ಚಾಮರಾಜನಗರ: ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳನ್ನ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಚಾಮರಾಜನಗರ ಜಿಲ್ಲೆಗಿದೆ. ಇದೀಗ ಹೊಸ ಆನೆ ಕ್ಯಾಂಪ್ ತೆರೆಯುವ ಮೂಲಕ ಪ್ರವಾಸಿಗರಿಗೆ ಹೊಸ ಟಚ್ ನೀಡಲು ಅರಣ್ಯಾಧಿಕಾರಿಗಳು ಮುಂದಾಗಿರುವುದು ಗೊತ್ತಿರುವ ವಿಷಯ. ಆದರೆ ವರ್ಷ ಕಳೆದರೂ ವೀಕ್ಷಣೆಗೆ ಇನ್ನು ಆನೆ ಬಿಡಾರ ಸಿದ್ಧವಾಗಿಲ್ಲ. ಹೀಗಾಗಿ ಪ್ರವಾಸಿಗರು ಅರಣ್ಯ ಸಿಬ್ಬಂದಿ ವಿರುದ್ಧ ಭಾರೀ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

ಬೂದಿ ಪಡಗ ಆನೆ ಕ್ಯಾಂಪ್ ಕಳೆದ ವರ್ಷ ಜುಲೈ 30 ರಂದು ಪ್ರವಾಸಿಗರಿಗೆ ತೆರೆಯಲಿದೆ ಎಂದು ಸುದ್ದಿಯಾಗಿತ್ತು. ಆದರೆ ಆ ಸುದ್ದಿ ಇದೀಗ ಸುಳ್ಳಾಗಿದ್ದು, ಆನೆ ಬಿಡಾರ ಸಂಪೂರ್ಣವಾಗಿದ್ದರು ಸಚಿವರ ಅನುಮತಿ ಸಿಕ್ಕಿಲ್ಲ ಅನ್ನೋ ಒಂದೇ ಕಾರಣಕ್ಕೆ ಒಂದೊಳ್ಳೆ ಕೆಲಸ ನೆಲೆಗುದಿಗೆ ಬಿದ್ದಿದ್ದು ನಿಜಕ್ಕೂ ದುರಂತವೇ ಸರಿ.