ಚಿಕ್ಕಬಳ್ಳಾಪುರ: ಅತೀ ವೇಗವಾಗಿ ಬಂದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ಗೆ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಚಿಂತಾಮಣಿ ನಗರದ ಕೋಲಾರ ವೃತ್ತದಲ್ಲಿ ನಡೆದಿದೆ.
ಸಾವನ್ನಪ್ಪಿರುವ ಮಾಡಿಕೆರೆ ಗ್ರಾಮದ ಶಿವಾನಂದ (62) ಹಾಗೂ ಕೋಲಾರ ತಾಲೂಕಿನ ವೆಲಗಬುರ್ರೆ ಗ್ರಾಮದ ಶಾಂತಕುಮಾರ್ (48) ಇಬ್ಬರೂ ಹೋಟೆಲ್ ಸಿಬ್ಬಂದಿ.
ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.