ಚಾಮರಾಜನಗರ || ಚುಮು..ಚುಮು ಚಳಿ, ಮಂಜು, ಅಚ್ಚಹಸಿರಿನ ನಡುವೆ ಸ್ವರ್ಗದ ಅನುಭವ ನೀಡುವ ಅದ್ಭುತ ತಾಣಗಳು

ಚಾಮರಾಜನಗರ || ಚುಮು..ಚುಮು ಚಳಿ, ಮಂಜು, ಅಚ್ಚಹಸಿರಿನ ನಡುವೆ ಸ್ವರ್ಗದ ಅನುಭವ ನೀಡುವ ಅದ್ಭುತ ತಾಣಗಳು

Chamarajanagar travel Guide: ಚಳಿಗಾಲ ಬಂತೆಂದರೆ ಸಾಕು ಬೆಂಗಳೂರಿನ ಸಮೀಪವಿರುವ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು ಮಂಜಿನ ಜೊತೆ, ಅಚ್ಚಹಸಿರಿನ ಹೊದಿಕೆಯನ್ನು ಹೊದ್ದಿರುತ್ತವೆ. ಈ ವೇಳೆ ಇಲ್ಲಿನ ತಾಣಗಳು ಸ್ವರ್ಗದಂತಹ ಅನುಭವವನ್ನು ನೀಡುತ್ತವೆ. ಹಾಗಾದರೆ ಇಲ್ಲಿ ಯಾವೆಲ್ಲ ಪ್ರವಾಸಿ ತಾಣಗಳನ್ನು ನೋಡಬಹುದು ಹಾಗೂ ಮಾರ್ಗಗಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಚಳಿ ಅಂದರೆ ಸಾಕು ಸಾಮಾನ್ಯವಾಗಿ ಜನರು ಮನೆಗಳಲ್ಲಿಯೇ ಸಮಯ ಕಳೆಯುವುದನ್ನು ನಾವು ನೋಡಿದ್ದೇವೆ. ಆದರೆ, ಇನ್ನು ಕೆಲವರು ಈ ಸಮಯವೇ ಸೂಕ್ತ ಎಂದು ಹೆಚ್ಚು ಮಂಜು ಬೀಳುವ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಪ್ರಮುಖವಾಗಿ ಮಂಜು ಕವಿದ ವಾತಾವರಣವಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸ ಮಾಡಿದರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ.

ನವೆಂಬರ್‌ನಿಂದ ಫೆಬ್ರವರಿವರೆಗೂ ಚಾಮರಾಜನಗರದಲ್ಲಿನ ಈ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಹಾಟ್‌ಸ್ಪಾಟ್‌ ಆಗಿವೆ. ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳ ಸೊಬಗನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಆಗಮಿಸುತ್ತಲೇ ಇರುತ್ತಾರೆ. ಮಂಜು ಮುಚ್ಚಿದ ವಾತಾವರಣದ ಜೊತೆ ಅಚ್ಚಹಸಿರನಿಂದ ಕೂಡಿರುವ ಇಲ್ಲಿನ ಸ್ವರ್ಗದಂತಿರುವ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪವಾಸಿಗರು ಆಗಮಿಸುತ್ತಲೇ ಇರುತ್ತಾರೆ.

ಅಚ್ಚಹಸಿರಿನಿಂದ ಕಂಗೊಳಿಸುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇದೀಗ ಎಲ್ಲಿ ನೋಡಿದರೂ ಮಂಜಿನ ಮಯವಾಗಿದೆ. ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆದರೂ ಕೂಡ ಈ ಮಂಜಿನ ದೃಶ್ಯವನ್ನು ನೋಡಲೆಂದೇ ಕಷ್ಟಪಟ್ಟಾದರೂ ಆಗಮಿಸಿ ಇಷ್ಟಪಟ್ಟು ಸಮಿಯುತ್ತಾರೆ. ಇದೀಗ ಜಿಲ್ಲಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಬೆಳಗ್ಗೆ 8 ರಿಂದ 9 ಆದರೂ ಮಂಜು ಕವಿದೇ ಇರುತ್ತದೆ.

ಹಿಮವದ್‌ ಗೋಪಾಲಸ್ವಾಮಿ ಬೆಟ್ಟ: ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟವಂತೂ ಹಸಿರಿನ ಜೊತೆ ಮಂಜಿನ ಹೊದಿಕೆ ಹೊದ್ದಿರುತ್ತದೆ. ಬೆಳಗ್ಗೆ 9 ಗಂಟೆ ಆದರೂ ಮಂಜು ಮುಸುಕಿದ ವಾತಾವರಣ ಇರುತ್ತದೆ. ಇಲ್ಲಿನ ಈ ಅದ್ಭುತ ವಾತಾವರಣ ಮನಸಿಗೆ ಇಂಪು ನೀಡುತ್ತಲೇ ಇರುತ್ತದೆ. ಇದು ಬೆಂಗಳೂರಿನಿಂದ ಸುಮಾರು 220 ಕಿ.ಮೀ. ಆದರೆ ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ.

Leave a Reply

Your email address will not be published. Required fields are marked *