ಕಲಬುರಗಿ : ಸರ್ಕಾರದಿಂದ ಮತ್ತು ಸಂಬOಧಪಟ್ಟ ವಿಶ್ವವಿದ್ಯಾಲಯದಿಂದ ಯಾವುದೇ ಪರವಾನಿಗೆ ಪಡೆಯದೆ ನಕಲಿ ಕಾಲೇಜು ತೆರೆದು ವಿದ್ಯಾರ್ಥಿಳಿಗೆ ಮೋಸ ಮಾಡಿದ ಆರೋಪಿಗಳಿಗೆ ಇಲ್ಲಿನ 4ನೇ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು 1೦ ಸಾವಿರ ದಂಡ ವಿಧಿಸಿದೆ.
ಆರೋಪಿಗಳಾದ ಬಿ.ಶ್ಯಾಮಸುಂದರ, ಪ್ರವೀಣ್ ಕುಮಾರ್ ಮತ್ತು ಸುರೇಶಕುಮಾರ ಶಿಕ್ಷೆಗೆ ಗುರಿಯಾದವರು.
ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅರಳಿ ಅರಕೇಡ್ ಕಟ್ಟಡದ ಮೊದಲನೇ ಮಹಡಿ ಬಾಡಿಗೆ ಪಡೆದು ಆರೋಪಿಗಳು 2008ರಲ್ಲಿ ಗುಪ್ತಾ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲೋಜಿ ಕ್ಯಾಲಿಫೋರ್ನಿಯಾ ಹೆಸರಿನಲ್ಲಿ ಅನಧಿಕೃತ ಕಾಲೇಜು ಆರಂಭಿಸಲಾಗಿತ್ತು, ಕಾಲೇಜಿನಲ್ಲಿ ಪ್ರವೇಶ ಪಡೆದರೆ ಕ್ಯಾಂಪಸ್ ಸೆಲೆಕ್ಷನ್ ಮತ್ತು ಮುಂದಿನ ಭವಿಷ್ಯ ಖಚಿತ ಎಂದು ಸ್ಥಳಿಯ ಟಿ.ವಿ.ಚಾನೆಲ್ ಮತ್ತು ಪಾಂಪ್ಲೇಟ್ಸ್ ಮುಖಾಂತರ ಪ್ರಚಾರ ಮಾಡಿದ್ದರು. ಪೂರ್ತಿ ಕೋರ್ಸಿಗೆ 330 ಲಕ್ಷ, 5 ಸಾವಿರ ಪ್ರವೇಶ ಶುಲ್ಕ, ಮೊದಲನೇ ಸೆಮಿಸ್ಟರ್ 75 ಸಾವಿರ ಶುಲ್ಕ ಸೇರಿ ೮೦ ಸಾವಿರರೂ ಬ್ಯಾಂಕುಗಳಿAದ ಸಾಲಸೌಲಭ್ಯ ಕೊಡಿಸಿಸುವುದಾಗಿ ಹೇಳಿ ೩೩ ವಿದ್ಯಾರ್ಥಿಗಳ ಪ್ರವೇಶ ಪಡೆದ ಪಡೆದಿದ್ದರು.
ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಲ್ಯಾಪ್‌ಟಾಪ್ ನೀಡಿದ್ದರು. ಜೊತೆಗೆ ಬ್ಲೇಜರ್ ಸರಬರಾಜು ಮಾಡಿ ಒಂದು ವರ್ಷದ ಕೋರ್ಸ್ ನಡೆಸಿ ಪರೀಕ್ಷಾ ಕಾಲಕ್ಕೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹಾಲ್ ಟಿಕೆಟ್ ನೀಡದೆ ಮೋಸ ಮಾಡಿದ್ದರು. ಇದರಿಂದ ಸಂಶಯ ಬಂದು ಹಣ ಮಾಡುವ ಉದ್ದೇಶದಿಂದ ಕಾಲೇಜು ತೆರೆದು ಪ್ರತಿ ವಿದ್ಯಾರ್ಥಿಳಿಂದ 80 ಸಾವಿರ ರೂ. ಪಡೆಯಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಬಿ.ಎಸ್.ಮಾಲಗತ್ತಿ, ಮಹಿಳಾ ಮುಖ್ಯಪೇದೆ ಶೈಲಜಾ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ೪ನೇ ನ್ಯಾಯಾಲಯದ ನ್ಯಾಯಾಧೀಶರಾದ ಸ್ನೇಹಾ ಪಾಟೀಲ ಅವರು ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಸಂತೋಷಕುಮಾರ ಎಸ್.ಲೋಖಂಡೆ ಅವರು ವಾದ ಮಂಡಿಸಿದ್ದರು.