ಬೆಂಗಳೂರು: ಆರ್ಸಿಬಿ ಆಡಿದ 17 ಸೀಸನ್ಗಳಲ್ಲೂ ಒಂದೇ ಒಂದು ಐಪಿಎಲ್ ಟ್ರೋಫಿ ಎತ್ತಿರಲಿಲ್ಲ. ಆದರೆ ಈ ಬಾರಿ ಗೆದ್ದು ಬೀಗುವ ಮೂಲಕ ಚಾಂಪಿಯನ್ಸ್ ಆದ ಹಿನ್ನೆಲೆ ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸರ್ಕಾರದ ನಿರ್ಲರ್ಕ್ಷ್ಯ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಹಾಗೆಯೇ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರ್ಘಟನೆ ಟ್ರೋಫಿ ಗೆಲುವಿನ ಸಂಭ್ರಮವನ್ನೇ ಕಸಿದುಕೊಂಡಿದೆ. ಕಾಲ್ತುಳಿತದ ಘಟನೆಯಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಸರ್ಕಾರದ ನಿರ್ಲಕ್ಷವೇ ಕಾರಣ. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಭದ್ರತೆ ಕೈಗೊಂಡು ಕಾರ್ಯಕ್ರಮ ಆಯೋಜನೆ ಮಾಡಿದ್ದರೆ ಇದು ನಡೆಯುತ್ತಲೇ ಇರಲಿಲ್ಲ ಎಂದು ವಿಪಕ್ಷಗಳ ನಾಯಕರು ಕೆಂಡಕಾರುತ್ತಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ವಿರಾಟ್ ಕೊಹ್ಲಿ ಅವರು ಫೋನ್ ಮಾಡಿ ಇವತ್ತೇ ಬಂದುಬಿಡುತ್ತೇನೆ ಕಾರ್ಯಕ್ರಮ ಮಾಡಿ ಅಥಾ ಹೇಳಿದ್ದಾರಾ? ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಬೇಜವಾಬ್ದಾರಿತನದಿಂದಲೇ ಸಂಭ್ರಮಾಚರಣೆ ಶೋಕಾಚರಣೆ ಆಗಿ ಬದಲಾಯಿಗಿಬಿಟ್ಟಿತು. ಸಎಂ ಸಿದ್ದರಾಮಯ್ಯ ಬರೀ ಒರಟು ವ್ಯಕ್ತಿ ಅಂದುಕೊಂಡಿದ್ದೆ. ನೀವು ಸಂವೇದನೆ ಇಲ್ಲದ ನಿರ್ಭಾವುಕ ಮನುಷ್ಯ ಎಂಬುದು ಬುಧವಾರ ಗೊತ್ತಾಯ್ತು. ಅವರೊಬ್ಬ ನಿರ್ಭಾವುಕ ನಿರ್ಲಜ್ಜ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಅವರ ಮೊಮ್ಮಗ, ಸಚಿವರು ಮತ್ತು ಅಧಿಕಾರಿಗಳ ಮಕ್ಕಳ ಫೋಟೋ ಗ್ರಾಫ್ ಆಟೋಗ್ರಾಫ್ಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಭದ್ರತೆ ಬಗ್ಗೆ ಹೇಳಿದ್ದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಈಗ ಎಲ್ಲಿ ಹೋದರು? ಯೋಗಿ ಆದಿತ್ಯನಾಥ್ 60 ಕೋಟಿ ಜನರನ್ನು ಸಂಭಾಳಿಸಿದ್ದಾರೆ. ನೀವು 60,000 ಜನರನ್ನು ಸಂಭಾಳಿಸಳಾಗಲಿಲ್ಲ. ಕಾಂಗ್ರೆಸ್ಗೆ ಏನಾಗಿದೆಯೋ? ಆರ್ಸಿಬಿ ಗೆಲುವಿನಲ್ಲಿ ತಮ್ಮ ಪ್ರಚಾರ ಪಡೆದುಕೊಳ್ಳಲು ಮುಗ್ಧ ಜನರನ್ನು ಬಲಿ ಕೊಟ್ಟಿತು ಎಂದು ಅಸಮಾಧಾನ ಹೊರಹಾಕಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಲು, ಗ್ಲಾಸ್ ಹಾಕಿಕೊಂಡು ಅದೇನು ಪೋಸ್ ಕೊಡುವುದುದೇ ಒಂದು ದೊಡ್ಡ ಕೆಲಸವಾಗಿತ್ತು. ಇದನ್ನು ಬಿಟ್ಟರೆ, ವೀಕ್ಷಣೆಗೆ ಬಂದಿದ್ದ ಸಾಮಾನ್ಯ ಜನರ ರಕ್ಷಣೆಗೆಂದು ಯಾವ ವ್ಯವಸ್ಥೆಯೂ ಆಗಿರಲಿಲ್ಲ. ವಿರಾಟ್ ಕೊಹ್ಲಿ ಫೋನ್ ಮಾಡಿ ಇವತ್ತೇ ಬಂದು ಬಿಡುತ್ತೇನೆ ಕಾರ್ಯಕ್ರಮ ಮಾಡಿ ಎಂತಾ ಹೇಳಿದ್ದರಾ? ಮರುದಿನವೇ ಕಾರ್ಯಕ್ರಮ ಮಾಡುವ ಅಗತ್ಯವೇನಿತ್ತು? ರೋಡ್ ಶೋ ಮಾಡಿದ್ದರೆ ಲಕ್ಷಾಂತರ ಜನ ನೋಡುತ್ತಿದ್ದರು. ಹೀಗೆ ಮಾಡಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದರು. ಮಂತ್ರಿಗಳು ಹಾಗೂ ಸಿಎಂ ನಿಮ್ಮ ಮೊಮ್ಮಗನಿಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿದ್ದೀರಾ? ಎಂದು ಪ್ರಶ್ನೆ ಕೇಳುವ ಮೂಲಕ ಆಕ್ರೋಶ ವ್ತಕ್ತಪಡಿಸಿದರು.