಸೆಯುವುದು, ವಾಹನ ನಿಲ್ಲಿಸುವುದು ಹಾಗೂ ವಿಡಿಯೋ, ಫೋಟೊ ಸೆರೆಹಿಡಿಯುವುದು ತಪ್ಪಾಗಿದೆ. ಹೀಗಾಗಿ, ಅಂತಹ ತಪ್ಪುಗಳನ್ನು ಯಾರೂ ಮಾಡಬಾರದು” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *