ಶಿವಮೊಗ್ಗ: ತಮ್ಮ ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಕ್ಕಳಿಬ್ಬರು ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ಕುಂಸಿಯ ಕುಂಬೇಶ್ವರ್ ಬೀದಿಯಲ್ಲಿ ವಾಸು ಅಲಿಯಾಸ್ ವಸಂತ್ (35) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಂಸಿ ಪಟ್ಟಣದ ಕುಂಬೇಶ್ವರ ಬೀದಿಯಿಂದ ಎಕೆ ಕಾಲನಿಯ ವರೆಗೆ ಮಚ್ಚಿನಿಂದ ಅಟ್ಟಾಡಿಸಿಕೊಂಡು ಆಕಾಶ್ ಮತ್ತು ಹರೀಶ್ ಸಹೋದರಿಬ್ಬರು ಸೇರಿ ನಿನ್ನೆ (ಜೂನ್ 29) ವಸಂತನನ್ನು ಹತ್ಯೆ ಮಾಡಿದ್ದಾರೆ. ಮೃತ ಮಲ್ಲೆಶಪ್ಪನ ಎರಡನೇ ಪತ್ನಿ ಜೊತೆ ವಸಂತ ಅನೈತಿಕ ಸಂಬಂಧ ಹೊಂದಿದ್ದು, ನಿನ್ನೆ ಕುಡಿದ ಆಕೆಯ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಈ ವಿಚಾರದಿಂದ ಮೃತ ಮಲ್ಲೇಶಪ್ಪನ ಹಿರಿಯ ಹೆಂಡತಿ ಮಗ ಹರೀಶ್ ಮತ್ತು ಕಿರಿಯ ಹೆಂಡತಿಯ ಪುತ್ರ ಆಕಾಶ್ ಸೇರಿಕೊಂಡು ವಸಂತ್ ನನ್ನು ಹೊಡೆದು ಕೊಂದಿದ್ದಾರೆ.

ಮಲ್ಲೇಶಪ್ಪ ಎನ್ನುವರಿಗೆ ಇಬ್ಬರು ಹೆಂಡಿತಿಯರು.ಮಲ್ಲೇಶಪ್ಪ ಮತ್ತು ಆತನ ಮೊದಲ ಪತ್ನಿ ಮೃತಪಟ್ಟಿದ್ದಾರೆ. ಬಳಿಕ ಮಲ್ಲೇಶಪ್ಪ ಸಹ ಸಾವನ್ನಪ್ಪಿದ್ದಾನೆ. ಬಳಿಕ ಮೃತ ಮಲ್ಲೇಶಪ್ಪನ 2ನೇ ಹೆಂಡ್ತಿಯೊಂದಿಗೆ ಕೊಲೆಯಾದ ವಸಂತ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದ. ವಯಸ್ಸಿನಲ್ಲಿ ತನಗಿಂತ ಮಹಿಳೆ ದೊಡ್ಡವಳಾಗಿದ್ದರೂ ಸಹ ವಸಂತ್ ಲವ್ವಿಡವ್ವಿ ಇಟ್ಟುಕೊಂಡಿದ್ದ. ಆದರೆ, ನಿನ್ನೆ ಕುಡಿದು ಹೋಗಿ ಮಹಿಳೆ ಮನೆ ಬಳಿ ಕೂಗಾಡಿ ಗಲಾಟೆ ಮಾಡಿದ್ದ. ಈ ವಿಚಾರದಿಂದ ಮೃತ ಮಲ್ಲೇಶಪ್ಪನ ಮೊದಲ ಹೆಂಡ್ತಿ ಮಗ ಹರೀಶ್ ಮತ್ 2ನೇ ಪತ್ನಿಯ ಪುತ್ರ ಆಕಾಶ್ ಸಹೋದರರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ತಾಯಿ ಜೊತೆ ಕಿರಕ್ ಮಾಡಿದ್ದ ವಸಂತನನ್ನ ಹತ್ಯೆಗೆ ಸ್ಕೇಚ್ ಹಾಕಿದ್ದರು. ಅದರಂತೆ ನಿನ್ನೆ ರಾತ್ರಿ ಆತನಿಗೆ ಮದ್ಯ ಕುಡಿಸಿ ಕುಂಸಿ ಪಟ್ಟಣದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.