ಬೆಂಗಳೂರು : ಒಕ್ಕಲಿಗ ಶಾಸಕರ ಟೀಂ ನನ್ನ ಭೇಟಿ ಮಾಡಿದ್ರು. ಒಕ್ಕಲಿಗರು ಮತ್ತು ಶೆಡ್ಯೂಲ್ ಕ್ಯಾಸ್ಟ್ ಮೇಲೆ ಶಾಸಕ ಮುನಿರತ್ನ ಕೆಟ್ಟ ಪದ ಬಳಸಿದ್ದಾರೆ ಅಂತ ಹೇಳಿದ್ರು. ನೀವು ಸರ್ಕಾರ ಕಠಿಣ ಕ್ರಮ ತಗೊಬೇಕು ಅಂತ ಒತ್ತಾಯಿಸಿದ್ರು ಎಂದು ಒಕ್ಕಲಿಗ ಸಮುದಾಯದ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರ ಬಗ್ಗೆ ಸಿಎಂ ಸಿದ್ದಾರಾಮಯ್ಯ ಹೇಳಿಕೆ ನೀಡಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಮೇಲೆ ಕೆಟ್ಟದಾಗಿ ಮಾತಾಡಿದ್ದಾರೆ. ಮಾಜಿ ಕಾರ್ಪೊರೇಟರ್ ವೇಲು ನಾಯಕರ್ ಕಂಪ್ಲೆಂಟ್ ಕೊಟ್ಟಿದ್ದಾನೆ. ಪೊಲೀಸರು FIR ದಾಖಲಿಸಿ ಅರೆಸ್ಟ್ ಮಾಡಿದ್ದಾರೆ. ಕಾನೂನು ಪ್ರಕಾರ ಮಾಡಿದ್ದೀವಿ, ದ್ವೇಷ ರಾಜಕಾರಣ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚನ್ನಾರೆಡ್ಡಿ ಪ್ರಕರಣಕ್ಕೂ ಇದಕ್ಕೂ ಕಂಪೇರ್ ಮಾಡೋಕೆ ಆಗಲ್ಲ. ಚನ್ನಾರೆಡ್ಡಿ ಮಾತಾಡಿರೋದು ಸಾಕ್ಷಿ ಇದ್ಯಾ, ಡೆತ್ ನೋಟ್ ನಲ್ಲಿ ಸಾಕ್ಷಿ ಇದ್ಯಾ..? ಪರಶುರಾಮ್ ಹೇಳಿದ್ದಾನಾ, ಅವರ ಹೆಂಡ್ತಿ ಹೇಳಿರೋದು. ಪರಶುರಾಮ್ ಆರೋಪ ಮಾಡಿಲ್ಲ, ಸಾಕ್ಷಿ ಏನು ಇಲ್ಲ. ಪೊಲೀಸ್ ನವರಿಗೆ ಕಾನೂನು ಮೂಲಕ ಮಾಡಿ ಅಂತ ಹೇಳಿದ್ದೀವಿ. ಮುನಿರತ್ನ ಅವರ ಕೇಸ್ ನಲ್ಲಿ ಸಾಕ್ಷಿ ಇದೆ, ಪೊಲೀಸ್ ನವರು ಕ್ರಮ ತಗೊಂಡಿದ್ದಾರೆ ಎಂದು ಹೇಳಿದ್ದಾರೆ.