ಚಿಕ್ಕೋಡಿ || ಮನೆ ಮುಂದೆ ಬಂದ Crocodile: ಹರಸಾಹಸ ಪಟ್ಟು ಕಟ್ಟಿ ಹಾಕಿದ Youths

ಚಿಕ್ಕೋಡಿ || ಮನೆ ಮುಂದೆ ಬಂದ Crocodile: ಹರಸಾಹಸ ಪಟ್ಟು ಕಟ್ಟಿ ಹಾಕಿದ Youths

ಚಿಕ್ಕೋಡಿ: ತೋಟದ ಮನೆ ಬಳಿ ಬಂದ ಬೃಹತ್ ಗಾತ್ರದ ಮೊಸಳೆಯನ್ನು ಯುವಕರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ.

ಸುಟ್ಟಟ್ಟಿ ಗ್ರಾಮದ ಆಲಗೂರ ತೋಟದ ಮನೆ ಬಳಿ 15 ಅಡಿ ಉದ್ದದ ಮೊಸಳೆ ದಿಢೀರ್ ಪ್ರತ್ಯಕ್ಷವಾಗಿ, ಆತಂಕ ಸೃಷ್ಟಿಸಿದೆ. ನಂತರ ನಾಲ್ಕೈದು ಯುವಕರು ಸೇರಿಕೊಂಡು ಮೊಸಳೆಯನ್ನು ಕೃಷಿ ಜಮೀನಿನ ಕಡೆ ಕೊಂಡೊಯ್ದು ಹಗ್ಗದಲ್ಲಿ ಕಟ್ಟಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಥಣಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಮೊಸಳೆಯನ್ನು ಹುಕ್ಕೇರಿ ಜಲಾನಯನ ಪ್ರದೇಶಕ್ಕೆ ರವಾನಿಸಿದರು.

ಹರಸಾಹಸಪಟ್ಟು ಮೊಸಳೆ ಸೆರೆ ಹಿಡಿದ ಯುವಕರು: ನಾಲ್ಕೈದು ಯುವಕರು ದೊಣ್ಣೆಗಳ ಮೂಲಕ ಹಗ್ಗವನ್ನು ಕತ್ತಿಗೆ ಹಾಕಲು ಯತ್ನಿಸಿದಾಗ, ಮೊಸಳೆ ರೊಚ್ಚಿಗೆದ್ದು ಪ್ರತಿರೋಧವೊಡ್ಡಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದೆ. ಆಗ ಯುವಕರು ಎದೆಗುಂದದೆ ಹರಸಹಾಸಪಟ್ಟು ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೇಸಿಗೆಯಿಂದ ಕೃಷ್ಣ ನದಿ ಸೇರಿ ಹಳ್ಳಕೊಳ್ಳಗಳು ಬತ್ತಿರುವುದರಿಂದ ಮೊಸಳೆಗಳು ತೋಟ, ಗದ್ದೆಗಳಿಗೆ ನುಗ್ಗುತ್ತಿವೆ. ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *